'ಸಿದ್ದರಾಮಯ್ಯ ಅಲ್ಲ, 'ಕನ್ನಡರಾಮಯ್ಯ'; ಸಿಎಂಗೆ ಹೊಸ ಹೆಸರಿಟ್ಟ ಸಚಿವ ಶಿವರಾಜ ತಂಗಡಗಿ

By Ravi JanekalFirst Published Oct 5, 2024, 12:25 PM IST
Highlights

ಕನ್ನಡದ ಬಗ್ಗೆ ಅಪಾರ ಪ್ರೀತಿ ಕಾಳಜಿ ಹೊಂದಿದ ಸಿಎಂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡರಾಮಯ್ಯ ಎಂದು ಕರೆಯಬೇಕು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ರಾಯಚೂರು (ಅ.5): ಈ ವರ್ಷ ನವೆಂಬರ್ 1ರ ಒಳಗಾಗಿ 5 ಕಾರ್ಯಕ್ರಮಗಳನ್ನು ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ನುಡಿದರು.

ಇಂದು ರಾಯಚೂರು ಕೃಷಿ ವಿವಿ ಮೈದಾನದಲ್ಲಿ ನಡೆದ 'ಗೋಕಾಕ್ ಚಳವಳಿ ಹಿನ್ನೋಟ-ಮುನ್ನೋಟ' ಕಾರ್ಯಕ್ರಮವನ್ನುದ್ದೇಶಿಸಿ ಭಾಷಣ ಮಾಡಿದ ಸಚಿವರು, ಐದು ಕಾರ್ಯಕ್ರಮಗಳ ಪೈಕಿ ಮೊದಲ ಕಾರ್ಯಕ್ರಮ ಮೈಸೂರಿನಿಂದ ಶುರುವಾಯ್ತು. ಒಟ್ಟು ಮೈಸೂರಿನಲ್ಲಿ 15 ಕವಿಗೋಷ್ಟಿಗಳು ಮಾಡಿದ್ದೆವು. ಬಳಿಕ ಮಹಾರಾಷ್ಟ್ರದ ಗಡಿಭಾಗದಲ್ಲಿ ಯಶಸ್ವಿ ಕನ್ನಡ ಕಾರ್ಯಕ್ರಮ ಮಾಡಿದ್ದೆವು. ಇದೀಗ ಇಲ್ಲಿ ನಡೆಯುತ್ತಿರುವುದು 3ನೇ ಕಾರ್ಯಕ್ರಮವಾಗಿದೆ. ಕಲ್ಯಾಣ ಕರ್ನಾಟಕದ ಗಡಿ ಭಾಗವಾದ ರಾಯಚೂರಿನಲ್ಲಿ ಮಾಡಲು ತೀರ್ಮಾನ ಮಾಡುತ್ತಿದ್ದೇವೆ ಎಂದರು.

Latest Videos

ರಾಯಚೂರಲ್ಲಿ ಕಾರ್ಯಕ್ರಮ ನಡೆಸಲು ಕಾರಣ?

ರಾಯಚೂರಲ್ಲಿ ಕಾರ್ಯಕ್ರಮ ನಡೆಸಲು ಕಾರಣವೆಂದರೆ ಜಿಲ್ಲೆಯಲ್ಲಿ ಕನ್ನಡಕ್ಕಿಂತ ಬೇರೆಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇದೇ ಜಿಲ್ಲೆಯಲ್ಲಿ ಕಾರ್ಯಕ್ರಮ ನಡೆಸಲು ನಿರ್ಧಿರಿಸಿದೆವು. ಎಲ್ಲಾ ಭಾಷೆಯನ್ನ ಪ್ರೀತಿಸೋಣ, ಕನ್ನಡ ಮಾತನಾಡೋಣ, ಯುವಕರು ತಪ್ಪು ದಾರಿ ಹಿಡಿಯಬಾರದು ಎಂಬ ಕಾರಣದಿಂದ ಗೋಕಾಕ್ ಚಳವಳಿ ಹಿನ್ನೋಟ - ಮುನ್ನೋಟ ಕಾರ್ಯಕ್ರಮ ಮಾಡುತ್ತಿದ್ದೇವೆ.

ರಾಯಚೂರು: ಸ್ವಾಭಿಮಾನಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣರಾಯಚೂರು: ಸ್ವಾಭಿಮಾನಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಷಣ

ಗೋಕಾಕ್ ಹೋರಾಟಗಾರರಿಗೆ ಸನ್ಮಾನ:

ನ.1 ರಂದು 50 ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಕನ್ನಡ ಬಗ್ಗೆ ಚರ್ಚೆಯಾಗಲಿ ಅನ್ನೋ ದೃಷ್ಟಿ ನಮಗಿದೆ.. ಹೀಗಾಗಿ ರಾಜ್ಯದಲ್ಲಿ ಒಟ್ಟು ನಾಲ್ಕು ಕಡೆ ಕಾರ್ಯಕ್ರಮ ಮಾಡ್ತಾ ಇದ್ದೀವಿ. ಇಲ್ಲಿ ಗೋಕಾಕ್ ಹಿನ್ನೋಟ-ಮುನ್ನೋಟ ಕಾರ್ಯಕ್ರಮ ಮಾಡ್ತಾ ಇದ್ದೀವಿ. ಈ ಕಾರ್ಯಕ್ರಮದಲ್ಲಿ ಕನ್ನಡ ಚಳುವಳಿ ಉಗಮದ ಬಗ್ಗೆ ಜನರಿಗೆ ಪರಿಚಯಿಸುವ ಉದ್ದೇಶವಿದೆ. ಗೋಕಾಕ್ ಚಳುವಳಿಯಲ್ಲಿ ಭಾಗಿಯಾದ ಹೋರಾಟಗಾರರಿಗೆ ಸನ್ಮಾನ ಮಾಡುತ್ತೇವೆ. ಇದು ಮೂರನೇ ಕಾರ್ಯಕ್ರಮವಾಗಿದ್ದು, ನಾಲ್ಕನೇ ಕಾರ್ಯಕ್ರಮ ಮಂಗಳೂರಿನಲ್ಲಿ ಮಾಡುತ್ತೇವೆ. ಕರ್ನಾಟಕ ನಾಮಕಾರಣಕ್ಕೆ 50 ತುಂಬಿದ ಹಿನ್ನೆಲೆ ಇಂತಹ ಕಾರ್ಯಕ್ರಮ ನಡೆಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.

ಕನ್ನಡರಾಮಯ್ಯ:

ರಾಜ್ಯದಲ್ಲಿ ಆಡಳಿತದಲ್ಲಿ ಕಡತಗಳು ಸಹ ಕನ್ನಡದಲ್ಲಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಆದೇಶ ಮಾಡಿದ್ರು. ಅಲ್ಲದೆ ನವೆಂಬರ್ 1ರೊಳಗೆ ಒಳಗಾಗಿ ವಿಧಾನಸೌಧದ ಬಗ್ಗೆ ಮುಂದೆ ಭುವನೇಶ್ವರಿ ಪ್ರತಿಮೆ ಮಾಡಲು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರ ಸಹಿ ಕೂಡ ಕನ್ನಡದಲ್ಲೇ ಇದೆ. ನಮಗೆ ಸಂಧಿ, ವ್ಯಾಕರಣದ ಬಗ್ಗೆ ಕೇಳಿದ್ರು. ಕನ್ನಡದ ಬಗ್ಗೆ ಅಪಾರ ಪ್ರೀತಿ ಕಾಳಜಿ ಹೊಂದಿದ ಸಿಎಂ ಇದ್ದರೆ ಅದು ಸಿದ್ದರಾಮಯ್ಯ ಮಾತ್ರ ಎಂದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಕನ್ನಡರಾಮಯ್ಯ ಎಂದು ಕರೆಯಬೇಕು ಎಂದರು.

ಸಿದ್ದರಾಮಯ್ಯಗೂ ಕನ್ನಡಕ್ಕೂ ನಂಟು:

ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಕಾವಲು ಸಮಿತಿ ಮೊದಲ ಅಧ್ಯಕ್ಷರಾಗಿದ್ದರು. ರಾಜ್ಯದಲ್ಲಿ ಎಷ್ಟೋ ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ ಕೆಲವೇ ಕೆಲ ಸಿಎಂಗಳನ್ನ ಮಾತ್ರ ನೆನಪಿಸಿಕೊಳ್ಳುತ್ತೇವೆ. ಅಂತಹ ಮುಖ್ಯಮಂತ್ರಿಗಳಲ್ಲಿ ಸಿಎಂ ಸಿದ್ದರಾಮಯ್ಯ ಸಹ ಒಬ್ಬರು. ಅವರ ಕನ್ನಡದ ಕುರಿತು ಅಪಾರ ಕಾಳಜಿಗೆ ಅವರ ಮಾಡುತ್ತಿರುವ ಕಾರ್ಯಕ್ರಮಗಳೇ ನಿದರ್ಶನ ಎಂದರು.

ಸಿಎಂ ವಿರುದ್ಧ ಪಿತೂರಿ:

 ದೇಜರಾಜ್ ಅರಸು ಅವರಂತವರ ಮೇಲೆಯೂ ಕಳಂಕ ಬಂತು. ಈಗ ಸಿಎಂ ಸಿದ್ದರಾಮಯ್ಯಗೂ ಕಳಂಕ ಹಚ್ಚಲು ಬರುತ್ತಿದ್ದಾರೆ. ಸಿಎಂ ವಿರುದ್ಧ ಹಗರಣಗಳು ರಾಜಕೀಯ ಪ್ರೇರಿತವಾಗಿದೆ. ಕಡತಕ್ಕೆ ಏನಾದರೂ ಸಿಎಂ ಸಹಿ ಹಾಕಿದ್ರಾ? ಸಿಎಂ ಅವರ ಉತ್ತಮ ಆಡಳಿತ ಸಹಿಸಲಾಗದೆ ಅವರನ್ನು ಕುಗ್ಗಿಸುವ ಕೆಲಸ ಆಗುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ಯಾವುದಕ್ಕೂ ಬಗ್ಗುವುದಿಲ್ಲ. ಸಿಎಂ ಸ್ವಾಭಿಮಾನಕ್ಕೆ ದಕ್ಕೆ ಆಗಿರುವ ಪ್ರಶ್ನೆಯಿಲ್ಲ. ಎಲ್ಲ ಆರೋಪಗಳಿಗೆ ನಾವು ರಾಜಕೀಯವಾಗಿ ಉತ್ತರ ಕೊಡ್ತೀವಿ.. ಬಿಜೆಪಿಯವರು ರಾಜ್ಯಪಾಲರ ಕಚೇರಿಯನ್ನ ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕರು ಮತ್ತು ಸಚಿವರು, ಜನರು ಸೇರಿ ನಾವು ಎಲ್ಲರೂ ಹೇಳಿದ್ದೇವೆ ನೀವೂ ಚಿಂತೆ ಮಾಡಬೇಡಿ, ನೀವೂ ಮುಂದೆ ನಡೆಯಿರಿ, ನಾವು ಹಿಂದೆ ಬರುತ್ತೇವೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ತಿಳಿಸಿದ್ದೇವೆ ಎಂದರು

ಜನಾರ್ದನ ರೆಡ್ಡಿ ವಿರುದ್ಧ ಕಿಡಿ:

ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ ಸಚಿವರು,  ಕಾಗೆ ಕೋಗಿಲೆ ನೋಡಿ, ಎಷ್ಟು ಕಪ್ಪಿದೆ ಅಂದಂಗಾಯ್ತು ಜನಾರ್ದನ ಕತೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಲು ನೈತಿಕತೆ ರೆಡ್ಡಿಗಿಲ್ಲ. ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದಿದ್ದಾರೆ. ತಮ್ಮ ತಾಟಲ್ಲಿ(ಪ್ಲೇಟ್) ಕತ್ತೆ ಬಿದ್ದಿದೆ. ಇನ್ನೊಬ್ಬರ ತಟ್ಟೆಯಲ್ಲಿ ನೋಣ ಹುಡುಕುವ ಕೆಲಸ ಮಾಡ್ತಾರೆ ಎಂದು ಟಾಂಗ್ ನೀಡಿದರು.

 

ಉಡಾಫೆ ಮಾತು ಬಿಟ್ಟು ಜನ ಕೊಟ್ಟಿರೋ ಅಧಿಕಾರ ಸರಿಯಾಗಿ ನಿಭಾಯಿಸಲಿ: ಹೆಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ಜನಾರ್ದನ ರೆಡ್ಡಿ ವಿರುದ್ಧ ಕಿಡಿ:

ಮುಡಾ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾತನಾಡಿರುವ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಕಿಡಿಕಾರಿದ ಸಚಿವರು,  ಕಾಗೆ ಕೋಗಿಲೆ ನೋಡಿ, ಎಷ್ಟು ಕಪ್ಪಿದೆ ಅಂದಂಗಾಯ್ತು ಜನಾರ್ದನ ಕತೆ. ಸಿದ್ದರಾಮಯ್ಯ ಬಗ್ಗೆ ಮಾತನಾಡಲು ನೈತಿಕತೆ ರೆಡ್ಡಿಗಿಲ್ಲ. ಜನಾರ್ದನ ರೆಡ್ಡಿ ಜೈಲಿಗೆ ಹೋಗಿ ಬಂದಿದ್ದಾರೆ. ತಮ್ಮ ತಾಟಲ್ಲಿ(ಪ್ಲೇಟ್) ಕತ್ತೆ ಬಿದ್ದಿದೆ. ಇನ್ನೊಬ್ಬರ ತಟ್ಟೆಯಲ್ಲಿ ನೋಣ ಹುಡುಕುವ ಕೆಲಸ ಮಾಡ್ತಾರೆ ಎಂದು ಟಾಂಗ್ ನೀಡಿದರು.

click me!