Published : Apr 13, 2025, 07:13 AM ISTUpdated : Apr 13, 2025, 11:08 PM IST

Karnataka News Live: ಚೆಂಡು ಎತ್ತಿಕೊಳ್ಳಲು ಹೋದಾಗ ದುರಂತ; ಲಿಫ್ಟ್ ಬಿದ್ದು ವ್ಯಕ್ತಿ ದುರ್ಮರ್ಣ!

ಸಾರಾಂಶ

ಬೆಂಗಳೂರು: ಚೈತ್ರಮಾಸದ ಶುದ್ಧ ಪೌರ್ಣಿಮೆ ರಾತ್ರಿ ಬೆಳದಿಂಗಳ ಬೆಳಕಿನಲ್ಲಿ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವವನ್ನು ಶನಿವಾರ ಮಧ್ಯರಾತ್ರಿ ಗೋವಿಂದಾ... ಗೋವಿಂದಾ... ನಾಮಸ್ಮರಣೆಯೊಂದಿಗೆ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ಶನಿವಾರ ಮಧ್ಯರಾತ್ರಿ ನಗರ್ತರಪೇಟೆಯಲ್ಲಿರುವ ಧರ್ಮರಾಯಸ್ವಾಮಿ ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಅದರ ಹಿಂದೆಯೇ ಧರ್ಮರಾಯಸ್ವಾಮಿ ಗರ್ಭ ಗುಡಿಯಿಂದ ದ್ರೌಪದಿ ದೇವಿ ಮಲ್ಲಿಗೆ ಹೂವಿನ ಕರಗ ಸಾಗಿತು. ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗವಾಗಿದ್ದು, ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿ ಎಂದರೆ ಅದು ಮುಸ್ಲಿಮರು. ಜಾತಿಗಣತಿ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 75.25 ಲಕ್ಷ ಮಂದಿ ಮುಸ್ಲಿಮರಿದ್ದಾರೆ. 

Karnataka News Live: ಚೆಂಡು ಎತ್ತಿಕೊಳ್ಳಲು ಹೋದಾಗ ದುರಂತ; ಲಿಫ್ಟ್ ಬಿದ್ದು ವ್ಯಕ್ತಿ ದುರ್ಮರ್ಣ!

11:08 PM (IST) Apr 13

ಚೆಂಡು ಎತ್ತಿಕೊಳ್ಳಲು ಹೋದಾಗ ದುರಂತ; ಲಿಫ್ಟ್ ಬಿದ್ದು ವ್ಯಕ್ತಿ ದುರ್ಮರ್ಣ!

ಹೈದರಾಬಾದ್‌ನ ಸೂರಾರಾಮ್‌ನಲ್ಲಿ ಲಿಫ್ಟ್ ದುರಂತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆಯು ನಗರದಲ್ಲಿ ಆತಂಕವನ್ನುಂಟು ಮಾಡಿದೆ ಮತ್ತು ಲಿಫ್ಟ್ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೂರ್ತಿ ಓದಿ

10:36 PM (IST) Apr 13

ಬ್ಯಾಟಿಂಗ್ ವೇಳೆ ಎದೆನೋವಿನಿಂದ ಬಳಲಿದ್ರಾ ಕೊಹ್ಲಿ? ಎದೆಬಡಿತ ಪರೀಕ್ಷಿಸಲು ಸೂಚಿಸಿ ಆತಂಕ ಸೃಷ್ಟಿ

ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ಎದೆನೋವು ಕಾಣಿಸಿಕೊಂಡಿತ್ತಾ? ಈ ಪ್ರಶ್ನೆ ಉದ್ಭವಿಸಲು ಕಾರಣ, ಹಾಫ್ ಸೆಂಚುರಿ ಬೆನ್ನಲ್ಲೇ ಕೊಹ್ಲಿ, ಸಂಜು ಸ್ಯಾಮ್ಸನ್ ಬಳಿ ಎದಬಡಿತ ಪರೀಕ್ಷಿಸುವಂತೆ ಸೂಚಿಸಿದ್ದರೆ. ತಕ್ಷಣವೇ ಸ್ಯಾಮ್ಸನ್ ಕಾರ್ಯಪ್ರವೃತ್ತರಾದ ವಿಡಿಯೋ ಇದೀಗ ಅಭಿಮಾನಿಗಳ ಆತಂಕ ಹೆಚ್ಚಿಸಿದೆ.

ಪೂರ್ತಿ ಓದಿ

10:20 PM (IST) Apr 13

'ಬಾ ನಿನಗಾಗಿ ಮನೇಲಿ ಬಾರಕೋಲ ಇಟ್ಟೀನಿ'; ಸಿಸಿ ಪಾಟೀಲ್ ವಿರುದ್ಧ ಕಾಶೆಪ್ಪನವರ್ ವಾಗ್ದಾಳಿ!

ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಸಿ.ಸಿ.ಪಾಟೀಲಗೆ ತಿರುಗೇಟು ನೀಡಿದ್ದಾರೆ. ಪಂಚಮಸಾಲಿ ಸಮಾಜದ ಸಂಘಟನೆಗೆ ಕಾಶಪ್ಪನವರ ಕುಟುಂಬದ ಕೊಡುಗೆಯನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೂರ್ತಿ ಓದಿ

09:59 PM (IST) Apr 13

ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಯುತ್ತೆ; ಎಂಎಲ್ಸಿ ಸಲೀಂ ಅಹ್ಮದ್

ವಕ್ಫ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿ ಎಂಎಲ್‌ಸಿ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ರಾಜಕೀಯ ಉದ್ದೇಶದಿಂದ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿದ್ದಾರೆ. ಜಾತಿಗಣತಿ ವರದಿ ಬಗ್ಗೆ ಮಾತನಾಡಿದ್ದು, ಯಾವ ಸಮಾಜಕ್ಕೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.

ಪೂರ್ತಿ ಓದಿ

09:41 PM (IST) Apr 13

ಭಾರತೀಯರಿಗೆ ಸಂಕಷ್ಟ ತಂದಿಟ್ಟ ಟ್ರಂಪ್ ಸರ್ಕಾರದ ಹೊಸ ವೀಸಾ ನೀತಿ!

ಅಮೆರಿಕ ವೀಸಾ ಹೊಂದಿರುವ ಭಾರತೀಯರು ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು 14 ವರ್ಷ ಮೇಲ್ಪಟ್ಟ ಮಕ್ಕಳು ಮರು-ನೋಂದಣಿ ಮಾಡಿಕೊಳ್ಳಬೇಕು ಎಂದು ಟ್ರಂಪ್ ಸರ್ಕಾರ ಆದೇಶಿಸಿದೆ. EB-5 ವೀಸಾಗೆ ಕಟ್‌ಆಫ್ ದಿನಾಂಕ ಮುಂದೂಡಲ್ಪಟ್ಟಿದ್ದು, ಭಾರತೀಯ ವಲಸಿಗರಿಗೆ ತೊಂದರೆಯಾಗಲಿದೆ.

ಪೂರ್ತಿ ಓದಿ

09:28 PM (IST) Apr 13

ಸೋಪ್ ತುಂಡುಗಳು ಎಸೆಯುವ ಬದಲು ಹೀಗೆ ಮರುಬಳಕೆ ಮಾಡಬಹುದು!

ಉಳಿದ ಸೋಪ್ ತುಂಡುಗಳನ್ನು ಮರುಬಳಕೆ ಮಾಡಿ: ಸೋಪ್ ತುಂಡುಗಳನ್ನು ಎಸೆಯುವ ಬದಲು, ಅವುಗಳಿಂದ ಹೊಸ ಸೋಪ್, ಲಿಕ್ವಿಡ್ ಹ್ಯಾಂಡ್ ವಾಶ್, ಕ್ಲೀನಿಂಗ್ ಸ್ಪಾಂಜ್ ಮತ್ತು ಡ್ರಾಯರ್ ಫ್ರೆಶ್ನರ್ ತಯಾರಿಸಿ. ಈ ಸುಲಭ ವಿಧಾನಗಳು ನಿಮ್ಮ ಹಣವನ್ನು ಉಳಿಸುತ್ತವೆ ಮತ್ತು ಮನೆಯನ್ನು ಪರಿಮಳಯುಕ್ತವಾಗಿರಿಸುತ್ತವೆ!

ಪೂರ್ತಿ ಓದಿ

08:49 PM (IST) Apr 13

ಮನೆಗೆ ತಂದ ಟೊಮ್ಯಾಟೋ ಗರ್ಭಿಣಿ: ವೈರಲ್‌ ವಿಡಿಯೋ ನೋಡಿ ಫ್ರಿಜ್‌ ಬಳಿ ಓಡ್ತಿರೋ ನೆಟ್ಟಿಗರು!

ಮನೆಗೆ ಬಂದು ಕತ್ತರಿಸಿಟ್ಟ ಟೊಮ್ಯಾಟೊ ಗರ್ಭಿಣಿಯಾಗಿದೆ. ಇದೆಂಥ ಸುದ್ದಿ ಅಂತೀರಾ? ಜಾಲತಾಣದಲ್ಲಿ ವೈರಲ್‌ ಆಗ್ತಿರೋ ಈ ವಿಡಿಯೋ ಒಮ್ಮೆ ನೋಡಿಬಿಡಿ. 
 

ಪೂರ್ತಿ ಓದಿ

08:38 PM (IST) Apr 13

ಗರ್ಭದಲ್ಲಿರೋ ಮಗುವಿನ ಚಲನಚಲನ ಪರೀಕ್ಷೆಗೆ ಕಿತ್ತಳೆ ಜ್ಯೂಸ್‌! ಖ್ಯಾತ ವೈದ್ಯರು ಹೇಳೋದೇನು ಕೇಳಿ..

ಗರ್ಭ ಧರಿಸಿದ ಸಂದರ್ಭದಲ್ಲಿ ಮಗುವಿನ ಚಲನವಲನ ಸರಿಯಾಗಿದೆಯೇ ಎಂದು ಪರೀಕ್ಷಿಸಲು ಅಲ್ಟ್ರಾಸೌಂಡ್‌ ಸ್ಕ್ಯಾನ್‌ ಮಾಡುವ ಸಮಯದಲ್ಲಿ ಕಿತ್ತಳೆ ಹಣ್ಣಿನ ಜ್ಯೂಸ್‌ ಮಹತ್ವವೇನು? ಇಲ್ಲಿದೆ ಡಿಟೇಲ್ಸ್. 
 

ಪೂರ್ತಿ ಓದಿ

08:35 PM (IST) Apr 13

ಅತೀ ಹೆಚ್ಚು ಜನ ಡೌನ್ಲೋಡ್ ಮಾಡಿದ ಆ್ಯಪ್ ಇದು, ಇನ್‌ಸ್ಟಾಗ್ರಾಂ ಹಿಂದಿಕ್ಕಿ ನಂ.1

ಮಾರ್ಚ್ ತಿಂಗಳಲ್ಲಿ ಅತೀ ಹೆಚ್ಚು ಜನ ಡೌನ್ಲೋಡ್ ಮಾಡಿದ ಆ್ಯಪ್ ಯಾವುದು ಗೊತ್ತಾ? ಇನ್‌ಸ್ಟಾಗ್ರಾಂ ಸೇರಿದಂತೆ ಇತರ ಕೆಲ ಆ್ಯಪ್ ಹಿಂದಿಕ್ಕಿರುವ ಈ ಆ್ಯಪ್ ನಂ.1 ಡೌನ್ಲೋಡೆಡ್ ಆ್ಯಪ್ ಅನ್ನೋ ದಾಖಲೆ ಬರೆದಿದೆ.

ಪೂರ್ತಿ ಓದಿ

08:26 PM (IST) Apr 13

ಹುಬ್ಬಳ್ಳಿಯಲ್ಲಿ ಬಾಲಕಿ ಅತ್ಯಾಚಾರ ಕೊಲೆ: ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ!

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಆರೋಪಿಯನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಬಿಹಾರ ಮೂಲದ ರಕ್ಷಿತ ಕ್ರಾಂತಿ ಎಂಬಾತ ಗುಂಡೇಟಿಗೆ ಬಲಿಯಾಗಿದ್ದಾನೆ. ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿದ್ದಾರೆ.

ಪೂರ್ತಿ ಓದಿ

08:08 PM (IST) Apr 13

ಬಂಗಾಳ ಹೊಸ ಕಾಶ್ಮೀರವೇ? 'ದಿ ಕಾಶ್ಮೀರ್ ಫೈಲ್' ನಿರ್ದೇಶಕ ಸ್ಫೋಟಖ ಹೇಳಿಕೆ!

ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾಯಿದೆ ವಿರೋಧಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ವಿವೇಕ್ ಅಗ್ನಿಹೋತ್ರಿ ಅವರ ಹೇಳಿಕೆಗಳು ಮತ್ತು 'ದಿ ದೆಹಲಿ ಫೈಲ್ಸ್' ಚಿತ್ರದ ವಿವಾದವು ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಪೂರ್ತಿ ಓದಿ

07:48 PM (IST) Apr 13

ದಾವಣಗೆರೆ: ಪರಸಂಗದ ಪತ್ನಿಯ ಹತ್ಯೆ, ಕೊಲೆಗಾರ ಶ್ವಾನದ ಬಲೆಗೆ!

ದಾವಣಗೆರೆಯಲ್ಲಿ ನಡೆದ ಯುವಕನ ಕೊಲೆ ಪ್ರಕರಣವು ಪರಸಂಗದ ಪುರಾಣದಿಂದ ನಡೆದಿದೆ. ಜಯಪ್ಪ ಎಂಬಾತ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನಾದ ಶಿವಕುಮಾರನನ್ನು ಕೊಲೆ ಮಾಡಿದ್ದಾನೆ.

ಪೂರ್ತಿ ಓದಿ

07:25 PM (IST) Apr 13

ಬಾದಾಮಿಯೊಂದಿಗೆ ಇವುಗಳನ್ನು ಎಂದಿಗೂ ತಿನ್ನಬೇಡಿ!

ಬಾದಾಮಿಯೊಂದಿಗೆ ಏನು ತಿನ್ನಬೇಕು: ಬಾದಾಮಿ ಆರೋಗ್ಯಕ್ಕೆ ಒಳ್ಳೆಯದು, ಆದರೆ ಕೆಲವು ವಸ್ತುಗಳೊಂದಿಗೆ ತಿನ್ನುವುದು ಹಾನಿಕಾರಕ. ಉಪ್ಪು, ಕೆಫೀನ್, ಸಕ್ಕರೆ ಮತ್ತು ಹುಳಿ ಹಣ್ಣುಗಳನ್ನು ಬಾದಾಮಿಯೊಂದಿಗೆ ತಿನ್ನಬೇಡಿ.

ಪೂರ್ತಿ ಓದಿ

07:09 PM (IST) Apr 13

ಶಾಲೆಗೆ ಹೋಗುವ ಮಕ್ಕಳನ್ನ ಶಾಖದಿಂದ ರಕ್ಷಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್

ಬೇಸಿಗೆಯಲ್ಲಿ ಶಾಲೆಗೆ ಹೋಗುವ ಮಕ್ಕಳ ಆರೋಗ್ಯ ಕಾಪಾಡುವುದು ಮುಖ್ಯ. ಹಗುರ ಬಟ್ಟೆ, ಸಾಕಷ್ಟು ನೀರು, ಪೌಷ್ಟಿಕ ಆಹಾರ, ಸನ್‌ಸ್ಕ್ರೀನ್ ಬಳಸಿ ಶಾಖದಿಂದ ರಕ್ಷಿಸಿ.

ಪೂರ್ತಿ ಓದಿ

07:02 PM (IST) Apr 13

ಸಿನಿಮಾ ಮಾಡ್ತಿದ್ದೀನಿ ಸಾಲದಲ್ಲಿ ಬದುಕುತ್ತಿದ್ದೀನಿ: ರವಿಚಂದ್ರನ್

ಅಜಯ್ ರಾವ್ ನಿರ್ಮಾಣದ ಯುದ್ಧಕಾಂಡ 2 ಸಿನಿಮಾ ಏಪ್ರಿಲ್ 18ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಪ್ರೆಸ್‌ಮೀಟ್‌ನಲ್ಲಿ ರವಿಚಂದ್ರನ್ ಭಾಗವಹಿಸಿ, ಅಜಯ್ ರಾವ್ ಅವರ ಪ್ರಯತ್ನವನ್ನು ಶ್ಲಾಘಿಸಿದರು ಮತ್ತು ಚಿತ್ರ ನೋಡಲು ಟಿಕೆಟ್ ಖರೀದಿಸಿದರು.

ಪೂರ್ತಿ ಓದಿ

06:57 PM (IST) Apr 13

ಬಾಗಲಕೋಟೆ: ನದಿಯಲ್ಲಿ ಮುಳುಗಿ ಯೋಧ ಸಹಿತ ಇಬ್ಬರು ಸಾವು!

ಬಾಗಲಕೋಟೆ ಜಿಲ್ಲೆಯ ಮಣ್ಣೇರಿಯಲ್ಲಿ ನದಿಗೆ ಸ್ನಾನಕ್ಕೆ ಹೋದ ಯುವಕ ಮುಳುಗುತ್ತಿದ್ದಾಗ ರಕ್ಷಿಸಲು ಹೋದ ಸೈನಿಕರಿಬ್ಬರೂ ಸಾವನ್ನಪ್ಪಿದ್ದಾರೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೂರ್ತಿ ಓದಿ

06:46 PM (IST) Apr 13

ತವರು ಆಗಿಬರ್ತಿಲ್ಲ, ಹೊರಗಡೆ ಯಾರನ್ನೂ ಬಿಡಲ್ಲ, ರಾಜಸ್ಥಾನ ಮಣಿಸಿದ ಆರ್‌ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಆರ್‌ಸಿಬಿ ಯಾವ ತಂಡ ಆದರೂ ಸರಿ ಸೋಲಿಸದೆ ಹಿಂದಿರುಗುವುದಿಲ್ಲ. ಇದೀಗ ರಾಜಸ್ಥಾನ ರಾಯಲ್ಸ್ ವಿರುದ್ಧವೂ ಭರ್ಜರಿ ಗೆಲುವು ದಾಖಲಿಸಿದೆ. 

ಪೂರ್ತಿ ಓದಿ

06:38 PM (IST) Apr 13

ತಮಿಳುನಾಡು ರಾಜ್ಯಪಾಲರಿಂದ 'ಜೈ ಶ್ರೀರಾಮ್' ಘೋಷಣೆ, ಭುಗಿಲೆದ್ದ ವಿವಾದ!

ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರು ಮಧುರೈನಲ್ಲಿ ವಿದ್ಯಾರ್ಥಿಗಳಿಗೆ 'ಜೈ ಶ್ರೀರಾಮ್' ಎಂದು ಪಠಿಸಲು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ಕಾಂಗ್ರೆಸ್ ಶಾಸಕರು ಇದನ್ನು ಖಂಡಿಸಿದ್ದು, ರಾಜ್ಯಪಾಲರು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪೂರ್ತಿ ಓದಿ

06:30 PM (IST) Apr 13

ನಶೆ ಏರಿಸಿದ ತಮನ್ನಾ ಭಾಟಿಯಾ ಡ್ಯಾನ್ಸ್, ಸ್ಟೆಪ್ಸ್ ಮರೆತು ಪೇಚಿಗೆ ಸಿಲುಕಿದ ಮಿಲ್ಕಿ ಬ್ಯೂಟಿ

ತಮನ್ನಾ ಭಾಟಿಯಾ ಐಟಂ ಸಾಂಗ್ ನಶಾ ಎಲ್ಲರ ಕಿಕ್ ಹೆಚ್ಚಿಸುತ್ತಿದೆ. ಆದರೆ ಈ ಡ್ಯಾನ್ಸ್ ಶೂಟಿಂಗ್ ವೇಳೆ ತಮನ್ನಾ ಸ್ಟೆಪ್ಸ್ ಮರೆತು ಪೇಚಿಗೆ ಸಿಲುಕಿದ ಘಟನೆ ನಡೆದಿದೆ. ಮಿಲ್ಕಿ ಬ್ಯೂಟಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ

06:30 PM (IST) Apr 13

ಹುಚ್ಚು ನಾಯಿ ಕಚ್ಚಿ 3 ವರ್ಷದ ಮಗು ಸಾವು: ನಾಯಿ ಕಚ್ಚಿದ್ರು ಚಿಕಿತ್ಸೆ ಪಡೆಯದ 10 ಮಕ್ಕಳು

ಉತ್ತರ ಪ್ರದೇಶದ ಅಲಿಗಢದಲ್ಲಿ ರೇಬಿಸ್ ಸೋಂಕಿತ ನಾಯಿ ಕಚ್ಚಿದ 3 ವರ್ಷದ ಮಗು ಸಾವನ್ನಪ್ಪಿದೆ. ನಾಯಿ ಕಚ್ಚಿದ 45 ದಿನಗಳ ನಂತರ ಮಗು ಮೃತಪಟ್ಟಿದೆ. ಇದೇ ನಾಯಿ 10 ಮಕ್ಕಳ ಮೇಲೆ ದಾಳಿ ಮಾಡಿದ್ದು, ಅವರಿಗೂ ಚಿಕಿತ್ಸೆ ನೀಡಿಲ್ಲ.

ಪೂರ್ತಿ ಓದಿ

06:15 PM (IST) Apr 13

ಕಲಬುರಗಿಯಲ್ಲಿ ಏಪ್ರಿಲ್ 16th ಬೃಹತ್ ಉದ್ಯೋಗ ಮೇಳ:ಸಾರಿಗೆ ವ್ಯವಸ್ಥೆ!

ಕಲಬುರಗಿಯಲ್ಲಿ ಏಪ್ರಿಲ್ 16 ರಂದು ನಡೆಯುವ ಉದ್ಯೋಗ ಮೇಳಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುವಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪೂರ್ತಿ ಓದಿ

06:04 PM (IST) Apr 13

ರಾಜ್ಯದ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿವೆ; ಕೆಜಿ ಬೋಪಯ್ಯ ಕಿಡಿ

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆ ವಿರುದ್ಧ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಆರೋಪಿಸಿದ್ದಾರೆ.

ಪೂರ್ತಿ ಓದಿ

05:49 PM (IST) Apr 13

ಟಚ್ ಆಯ್ತು ಅಂತ ಹೊಡೆಯಲು ಬಂದ ಕಾರು ಚಾಲಕ: ತಳ್ಳುಗಾಡಿಯವನ ಪವರ್‌ಫುಲ್ ಪಂಚ್‌ಗೆ ಶಾಕ್

ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಕಾರು ತಳ್ಳುಗಾಡಿಗೆ ತಗುಲಿತೆಂದು ತರಕಾರಿ ವ್ಯಾಪಾರಿಗೆ ಥಳಿಸಲು ಬಂದ ಕಾರು ಮಾಲೀಕನಿಗೆ ವ್ಯಾಪಾರಿಯೇ ತಿರುಗೇಟು ನೀಡಿದ್ದಾನೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಪೂರ್ತಿ ಓದಿ

05:28 PM (IST) Apr 13

ಮುರ್ಷಿದಾಬಾದ್‌: ಭುಗಿಲೆದ್ದ ಹಿಂಸಾಚಾರ, ಬಿಎಸ್‌ಎಫ್ ಮೇಲೆಯೇ ಗುಂಡಿನ ದಾಳಿ!

ಬಂಗಾಳ ಹಿಂಸಾಚಾರ: ಮುರ್ಷಿದಾಬಾದ್‌ನಲ್ಲಿ ವಕ್ಫ್ ಕಾನೂನು ವಿರೋಧಿಸಿ ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದೆ. ಧುಲಿಯಾನ್‌ನಲ್ಲಿ ಗುಂಡಿನ ದಾಳಿಯಲ್ಲಿ ಮಕ್ಕಳು ಗಾಯಗೊಂಡಿದ್ದಾರೆ ಮತ್ತು 150ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 

ಪೂರ್ತಿ ಓದಿ

05:26 PM (IST) Apr 13

ವಿದ್ಯುತ್ ಬೆಳಕಿನಲ್ಲಿ ಭಾರತ ಹೇಗೆ ಕಾಣಿಸುತ್ತಿದೆ? 4 ದೇಶದ ಫೋಟೋ ಕಳುಹಿಸಿದ ಬಾಹ್ಯಾಕಾಶ ಕೇಂದ್ರ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ಅಮರಿಕ, ಭಾರತ ಸೇರಿದಂತೆ ನಾಲ್ಕು ದೇಶಗಳು ರಾತ್ರಿ ವೇಳ ಹೇಗೆ ಕಾಣಿಸುತ್ತಿದೆ ಅನ್ನೋ ಫೋಟೋ ಸೆರೆ ಹಿಡಿದು ಕಳುಹಿಸಿದೆ. ವಿಶೇಷ ಅಂದರೆ ಈ ಪೈಕಿ ಭಾರತವೇ ಸೂಪರ್.

ಪೂರ್ತಿ ಓದಿ

05:20 PM (IST) Apr 13

ಬೆಂಗಳೂರು ಮಾರಕ ದಾಳಿ; RCB ನಾಲ್ಕನೇ ಗೆಲುವಿಗೆ ಬೇಕು ಕೇವಲ 174 ರನ್!

ರಾಜಸ್ಥಾನ ರಾಯಲ್ಸ್ ತಂಡವು ಆರ್​ಸಿಬಿ ವಿರುದ್ಧ ಮೊದಲು ಬ್ಯಾಟ್ ಮಾಡಿ 173 ರನ್​ಗಳ ಸವಾಲಿನ ಮೊತ್ತವನ್ನು ಕಲೆಹಾಕಿದೆ. ಯಶಸ್ವಿ ಜೈಸ್ವಾಲ್ ಅವರ ಅರ್ಧಶತಕ ಹಾಗೂ ಧೃವ್ ಜುರೆಲ್ ಅವರ ಅಜೇಯ ಇನ್ನಿಂಗ್ಸ್ ತಂಡಕ್ಕೆ ನೆರವಾಯಿತು.

ಪೂರ್ತಿ ಓದಿ

05:10 PM (IST) Apr 13

ಜಾತಿಗಣತಿ ವರದಿ: ಏನಿದೆ ಗೊತ್ತಿಲ್ಲ, ಓದಿ ಪ್ರತಿಕ್ರಿಯಿಸುವೆ: ಗೃಹಸಚಿವ

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜಾತಿಗಣತಿ ವರದಿ ಕುರಿತು ಮಹತ್ವದ ಹೇಳಿಕೆ ನೀಡಿದ್ದು, ವರದಿ ಸಂಪುಟದಲ್ಲಿ ಮಂಡನೆಯಾಗಿದ್ದು, ಏಪ್ರಿಲ್ 17 ರಂದು ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ವರದಿಯನ್ನು ಸರ್ಕಾರ ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು ಎಂದು ಹೇಳಿದ್ದಾರೆ.

ಪೂರ್ತಿ ಓದಿ

04:43 PM (IST) Apr 13

ಅಚಾನಕ್ ಆಗಿ ಕುಸಿದ ಕಟ್ಟಡದ ಗೋಡೆ: ಓರ್ವ ಸಾವು

ದೆಹಲಿಯ ಚಂದೇರ್ ವಿಹಾರ್‌ನಲ್ಲಿ 5 ಅಂತಸ್ತಿನ ಕಟ್ಟಡದ ಗೋಡೆ ಕುಸಿದು ಒಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಆಘಾತಕಾರಿ ದೃಶ್ಯ ವೈರಲ್ ಆಗಿದೆ.

ಪೂರ್ತಿ ಓದಿ

04:27 PM (IST) Apr 13

ಮುರ್ಷಿದಾಬಾದ್‌: ಹಿಂದೂ ಸಮುದಾಯ ಬಳಸುವ ನೀರಿಗೆ ವಿಷಪ್ರಾಶನ!?

ಮುರ್ಷಿದಾಬಾದ್ ಸುದ್ದಿ: ಮುರ್ಷಿದಾಬಾದ್‌ನ ಕೆಲವು ಪ್ರದೇಶಗಳಲ್ಲಿ ನೀರಿನ ಟ್ಯಾಂಕ್‌ಗಳಿಗೆ ವಿಷ ಬೆರೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಪೂರ್ತಿ ಓದಿ

04:20 PM (IST) Apr 13

ಬ್ಯಾಂಕ್ ಆಫ್ ಬರೋಡಾದಲ್ಲಿ ದೇಶದಾದ್ಯಂತ ಉದ್ಯೋಗಾವಕಾಶ!

ಬ್ಯಾಂಕ್ ಆಫ್ ಬರೋಡಾ 146 ವೃತ್ತಿಪರ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ. ಆಸಕ್ತರು ಏಪ್ರಿಲ್ 15, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

04:19 PM (IST) Apr 13

ಮಿಡ್ಲ್‌ ಕ್ಲಾಸ್‌ ಜನರಿಗೆ ಗುಡ್‌ ನ್ಯೂಸ್‌: 'ಮೊದ್ಲು ಮದ್ವೆಯಾಗಿ, ಆಮೇಲೆ ಹಣ ಕೊಡಿ’ ಆಫರ್‌!

ಮೊದಲು ದುಡ್ಡು ಪಡೆದು ಮದುವೆಯಾಗಿ, ಆಮೇಲೆ ನಿಧಾನವಾಗಿ ಹಣ ಪಾವತಿಸಿ ಎನ್ನುವ ಆಫರ್‌ ಇದೀಗ ಶುರುವಾಗಿದೆ. ಏನಿದು ಯೋಜನೆ? ಡಿಟೇಲ್ಸ್‌ ಇಲ್ಲಿದೆ. 
 

ಪೂರ್ತಿ ಓದಿ

03:51 PM (IST) Apr 13

ಹನುಮಾನ್ ಜಯಂತಿ ಮೆರವಣಿಗೆ ಮಸೀದಿ ಮುಂದೆ ಸಾಗುತ್ತಿದ್ದಂತೆ ಕಲ್ಲು ತೂರಾಟ: 9 ಜನರ ಬಂಧನ

ಮಧ್ಯಪ್ರದೇಶದ ಗುಣದಲ್ಲಿ ಹನುಮಾನ್ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ 9 ಜನರನ್ನು ಬಂಧಿಸಲಾಗಿದೆ ಮತ್ತು 25 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪೂರ್ತಿ ಓದಿ

03:51 PM (IST) Apr 13

ಭವ್ಯಾ ಗೌಡ ನನ್ನನ್ನು ಇಷ್ಟ ಪಡುವ ಹಾಗೆ ಮಾಡಿದ್ದು ಬಿಗ್ ಬಾಸ್ ಶೋ: ನಟ ತ್ರಿವಿಕ್ರಮ್‌

ಬಿಗ್‌ ಬಾಸ್‌ ತ್ರಿವಿಕ್ರಮ್‌ ಅವರು ಮುದ್ದು ಸೊಸೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಪೂರ್ತಿ ಓದಿ

03:49 PM (IST) Apr 13

ವಕ್ಫ್ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೆನ್ನಲ್ಲೇ ಕ್ರಮ, 30 ವರ್ಷ ಹಳೆ ಅಕ್ರಮ ಮದರಸ ನೆಲಸಮ

ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಮಸೂದೆ ಜಾರಿಗೂ ಮೊದಲೇ ಕ್ರಮ ಕೈಗೊಳ್ಳಲಾಗಿದೆ. 30 ವರ್ಷಗಳ ಹಳೇ ಅಕ್ರಮ ಮದರಸವನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.

ಪೂರ್ತಿ ಓದಿ

03:13 PM (IST) Apr 13

ಕೆಟ್ಟದಾಗಿ ಆಡಿ ಕ್ಯುರೇಟರ್‌ನ ದೂರುವುದು ತಪ್ಪು: ಕಾರ್ತಿಕ್‌ ಹೇಳಿಕೆ ಬಗ್ಗೆ ಕೆಎಸ್‌ಸಿಎ ಕಿಡಿ

ದಿನೇಶ್ ಕಾರ್ತಿಕ್ ಅವರ ಹೇಳಿಕೆಗೆ ಕೆಎಸ್‌ಸಿಎ ಅಸಮಾಧಾನ ವ್ಯಕ್ತಪಡಿಸಿದೆ. ಪಿಚ್ ಕ್ಯುರೇಟರ್ ದಶಕಗಳಿಂದ ಉತ್ತಮ ಪಿಚ್ ಸಿದ್ಧಪಡಿಸುತ್ತಿದ್ದಾರೆ ಎಂದು ಕೆಎಸ್‌ಸಿಎ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ ವಿರಾಟ್ ಕೊಹ್ಲಿ ಅವರು ರಜತ್ ಪಾಟೀದಾರ್ ಅವರ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪೂರ್ತಿ ಓದಿ

03:11 PM (IST) Apr 13

ಕದ್ದೋಗಿ ತಿಂಗಳಾದ್ರು ಗೊತ್ತೆ ಇಲ್ಲ: ಕೆಲಸದಾಕೆಯ ಯೂಟ್ಯೂಬ್‌ ರೀಲ್ಸ್‌ನಿಂದ ಸಿಕ್ತು ದೊಡ್ಡ ಸುಳಿವು

ಕುಟುಂಬವೊಂದಕ್ಕೆ ತಮ್ಮ ಮನೆಯಲ್ಲಿ ಚಿನ್ನ ಕದ್ದೋಗಿ ಆರು ತಿಂಗಳುಗಳೇ ಕಳೆದಿದ್ದರೂ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ, ಆದರೆ ಇತ್ತೀಚೆಗೆ ಅವರ ಹಳೆಯ ಕೆಲಸದಾಕೆಯ ಡಾನ್ಸ್ ವೀಡಿಯೋವೊಂದು ವೈರಲ್ ಆಗಿದ್ದು, ಆ ವೀಡಿಯೋ ಕಳವಿನ ಬಗ್ಗೆ ಸುಳಿವು ನೀಡಿದೆ.

ಪೂರ್ತಿ ಓದಿ

03:09 PM (IST) Apr 13

ಭಾರತೀಯ ರೈಲ್ವೆಯಲ್ಲಿ 9900 ಹುದ್ದೆಗಳ ನೇಮಕಾತಿ!

ಭಾರತೀಯ ರೈಲ್ವೆಯಲ್ಲಿ 9900 ಸಹಾಯಕ ಲೋಕೋ ಪೈಲಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10, 2025 ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪೂರ್ತಿ ಓದಿ

02:45 PM (IST) Apr 13

ನನ್ನ ಗೆಳತಿ ನನ್ನ ಗೆಳತಿ ಹಾಡಿನ ರಚನೆ-ಗಾಯಕ ಮಂಜುನಾಥ್ ಸಂಗಳದ ಹೃದಯಾಘಾತಕ್ಕೆ ಬಲಿ

ನನ್ನ ಗೆಳತಿ ನನ್ನ ಗೆಳತಿ, ನನ್ನ ನೋಡಿ ನೀ ನಗತಿ ಈ ಜಾನಪದ ಹಾಡು ಯಾರು ಕೇಳಿಲ್ಲ  ಹೇಳಿ. ಹಾಡು ರಚಿಸಿ ಅದ್ಭುತವಾಗಿ ಹಾಡಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಂಡ ಜಾನಪದ ಹಾಡು ರಚನೆಕಾರ, ಗಾಯಕ ಮಂಜುನಾಥ ಸಂಗಳದ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಪೂರ್ತಿ ಓದಿ

01:56 PM (IST) Apr 13

ರಾಜಸ್ಥಾನ ರಾಯಲ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿ 2 ಮಹತ್ವದ ಬದಲಾವಣೆ?

ಐಪಿಎಲ್‌ನಲ್ಲಿಂದು ಆರ್‌ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿವೆ. ಆರ್‌ಸಿಬಿ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹಸಿರು ಜೆರ್ಸಿಯಲ್ಲಿ ಆರ್‌ಸಿಬಿ ಗೆಲುವಿಗಾಗಿ ಹೋರಾಡಲಿದೆ.

ಪೂರ್ತಿ ಓದಿ

01:33 PM (IST) Apr 13

ಪ್ರವಾಸಿಗರು ಎಸೆದ ಕಸವನ್ನು ಅವರ ಕೈಯಿಂದಲೇ ತೆಗೆಸಿದ ಜನ : ವೀಡಿಯೋ ವೈರಲ್

ಗೋವಾದಲ್ಲಿ ಕಸ ಎಸೆದ ಪ್ರವಾಸಿಗರಿಗೆ ಸ್ಥಳೀಯರು ತಕ್ಕ ಪಾಠ ಕಲಿಸಿದ್ದಾರೆ. ಮದ್ಯದ ಬಾಟಲಿಗಳನ್ನು ರಸ್ತೆಯಲ್ಲಿ ಎಸೆದಿದ್ದಕ್ಕೆ ಸ್ಥಳೀಯರು ಅವರಿಂದಲೇ ಸ್ವಚ್ಛಗೊಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಓದಿ

More Trending News