ಸಿಟಿ ರವಿ ಅವರನ್ನ ರಾತ್ರಿಯಿಡೀ ಸುತ್ತಾಡಿಸಿದ ಪೊಲೀಸರ ಕ್ರಮ ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ಹೇಳಿದ್ದೇನು?

By Ravi Janekal  |  First Published Dec 21, 2024, 1:29 PM IST

ಸಿಟಿ ರವಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ಖಂಡಿಸಿದ ಅವರು, ಕಾನೂನು ಕ್ರಮವನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.


ಕಲಬುರಗಿ (ಡಿ.21): ಸಿಟಿ ರವಿ ಅಲ್ಲಿಂದ ಜೀವಂತ ಬಂದಿದ್ದೇ ಪುಣ್ಯ ಅಂತಾ ಡಿಕೆ ಶಿವಕುಮಾರ ಹೇಳಿಲ್ಲ. ಸಿಟಿ ರವಿ ಹರಕಲು ಬಾಯಿ ಎಂದಷ್ಟೇ ಡಿಸಿಎಂ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡರು.

ಸಿಟಿ ರವಿಗೆ ಜೀವಬೆದರಿಕೆಯಿದೆ ಎಂಬ ವಿಚಾರವಾಗಿ ಕಲಬುರಗಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಯಾರಿಗಾದ್ರೂ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಆ ಪದ ಉಪಯೋಗಿಸಿ ಹೇಳಿದ್ರೆ ಏನ್ಮಾಡ್ತಿದ್ರಿ? ಎಂದು ಪ್ರಶ್ನಿಸಿದರು ಮುಂದುವರಿದು, ಒಬ್ಬ ಆರೋಪಿ ಸ್ಟೇಷನ್ ನಲ್ಲಿ ಇದ್ದಾರೆ ಎಂದರೆ ಅಲ್ಲಿ ಬಿಜೆಪಿ ಅವರದ್ದೇನು ಕೆಲಸ? ಹೀಗಾಗಿ ಅಲ್ಲಿಂದ ಅವರನ್ನು ಆಚೆ ಹಾಕಿದಾಗ ಈ ರೀತಿ ಆಗಿದೆ ಎಂದರು.

Tap to resize

Latest Videos

undefined

ನೂರಲ್ಲ, ದಿನಕ್ಕೆ ಸಾವಿರ ಸಲ ಅಂಬೇಡ್ಕರ್ ಜಪ ಮಾಡುತ್ತೇನೆ; ಸಿಟಿ ರವಿ, ಅಮಿತ್ ಶಾ ವಿರುದ್ಧ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ!

ಇನ್ನು ಬಂಧನ ಬಳಿಕ ಸಿಟಿ ರವಿ ಅವರನ್ನು ರಾತ್ರಿಯಿಡೀ ಮೂರು ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ನೋಡಿ, ಟೈಟ್ ಮಾಡಿದ್ರೆ ಶಾಸಕನಿಗೆ ಹಿಂಗೆ ಮಾಡಿದ್ರು ಅಂತಿರಿ, ಫ್ರೀ ಬಿಟ್ರೆ ಐಷಾರಾಮಿ ವ್ಯವಸ್ಥೆ ಅಂತೀರಿ. ನನ್ನ ಮೊಬೈಲ್ , ವಾಚ್ ಪೊಲೀಸರು ಕಿತ್ತುಕೊಂಡ್ರು ಅಂತ ಸಿಟಿ ರವಿ ಹೇಳ್ತಾರೆ ಆದ್ರೆ ಒಬ್ಬ ಅಕ್ವಿಜ್ಡ್ ಆದ ತಕ್ಷಣ ಬಾಡಿ ಸರ್ಚ್ ಆಗಬೇಕಲ್ವ? ಹಿಂದೆ ದರ್ಶನ್ ಮೊಬೈಲ್ ವಿಡಿಯೋ ಕಾಲ್ ಬಂದಾಗ ನೀವೇ ಏನೆಲ್ಲ ಹೇಳಿದ್ರಿ? ಎಂದು ಮಾಧ್ಯಮಗಳನ್ನ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ. ಆದ್ರೆ ಇದೇ ವಿಧಾನಪರಿಷತ್ ಸದಸ್ಯರಾದ ಸಿಟಿ ರವಿಗೆ ಅದೂ ವಿಧಾನ ಸೌಧದ ಒಳಗೆ ನುಗ್ಗಿ ಹಲ್ಲೆ ಮಾಡುತ್ತಾರೆಂದರೆ ಇದು ಭದ್ರತಾ ವೈಫಲ್ಯವೇ? ಸರ್ಕಾರದ ಕುಮ್ಮಕ್ಕಿನಿಂದಲೇ? ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದ್ದು ಏಕೆ? ಒಬ್ಬ ಎಂಎಲ್‌ಸಿ ಮೇಲೆ ಹಲ್ಲೆ ಮಾಡಿದವರನ್ನು ಹೀಗೆ ಬಿಡುಗಡೆಗೊಳಿಸಲು ಹೇಗೆ ಸಾಧ್ಯ? ಯಾವುದೇ ಉತ್ತರವಿಲ್ಲ.

ವಿಜಯೇಂದ್ರ ಹೇಳಿಕೆಗೆ ಖರ್ಗೆ ತಿರುಗೇಟು:

'ನಾವು ಬಳೆ ತೊಟ್ಟುಕೊಂಡಿಲ್ಲ' ಎಂಬ ಬಿವೈ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ನೀವು ಬಳೆ ತೊಟ್ಟಿದಿರೋ ಇಲ್ವೋ ? ಆದ್ರೆ ಬಳೆ ತೊಟ್ಟವರ ಮೇಲೆ ಹಿಂಗೆ ಮಾಡಿದಿರಿಲ್ವಾ? ಬಳೆ ತೊಟ್ಟವರ ಮೇಲೆ ಅವಾಚ್ಯವಾಗಿ ಮಾತಾಡಿದ್ದೀರಿ ಇಲ್ವ? ವಿಜಯೇಂದ್ರ ಒಳ್ಳೆಯ ನಾಯಕರಾಗಿದ್ರೆ ಇದೆಲ್ಲವನ್ನೂ ಖಂಡಿಸಬೇಕಿತ್ತು. ಪೂಜ್ಯ ಅಪ್ಪಾಜಿ ಅವರ ಮೇಲೆ ಹೀಗೆ ಕೇಸ್ ಇದೆಯಲ್ಲ? ನಿಮ್ಮನೆಯೇ ಸರಿಪಡಿಸಿಕೊಳ್ಳಲಾಗಿಲ್ಲ. ಅದು ಬಿಟ್ಟು ಬಳೆ ತೊಟ್ಟಿಲ್ಲ, ಸೀರೆ ಉಟ್ಟಿಲ್ಲ ಇದೆಲ್ಲ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಡುವ ಮಾತೇ? ಅದರ ಬದಲು ಸಿಟಿ ರವಿ ಹಾಗೆ ಹೇಳಿದ್ದು ಸತ್ಯ ಆದ್ರೆ ಕ್ರಮ ತಗೋತಿವಿ ಅಂದಿದ್ರೆ ನಾವು ವಿಜಯೇಂದ್ರ ಒಳ್ಳೆ ನಾಯಕತ್ವ ಅಂತಿದ್ವಿ. ನೀವು ಮೊದಲು ಪೂಜ್ಯ ಅಪ್ಪಾಜಿ, ಮುನಿರತ್ನ , ನಿಮ್ಮ ಶಾಕಸರ ಬಗ್ಗೆ ಮಾತಾಡಿ ಎಂದು ತಿವಿದರು.

ಮಾರ್ಷಲ್ಸ್ ಇಲ್ಲದಿದ್ರೆ ರವಿ ಜೀವ ಹೋಗ್ತಿತ್ತು; ಅಸಮರ್ಥ ಗೃಹ ಸಚಿವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ: ರೇಣುಕಾಚಾರ್ಯ ಕಿಡಿ

ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಅಂತಾ ಹೇಳ್ತಾರೆ. ಇನ್ನೂ ಹತ್ತು ವರ್ಷ ಕಳೆದರೂ ಅವರಿಗೆ ಆ ಕಾಲ ಬರೋದಿಲ್ಲ.ಅವರಲ್ಲಿ ಅತ್ತೆ ಯಾರು ಸೊಸೆ ಯಾರು  ಅನ್ನೋದನ್ನ ಅವರೇ ಡಿಸೈಡ್ ಮಾಡಿಕೊಳ್ಳಲಿ. ಬಿಜೆಪಿಯಲ್ಲಿ ಬಣ ರಾಜಕೀಯ ಇದೆ. ನಾವು ಕಾನೂನು ಪ್ರಕಾರ ಕ್ರಮ ಕೈಗೊಂಡರೆ ಅದೆಂಗೇ ರಿವೇಂಜ್ ಪಾಲಿಟಿಕ್ಸ್ ಆಗುತ್ತೆ?  ಎಂದು ಪ್ರಶ್ನಿಸಿದರು.

click me!