ಪ್ರವಾಸಿ ತಾಣಗಳಲ್ಲಿ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೇ ಟೋಪಿ? ಕಳಸ ಡಿಆರ್‌ಎಫ್‌ಒ ಅಮಾನತು

By Ravi JanekalFirst Published Aug 27, 2024, 9:53 AM IST
Highlights

ಪ್ರವಾಸಿ ತಾಣಗಳಲ್ಲಿ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ  ಕಳಸ ಡಿಆರ್‌ಎಫ್‌ಒ ಚಂದನ್ ಗೌಡರನ್ನ ಅಮಾನತುಗೊಳಿಸಿ ಕೊಪ್ಪ ಡಿಎಫ್‌ಒ ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು (ಆ.27): ಪ್ರವಾಸಿ ತಾಣಗಳಲ್ಲಿ ನಕಲಿ ಆನ್‌ಲೈನ್ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಮೋಸ ಮಾಡಿರುವ ಆರೋಪ ಕೇಳಿಬಂದಿರುವ ಹಿನ್ನೆಲೆ  ಕಳಸ ಡಿಆರ್‌ಎಫ್‌ಒ ಚಂದನ್ ಗೌಡರನ್ನ ಅಮಾನತುಗೊಳಿಸಿ ಕೊಪ್ಪ ಡಿಎಫ್‌ಒ ಉಪೇಂದ್ರ ಪ್ರತಾಪ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕು ಡಿಆರ್‌ಎಫ್ಒ ಆಗಿ ಕರ್ತವ್ಯದಲ್ಲಿದ್ದ ಚಂದನ್ ಗೌಡ. ಇದೇ ವ್ಯಾಪ್ತಿಯಲ್ಲಿ ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ಗೆ ದಿನನಿತ್ಯ ಸಾವಿರಾರು ಜನ ಪ್ರವಾಸಿಗರು ಬರುತ್ತಾರೆ. ಪ್ರವಾಸಿಗರಿಗಾಗಿ ಸರ್ಕಾರ ಆನ್‌ಲೈನ್ ಟಿಕೆಟ್ ವ್ಯವಸ್ಥೆಯೂ ಮಾಡಿದೆ.  ಆದರೆ ಇದನ್ನೇ ಬಂಡಾವಳ ಮಾಡಿಕೊಂಡು ಟಿಕೆಟ್ ನಲ್ಲಿ ಗೋಲ್ ಮಾಲ್ ಮಾಡಿ ಸರ್ಕಾರಕ್ಕೆ ಸೇರಬೇಕಿದ್ದ ಸಾವಿರಾರು ಹಣ ಪ್ರಿಯತಮೆಯ ಖಾತೆಗೆ ಜಮೆ ಮಾಡಿದ ಆರೋಪ ಕೇಳಿಬಂದಿದೆ.

Latest Videos

ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೆಸರಲ್ಲಿ ಪಾಸ್ ದುರುಪಯೋಗ! ಪ.ಬಂಗಾಳ ಮೂಲದವರಿಂದ ಕೃತ್ಯ?

ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್  ನೋಡಲು ಬರುವ ಪ್ರವಾಸಿಗರಿಗೆ ಆನ್‌ಲೈನ್ ನಕಲಿ ಟಿಕೆಟ್ ತಯಾರಿಸಿ ಮಾರಾಟ ಪ್ರವಾಸಿಗರ ಕೊಟ್ಟ ಹಣವನ್ನು ತನ್ನಲ್ಲಿಟ್ಟುಕೊಳ್ಳದೆ ಫೋನ್‌ಪೇ ಮೂಲಕ ಪ್ರಿಯತಮೆ ಖಾತೆಗೆ ಮಾಡಿರುವ ಡಿಆರ್‌ಎಫ್‌ಒ ಚಂದನಗೌಡ. ಇಲಾಖೆಗೆ ಸೇರಬೇಕಿದ್ದ ಸುಮಾರು 9000 ರೂ. ಹಣವನ್ನ ಮೋನಿಕಾ ಎಂಬ ಯುವತಿ ಖಾತೆಗೆ ಜಮಾ ಮಾಡಿದ್ದಾರೆ ಎಂಬ ಆರೋಪವಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಚಿಕ್ಕಮಗಳೂರಿನಲ್ಲಿ ಈ ಬಾರಿ ಭರ್ಜರಿ ಮಳೆಯಾಗುತ್ತಿದೆ ಈ ಹಿನ್ನೆಲೆ ರಾಣಿಝರಿ ಜಲಪಾತ, ಬಂಡಾಜೆ ಫಾಲ್ಸ್ ರಾಜ್ಯದ ಮೂಲೆಮೂಲೆಗಳಿಂದ ನೂರಾರು ಪ್ರವಾಸಿಗರು ಬರುತ್ತಿದ್ದಾರೆ. ಮೋಜುಮಸ್ತಿಗೆಂದು ಇಲ್ಲಿಗೆ ಬರುವ ಪ್ರವಾಸಿಗರೇ ಹೆಚ್ಚು. ಮದ್ಯಪಾನ ಮಾಡಿ ನೋಡಲು ಬಂದು ಈ ಹಿಂದೆ ಅನಾಹುತಗಳು ನಡೆದಿದೆ. ಈ ಹಿನ್ನೆಲೆ ಪ್ರವಾಸಿಗರು ಬಳಿ ಮದ್ಯ ಚೆಕ್ ಮಾಡಲು ತೆರಳಿದ್ದ ಪೊಲೀಸರು. 

Chikkamagaluru: ಅತ್ಯಾಚಾರ, ಕೊಲೆ ಖಂಡಿಸಿ ಕಾಫಿನಾಡಿನಲ್ಲಿ 28 ಸಂಘಟನೆಗಳಿಂದ ಬೃಹತ್ ಪ್ರತಿಭಟನೆ

 ಪ್ರವಾಸಿಗರನ್ನ ತಪಾಸಣೆ ಮಾಡಿದಾಗ ಸುಮಾರು 200ಕ್ಕೂ ಅಧಿಕ ಜನರಿಗೆ ಟಿಕೆಟ್ ಇಲ್ಲದೆ ಫಾಲ್ಸ್ ವೀಕ್ಷಣೆಗೆ ಪ್ರವೇಶ ನೀಡಿರುವುದು ಕಂಡುಬಂದಿದೆ. ಮದ್ಯ ಚೆಕ್ ಮಾಡಲು ಹೋಗಿದ್ದ ಪೊಲೀಸರಿಗೆ ಟಿಕೆಟ್ ಗೋಲ್ ಮಾಲ್ ನಡೆದಿರುವುದು ಗೊತ್ತಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಜೂನ್ ತಿಂಗಳ ಆನ್‌ಲೈನ್ ಟಿಕೆಟ್‌ ಬುಕ್ಕಿಂಗ್‌ಗೂ ಪ್ರವಾಸಿಗರ ನೋಂದಣಿ ಪುಸ್ತಕಕ್ಕೂ ಸಂಬಂಧವೇ ಇಲ್ಲ. ಭಾರೀ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಡಿಆರ್‌ಎಫ್ಒ ನಕಲಿ ಟಿಕೆಟ್ ಮಾರಾಟ ಮಾಡಿರುವ ಬಗ್ಗೆ ಸಂದೇಹ ಬಂದಿದೆ. ಇದೇ ವೇಳೆ ಮೋನಿಕಾ ಎಂಬ ಯುವತಿಗೆ 9000 ರೂ. ಫೋನ್‌ ಪೇ ಮೂಲಕ ಕಳಿಸಿರುವುದು ಗೊತ್ತಾಗಿದೆ. ಈಹಿನ್ನೆಲೆ ಕೊಪ್ಪ ಡಿಎಫ್‌ಒ ಉಪೇಂದ್ರ ಪ್ರತಾಪ್ ಸಿಂಗ್ ಕೂಡಲೇ ಅಮಾನತ್ತು ಆದೇಶ ಹೊರಡಿಸಿದ್ದಾರೆ. 

click me!