ಕೊಲೆ ಆರೋಪಿ ದರ್ಶನ್‌ಗೆ ಜೈಲಲ್ಲೇ ರಾಜಾತಿಥ್ಯ ಅಂತಲ್ರಿ? 'ನೋ ಕಾಮೆಂಟ್' ಎಂದ ಸಚಿವ ಸಂತೋಷ್ ಲಾಡ್

By Ravi Janekal  |  First Published Aug 27, 2024, 12:59 PM IST

ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರೋ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನೇನು ಕಾಮೆಂಟ್ ಮಾಡೊಲ್ಲ ಎಂದು ಸಚಿವ ಸಂತೋಷ್ ಲಾಡ್  ತಿಳಿಸಿದರು.


ಧಾರವಾಡ (ಆ.27): ನಟ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿರೋ ವಿಚಾರ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನೇನು ಕಾಮೆಂಟ್ ಮಾಡೊಲ್ಲ ಎಂದು ಸಚಿವ ಸಂತೋಷ್ ಲಾಡ್  ತಿಳಿಸಿದರು.

ಇಂದು ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಆ ವಿಷಯದಲ್ಲಿ ಸಂಬಂಧಪಟ್ಟವರು ಮಾತಾಡ್ತಾರೆ. ವಿಚಾರ ಗೊತ್ತಾದ ತಕ್ಷಣ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

Latest Videos

undefined

 ಇನ್ನು ಜಿಂದಾಲ್‌ಗೆ ಕಡಿಮೆ ಬೆಲೆಗೆ ಭೂಮಿ ಕೊಟ್ಟಿರೊ ರಾಜ್ಯ ಸರ್ಕಾರ ನಿರ್ಧಾರವನ್ನು ತೀವ್ರವಾಗಿ ಅರವಿಂದ್ ಬೆಲ್ಲದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು,  ಜಿಂದಾಲ್ ಕಂಪನಿಗೆ ಭೂಮಿ ಕೊಡ್ತಿರೋ ಬಗ್ಗೆ ಅರವಿಂದ ಬೆಲ್ಲದ್ ವಿರೋಧ ಮಾಡುತ್ತಿದ್ದಾರೆ. ಅವರು ಸಹ ಇಂಡಸ್ಟ್ರಿ ಹೊಂದಿರೋರು. ಕೆಐಎಡಿಬಿ ಜಾಗವನ್ನು ಲೀಸ್‌ ಮೇಲೆ ನೀವು ತೆಗೆದುಕೊಂಡಿದ್ದೀರಿ. ಇದು ಕೂಡ ಒಂದು ಆಕ್ಟ್‌ನಲ್ಲಿ ಬರುತ್ತೆ. ಭಾರತದಾದ್ಯಂತ ಒಂದೇ ರೀತಿ ಇರುತ್ತೆ. ಯಾವುದೇ ಸಂಸ್ಥೆಗೆ ಲೀಸ್‌ಗೆ ಕೊಟ್ಟಾಗ ಕಾನೂನು ಪ್ರಕಾರ ಷರತ್ತು ಇರುತ್ತೆ. ಅವರು ಸಂಪೂರ್ಣ ದುಡ್ಡು ಕೊಟ್ಟಿರುತ್ತಾರೆ ಆದ್ರೆ ಷರತ್ತು ಮಾಡಿ ಅವರಿಗೆ ಭೂಮಿ ಕೊಡಲಾಗುತ್ತೆ. ಬೆಲ್ಲದ್ ಅವರಿಗೆ ಇದರ ಬಗ್ಗೆ ಬೇರೆ ಅಭಿಪ್ರಾಯ ಇರಬಹುದು. ಕೇಂದ್ರ ಸರ್ಕಾರ ಅವರದ್ದೇ ಇದೆ ಯಾರಾರಿಗೆ ಭೂಮಿ ಕೊಟ್ಟಿದ್ದಾರೆ ಅದನ್ನ ಹೇಳಲಿ ಎಂದು ತಿರುಗೇಟು ನೀಡಿದರು.

ಸಿಎಂ ಸಿದ್ದರಾಮಯ್ಯರನ್ನ ಕಂಡ್ರೆ ಬಿಜೆಪಿಯವರಿಗೆ ಭಯ : ಶಾಸಕ ಪ್ರದೀಪ್ ಈಶ್ವರ್

ನಾವು ಜಿಂದಾಲ್ ಗೆ ಫೆವರ್ ಮಾಡಿ ಕೊಡುತ್ತಿಲ್ಲ. ಜಿಂದಾಲ್ ಇಲ್ಲಿ  90 ಸಾವಿರ ಕೋಟಿ ಹೂಡಿಕೆ ಮಾಡಿದೆ. ನಾನು ಹುಟ್ಟಿ ಬೆಳೆದ ಜಾಗ ಅದು. ಬೆಲ್ಲದ್‌ರಿಗೆ ಸಂಪೂರ್ಣ ಮಾಹಿತಿ ಇಲ್ಲ. ಇಲ್ಲದಿದ್ರೆ ಮಹಿತಿ ಬೇಕಾದ್ರೆ ನಾವು ಕೊಡ್ತೇವೆ ಎಂದರು. ಇದೇ ವೇಳೆ ಬಿಜೆಪಿಯಿಂದ ನೂರು ಕೋಟಿ ಆಫರ್ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅದಾನಿ ಅಂಬಾನಿ ದುಡ್ಡು ಇದ್ದವರು ಅವರು ಏನು ಬೇಕಾದರೂ ಮಾಡ್ತಾರೆ. ಮಾಡಬಹುದು. ಗವರ್ನರ್ ಮೂಲಕ ಸರ್ಕಾರ ಕೆಡವಲು ಮುಂದಾಗಿದ್ದಾರೆ. ಬಿಜೆಪಿ ಗೆ ಫಂಡಿಂಗ್ ಅವರೇ ಮಾಡುತ್ತಾರೆ. ಹೀಗಾಗಿ ಅವರ ಹತ್ತಿರ ದುಡ್ಡು ಬಹಳ ಇದೆ. ಮೋದಿ ಸರ್ಕಾರ ಬಂದ ಮೇಲೆ ಇಲ್ಲಿಯವರೆಗೆ ಎಷ್ಟು ಸರ್ಕಾರ ಬೀಳಿಸಿದ್ದೀರಿ ಎಂದು ಬೆಲ್ಲದರಿಗೆ ಕೇಳಿ ಎಂದರು.

ನೂರು ಜನ್ಮ ಎತ್ತಿ ಬಂದ್ರೂ ನನ್ನ ಏನೂ ಮಾಡಲು ಆಗಲ್ಲ; ನನ್ನ ವಿರುದ್ಧದ ಷಡ್ಯಂತ್ರಕ್ಕೆ ಭಗವಂತ ತೀರ್ಪು ಕೊಡ್ತಾನೆ: ಎಚ್‌ಡಿಕೆ

ಕಾನೂನು ಬದ್ಧವಾಗಿ ಸೋತ ಮೇಲೂ ನೀವು ಐದು ವರ್ಷದ ನಂತರ ಅಧಿಕಾರಕ್ಕೆ ಬನ್ನಿ ಅಂತಾ ಬಿಜೆಪಿಯವರಿಗೆ ಹೇಳಬೇಕು. ಶಾಸಕರು ಬರುವಾಗ ಫ್ರೀ ಆಗಿ ಬರ್ತಾರ? ಬೆಲ್ಲದ ಅವರಿಗೆ ಬರೋಕೆ ಹೇಳಿ. ಇದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ. ಸಾರ್ವಜನಿಕ ಜೀವನದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರದ್ದೇ ಇರಬೇಕು. ಹಣ ಲೂಟಿ ಮಾಡಬೇಕು ಅನ್ನೋ ಪ್ಲಾನ್ ಅವರದ್ದು. ಕೇಂದ್ರ ಸರ್ಕಾರ 10 ವರ್ಷದಲ್ಲಿ ಲೂಟಿ ಹೊಡೆದ ಬಗ್ಗೆ ಮಾತನಾಡುತ್ತಾರಾ..? ಅವರು ಬಂದ್ರೆ ಡಿಬೆಟ್ ಮಾಡೋಣ. ಕೇಂದ್ರ ಸರ್ಕಾರದಲ್ಲಿ ಮಹಾ ಏನು ಕೆಲಸ ಆಗಿವೆ ಅನ್ನೋದರ ಬಗ್ಗೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

click me!