'ದೇಶದ ಪರವಾಗಿರಬೇಕು..' ಸಿಂದೂರಕ್ಕೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ಶಾಸಕನಿಗೆ ಹೆಬ್ಬಾಳ್ಕರ್ ಟಾಂಗ್

Published : May 17, 2025, 09:06 AM IST
'ದೇಶದ ಪರವಾಗಿರಬೇಕು..' ಸಿಂದೂರಕ್ಕೆ ಸಾಕ್ಷ್ಯ ಕೇಳಿದ ಕಾಂಗ್ರೆಸ್ ಶಾಸಕನಿಗೆ ಹೆಬ್ಬಾಳ್ಕರ್ ಟಾಂಗ್

ಸಾರಾಂಶ

ಆಪರೇಷನ್ ಸಿಂದೂರದಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರವಾಗಿರಬೇಕು ಎಂದು ಹೇಳುವ ಮೂಲಕ ಕೋಲಾರ ಶಾಸಕ ಕೊತ್ತೂರು ಮಂಜುನಾಥಗೆ ಮಹಿಳಾ ಮತ್ತು ಮಕ್ಕಳ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು.

ದಾವಣಗೆರೆ (ಮೇ.17): ಆಪರೇಷನ್ ಸಿಂದೂರದಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರವಾಗಿರಬೇಕು ಎಂದು ಹೇಳುವ ಮೂಲಕ ಕೋಲಾರ ಶಾಸಕ ಕೊತ್ತೂರು ಮಂಜುನಾಥಗೆ ಮಹಿಳಾ ಮತ್ತು ಮಕ್ಕಳ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ನೀಡಿದರು.

ಹರಿಹರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರೂ ದೇಶದ ಪರವಾಗಿ ಮಾತನಾಡಬೇಕು. ಅದರಲ್ಲೂ ಆಪರೇಷನ್ ಸಿಂದೂರರಂತಹ ವಿಚಾರದಲ್ಲಿ ಎಲ್ಲರೂ ದೇಶದ ಪರ ಇರಬೇಕು. ಕಾಮಾಲೆ ಕಣ್ಣಿನವರಿಗೆ ಕಂಡಿದ್ದೆಲ್ಲಾ ಹಳದಿಯಂತೆ ಹಾಗಾಗಿದೆ. ವಿಪಕ್ಷ ನಾಯಕ ಆರ್.ಅಶೋಕ ಅಣ್ಣನವರ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಅಶೋಕಣ್ಣ ಅವರು ಬುದ್ಧಿವಂತ ಅಂತಾ ತಿಳಿದುಕೊಂಡಿದ್ದೆ. ಅಷ್ಟೇ ಹೇಳ್ತೀನಿ ಎಂದು ಗ್ರೇಟರ್ ಬೆಂಗಳೂರು ವಿಚಾರದ ಬಗ್ಗೆ ವಾಟರ್ ಬೆಂಗಳೂರು ಅಂತಾ ಟೀಕಿಸಿದ ಆರ್‌.ಅಶೋಕ ಹೇಳಿಕೆ ಕುರಿತ ಪ್ರಶ್ನೆಗೆ ಸಚಿವೆ ಉತ್ತರಿಸಿದರು.

ಇದನ್ನೂ ಓದಿ: ಇದನ್ನೂ ಓದಿ: ವಿಶ್ವಗುರು ಮೋದಿಗೆ ಅಮೆರಿಕ, ಚೀನಾ ಬಾಯ್ಕಟ್ ಮಾಡುವ ಧೈರ್ಯ ಇದೆಯಾ? ಸಚಿವ ಖರ್ಗೆ ತೀವ್ರ ವಾಗ್ದಾಳಿ!

ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ, ಅನುಭವಿಗಳಿದ್ದಾರೆ. ಅಂತಹವರು ಮುಖ್ಯಮಂತ್ರಿಯಾಗಿ ಮತ್ತೆ ಮಂತ್ರಿ ಮಂಡಲಕ್ಕೆ ಬಂದವರು. ಅಂತಹವರ ಬಗ್ಗೆ ನಾವೇನು ಹೇಳಲಾಗುತ್ತದೆ ಎಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆಯೆಂಬ ಶೆಟ್ಟರ್ ಹೇಳಿಕೆಗೆ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದರು.

ಇದನ್ನೂ ಓದಿ: ಕೊತ್ತನೂರಿಗೆ ಈ ದೇಶದ ಬಗ್ಗೆ ಏನ್ ಗೊತ್ತಿದೆ, ರಿಯಲ್ ಎಸ್ಟೇಟ್ ಬಗ್ಗೆ ಬೇಕಾದರೇ ಹೇಳ್ತಾರೆ: ಪ್ರತಾಪ್ ಸಿಂಹ ಕಿಡಿ!

ಸೇನಾಧಿಕಾರಿ ಸೋಫಿಯಾ ಖುರೇಷಿ ಬಗ್ಗೆ ಬಿಜೆಪಿ ನಾಯಕ ಅವಹೇಳನ ಮಾಡಿದ್ದು ಖಂಡನೀಯ. ಮನುಸ್ಮೃತಿ ಇರುವಂತಹ ಗಂಡಸರಿಗೆ, ರಾಜಕಾರಣಿಗಳಿಗೆ ನನ್ನ ಧಿಕ್ಕಾರ ಹೇಳುತ್ತೇನೆ. ನಮ್ಮ ನಾಯಕರು ಹೇಳಿದಂತೆ ನಾವು ಇಂತಹ ವಿಚಾರದಲ್ಲಿ ಸರ್ಕಾರದ ಪರವಾಗಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ