ಕರ್ನಾಟಕದಲ್ಲಿ ಸೆಪ್ಟೆಂಬರ್‌ಗೆ ಸೋಂಕು ಗರಿಷ್ಠ ಮಟ್ಟಕ್ಕೆ?

Published : Jul 26, 2020, 09:17 AM ISTUpdated : Jul 26, 2020, 10:45 AM IST
ಕರ್ನಾಟಕದಲ್ಲಿ ಸೆಪ್ಟೆಂಬರ್‌ಗೆ ಸೋಂಕು ಗರಿಷ್ಠ ಮಟ್ಟಕ್ಕೆ?

ಸಾರಾಂಶ

ಕರ್ನಾಟಕದಲ್ಲಿ ಸೆಪ್ಟೆಂಬರ್‌ಗೆ ಸೋಂಕು ಗರಿಷ್ಠ ಮಟ್ಟಕ್ಕೆ?| ದೇಶಾದ್ಯಂತ ಒಮ್ಮೆಗೆ ಸೋಂಕು ಗರಿಷ್ಠ ಮಟ್ಟಕ್ಕೆ ತಲುಪದು| ಸಾರ್ವಜನಿಕ ಆರೋಗ್ಯ ಸಂಸ್ಥೆ ನಿರ್ದೇಶಕ ಜಿವಿಎಸ್‌ ಮೂರ್ತಿ

ನವದೆಹಲಿ(ಜು.26): ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಸೆಪ್ಟೆಂಬರ್‌ ವೇಳೆಗೆ ಗರಿಷ್ಠ ಮಟ್ಟಮುಟ್ಟಬಹುದು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಪ್ರೊ. ಜಿ.ವಿ. ಎಸ್‌ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಡ್‌ ನ್ಯೂಸ್: ಬಳಕೆಯಲ್ಲಿರುವ 21 ಔಷಧಗಳಲ್ಲೇ ಕೊರೋನಾ ತಡೆವ ಶಕ್ತಿ!

ಭಾರತದಂಥ ದೇಶದಲ್ಲಿ ಸೋಂಕು ಒಂದೇ ವೇಳೆ ಎಲ್ಲಾ ಪ್ರದೇಶಗಳಲ್ಲೂ ಗರಿಷ್ಠ ಮಟ್ಟಮುಟ್ಟುವುದಿಲ್ಲ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯಾಗಿ ಪ್ರಕರಣ ಏರಿಕೆಯಾಗಲಿವೆ. ಅಲ್ಲದೆ, ಕೊರೋನಾ ಪ್ರಕರಣಗಳ ಏರಿಕೆಯ ಗತಿಯು ಆ ರಾಜ್ಯದ ಜನರು ಈ ಸೋಂಕಿಗೆ ಒಳಗಾಗುವುದರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಇದೇ ತಿಂಗಳಾಂತ್ಯ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಸೋಂಕಿತರ ಪ್ರಮಾಣ ಗರಿಷ್ಠ ಮಟ್ಟಮುಟ್ಟಬಹುದು. ಸೋಂಕು ತಡೆಗೆ ಪರೀಕ್ಷೆ, ಗುರುತಿಸು ಮತ್ತು ಚಿಕಿತ್ಸೆ ಅತ್ಯಂತ ಮಹತ್ವದ್ದು. ಪ್ರಸರಣ ತಡೆಗೆ ಮಾಸ್ಕ್‌ ಧಾರಣೆ, ಕೈ ತೊಳೆಯುವುದು ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಳ್ಳಲೇಬೇಕು. ಸೋಂಕಿಗೆ ತುತ್ತಾದ ಓರ್ವ ವ್ಯಕ್ತಿ 10-14 ದಿನಗಳಲ್ಲಿ ತನ್ನ ಕುಟುಂಬ ಮತ್ತು ಇನ್ನಿತರ ಸದಸ್ಯರಿಗೆ ಸೋಂಕು ಹಬ್ಬಿಸುತ್ತಾರೆ. ಆ ನಂತರದಲ್ಲಿ ವ್ಯಾಧಿಯ ಮತ್ತೊಂದು ಅಲೆ ಆರಂಭವಾಗಲಿದೆ.

ಕೊರೋನಾ ಸೋಂಕಿತರಿಗೆ ‘ಸೈಕೋಥೆರಪಿ’!

ಕೊರೋನಾ ಹತ್ತಿಕ್ಕಲು ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೋ ಒಂದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿಢೀರ್‌ ಏರಿಕೆಯಾಗುತ್ತದೆ ಎಂದಾದರೆ, ಆ ರಾಜ್ಯ ಕೊರೋನಾ ವಿರುದ್ಧದ ಹೋರಾಟಕ್ಕೆ ಸಿದ್ಧವಾಗಿಲ್ಲ ಎಂದೇ ಅರ್ಥ ಎಂದು ಪ್ರೊ. ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್