ಕಾನೂನು ಸಚಿವನಾಗಿ ಹೇಳ್ತೇನಿ ಸಿಎಂ ಮನೆಯವರಿಗೆ ಸೈಟ್ ಮಂಜೂರು ಮಾಡಿಕೊಂಡಿಲ್ಲ: ಎಚ್‌ಕೆ ಪಾಟೀಲ್

By Ravi Janekal  |  First Published Jul 12, 2024, 1:19 PM IST

ವಾಲ್ಮೀಕಿ ನಿಗಮ ಹಣದ ಅವ್ಯವಹಾರ ಪ್ರಕರಣ ಸಂಬಂಧ ಎಸ್‌ಐಟಿಯವರು ತನಿಖೆ ಮಾಡುತ್ತಿದ್ದಾರೆ. ಆದರೆ  ಈ ಇಡಿ ಸಹ ಕ್ರಮ ಕೈಗೊಂಡಿದೆ ಎಂದು ಸಚಿವ ಎಚ್‌ಕೆ ಪಾಟೀಲ್ ತಿಳಿಸಿದರು.


ಗದಗ (ಜು.12): ವಾಲ್ಮೀಕಿ ನಿಗಮ ಹಣದ ಅವ್ಯವಹಾರ ಪ್ರಕರಣ ಸಂಬಂಧ ಎಸ್‌ಐಟಿಯವರು ತನಿಖೆ ಮಾಡುತ್ತಿದ್ದಾರೆ. ಆದರೆ  ಈ ಇಡಿ ಸಹ ಕ್ರಮ ಕೈಗೊಂಡಿದೆ ಎಂದು ಸಚಿವ ಎಚ್‌ಕೆ ಪಾಟೀಲ್ ತಿಳಿಸಿದರು.

ಮಾಜಿ ಸಚಿವ ಬಿ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು. ಯಾರೇ ವಿಚಾರಣೆ ನಿಷ್ಪಕ್ಷಪಾತವಾಗಿ ಆಗಲಿ, ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮ ಜರಗಿಸುತ್ತದೆ. ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರದ ಬಗ್ಗೆ ತನಿಖೆಯಿಂದಷ್ಟೇ ಹೊರಬರಬೇಕು. ಸುದ್ದಿಯನ್ನು ಓದುವುದು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ತಪ್ಪು ಯಾರು ಎಸಗಿದ್ದಾರೆ ಅವರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಜರುಗಿಸಲಾಗುತ್ತದೆ. ತನಿಖೆ ನಡೆದಾಗ ಸಾರ್ವಜನಿಕ ಮುಂದಾಳುಗಳು ಚರ್ಚೆ ಮಾಡೋದು ಸೂಕ್ತವಾದ ಪ್ರಕ್ರಿಯೆ ಅಲ್ಲ. ಇವೆಲ್ಲ ಚರ್ಚೆಗಳುತನಿಖೆ ಮೇಲೆ ಪ್ರಭಾವ ಬೀರುತ್ತವೆ‌. ಸಾರ್ವಜನಿಕ ಚರ್ಚೆ, ಪತ್ರಿಕಾ ಚರ್ಚೆ ಆಗದಿದ್ರೆ ಸರಿಯಾಗಿ ತನಿಖೆ ನಡೆಯುತ್ತವೆ ಎಂದರು.

Tap to resize

Latest Videos

undefined

ಬಿ ನಾಗೇಂದ್ರರನ್ನ ಇಡಿ ವಶಕ್ಕೆ ಪಡೆದ ಬಗ್ಗೆ ನನಗೆ ಈಗ ಮಾಹಿತಿ ಬಂದಿದೆ: ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ

ಡಿಸಿಎಂ ಡಿಕೆ ಶಿವಕುಮಾರ ನಾಗೇಂದ್ರ ಪರ ಬ್ಯಾಟ್ ಬೀಸಿದ್ದಾರೆ ಎಂದ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಕಾನೂನು ಸಚಿವನಾಗಿ ಹೇಳ್ತೇನಿ, ಸಾರ್ವಜನಿಕ ಚರ್ಚೆಯಿಂದ ತಪ್ಪು ಮಾಹಿತಿ ನೀಡಬೇಡಿ. ಚರ್ಚೆ ಆಗದಿರೋದು ತನಿಖಾ ದೃಷ್ಟಿಯಿಂದ ಒಳ್ಳೆಯದು ಎಂದರು ಇದೇ ವೇಳೆ ಮೈಸೂರು ಮುಡಾ ಹಗರಣ(MUDA scam) ವಿರುದ್ಧ ಬಿಜೆಪಿ ಪ್ರತಿಭಟನೆಗಿಳಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯಾವ ಕಾರಣಕ್ಕಾಗಿ ಪ್ರತಿಭಟನೆ..? ಸಿಎಂ ಮನೆಯರಿಗೆ ಸೈಟ್ ಮಂಜೂರು ಮಾಡಿಕೊಂಡಿಲ್ಲ. ಕೊಟ್ಟ ಜಾಗೆಗೆ ಕೊಟ್ಟಂತಹ ಪರಿಹಾರವೇ ಹೊರತೂ ಸೈಟ್ ಮಂಜೂರು ಮಾಡಿದ್ದಲ್ಲ. ವ್ಯಾತ್ಯಾಸವನ್ನ ಅರ್ಥೈಸಿಕೊಳ್ಳಬೇಕು. ತನಿಖೆ ನಡೀತಿದೆ ಅದರ ಆಧಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು ಅದು ಆಗುತ್ತದೆ. ಮುಡಾ ತಪ್ಪು ಹೆಜ್ಜೆಗಳ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದರು.

click me!