ಹೊಸ ವರ್ಷ ಸಂಭ್ರಮಾಚರಣೆ ಗೋವಾ ಬೀಚ್, ಕೇರಳ ಹಿನ್ನೀರು, ಹಿಮಾಚಲ ಪ್ರದೇಶ ಟ್ರೆಂಡ್ ಈಗ ಕಡಿಮೆ. ಈಗ ಏನಿದ್ದರೂ ಇದೀಗ ಬೆಂಗಳೂರು-ಕರ್ನಾಟಕ. ಇದರಿಂದ ಈ ಹೊಸ ವರ್ಷ ಸಂಭ್ರಮಾಚರಣೆ ರಾತ್ರಿ ಕರ್ನಾಟಕದಲ್ಲಿ ಬರೋಬ್ಬರಿ 308 ಕೋಟಿ ರೂ ಮದ್ಯ ಮಾರಾಟವಾಗಿದೆ.
ಬೆಂಗಳೂರು(ಜ.01) ಹೊಸ ವರ್ಷ ಸಂಭ್ರಮಾಚರಣೆ ಅಮಲು ಹಲವೆಡೆ ಇನ್ನೂ ಇಳಿದಿಲ್ಲ. ಭಾರತದ ಹಲವು ನಗರ, ಪ್ರವಾಸಿ ತಾಣ, ಸುಂದರಣ ತಾಣಗಳಲ್ಲಿ ಕಿಕ್ಕಿರಿದು ಜನ ಸೇರಿದ್ದರು. ಹೊಸ ವರ್ಷಕ್ಕೆ ಗೋವಾಗೆ ತೆರಳುವ ಟ್ರೆಂಡ್ ಇದೀಗ ಕಡಿಮೆಯಾಗಿದೆ. ಕೇರಳದ ಹಿನ್ನೀರು, ಹಿಮಾಚಲ ಪ್ರದೇಶದ ಮಂಜು, ಹೀಗೆ ಕೆಲ ಪ್ರಮುಖ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷ ಆಚರಿಸುವ ವಾಡಿಕೆ ಇದ್ದೇ ಇದೆ. ಆದರೆ ಇವೆಲ್ಲವನ್ನು ಕರ್ನಾಟಕ ಮೀರಿಸಿದೆ. ಹೊಸ ವರ್ಷ ಸಂಭ್ರಮಾಚರಣೆ ಅತೀ ಹೆಚ್ಚು ರಂಗು ಪಡೆದಿದ್ದು ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಅನ್ನೋದು ಎರಡು ಮಾತಿಲ್ಲ. ಇದೇ ಕಾರಣದಿಂದ 2025ರ ಹೊಸ ವರ್ಷ ಸಂಭ್ರಮಾಚರಣೆ ರಾತ್ರಿ ಕರ್ನಾಟಕದಲ್ಲಿ ಬರೋಬ್ಬರಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ.
ಈ ಬಾರಿಯ ಹೊಸ ವರ್ಷಾಚರಣೆಯ ಮದ್ಯ ಮಾರಾಟ ಹೊಸ ದಾಖಲೆ ಬರೆದಿದೆ. ಡಿಸೆಂಬರ್ 31ರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಇಡೀ ದಿನದ ಮದ್ಯ ಮಾರಾಟ ಮೊತ್ತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯ ಬಿವರೇಜಸ್ ಕಾರ್ಪೋರೇಶನ್ ಲಿಮಿಟೆಡ್(KSBCL) ಈ ವರ್ಷ 250 ಕೋಟಿ ರೂಪಾಯಿ ಮದ್ಯ ಮಾರಾಟವಾಗಲಿದೆ ಎಂದು ಅಂದಾಜಿಸಿತ್ತು. ಆದರೆ KSBCL ಲೆಕ್ಕಾಚಾರವನ್ನೇ ಮದ್ಯ ಪ್ರಿಯರ್ ಉಲ್ಟಾ ಮಾಡಿದ್ದಾರೆ. ಬರೋಬ್ಬರಿ 308 ಕೋಟಿ ರೂಪಾಯಿ ಮದ್ಯ ಖರೀದಿಸಿ ಹೊಸ ವರ್ಷ ಆಚರಿಸಿದ್ದಾರೆ. ಈ ಬಾರಿಯ ಹೊಸ ಸಂಭ್ರಮಾಚರಣೆ ಮದ್ಯ ಮಾರಾಟ ಅತ್ಯಂತ ಗರಿಷ್ಠ ಅನ್ನೋ ದಾಖಲೆ ಬರೆದಿದೆ.
ಬೆಂಗಳೂರಿನ ಹೊಸ ವರ್ಷ ಪಾರ್ಟಿ ಮತ್ತಲ್ಲಿ ಮಗುವನ್ನೇ ಮರೆತ ಪೋಷಕರು, ಪೊಲೀಸ್ ವಶದಲ್ಲಿ ಕಂದ!
ಈ ಪೈಕಿ 250.25 ಕೋಟಿ ರೂಪಾಯಿ ಮೌಲ್ಯದ 4.83 ಲಕ್ಷ ಬಾಕ್ಸ್ ಭಾರತೀಯ ತಯಾರಿಕಾ ಮದ್ಯ ಮಾರಾಟವಾಗಿದೆ. ಇನ್ನು 2.92 ಲಕ್ಷ ಬಾಕ್ಸ್ ಬೀಯರ್ ಮಾರಾಟವಾಗಿದೆ. ಬಿಯರ್ ಮಾರಾಟ ಮೌಲ್ಯ 57.75 ಕೋಟಿ ರೂಪಾಯಿ. ಒಟ್ಟು ಹೊಸವರ್ಷಾಚರಣೆ ರಾತ್ರಿ ಕರ್ನಾಟಕದಲ್ಲಿ 7.76 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಇದರಿಂದ ಡಿಸೆಂಬರ್ ತಿಂಗಳ ಒಟ್ಟು ಮದ್ಯ ಮಾರಾಟ 408.58 ರೂಪಾಯಿಗೆ ತಲುಪಿದೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ.
ಇತರ ಹಲವು ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕ ಹೊಸ ವರ್ಷ ಸಂಭ್ರಮಾಚರಣೆ ಮದ್ಯ ಮರಾಟದಲ್ಲಿ ಮೊದಲ ಸ್ಥಾನದಲ್ಲಿದೆ. ಕೇರಳದಲ್ಲಿ ಹೊಸ ವರ್ಷ ಸಂಭ್ರಮಾಚರಣೆ ಪ್ರಯುಕ್ತ 108 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಮದ್ಯ ಮಾರಾಟ ಹಾಗೂ ಸಂಭ್ರಮಾಚರಣೆ ನೋಡಿದರೆ ಕರ್ನಾಟಕ ಇತರ ಎಲ್ಲಾ ರಾಜ್ಯಗಳನ್ನು ಮೀರಿಸುವಂತಿದೆ. ಇದೀಗ ಹಲವರ ಹೊಸ ವರ್ಷ ಸೆಲೆಬ್ರೆಷನ್ ಸ್ಥಳ ಕರ್ನಾಟಕ-ಬೆಂಗಳೂರು ಆಗಿದೆ.
ಹೊಸ ವರ್ಷ ಸಂಭ್ರಮಾಚರಣೆಯ ರಾತ್ರಿ ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಕೂಡ ಕೆಲ ದಾಖಲೆ ಬರೆದಿದೆ. ಡಿಸೆಂಬರ್ 31ರ ರಾತ್ರಿ 11 ಗಂಟೆಗೆ ವೇಳೆ 1ಲಕ್ಷಕ್ಕೂ ಅದಿಕ ಮಂದಿ ಹೊಸ ವರ್ಷ ಆಚರಣೆಗೆ ಜಮಾಯಿಸಿದ್ದರು. ಇದೇ ರೀತಿ ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಹೊಸ ವರ್ಷಸಂಭ್ರಮಾಚರಣೆ ಆಯೋಜನೆಗೊಂಡಿತ್ತು. ಎಲ್ಲಾ ಕಡೆ ಕಿಕ್ಕಿರಿದು ಜನ ಸೇರಿದ್ದರು. ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರಿ ಮುನ್ನಚರಿಕೆ ಕ್ರಮ ಕೈಗೊಂಡಿದ್ದರು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಬಳಿ 2000 ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಇನ್ನ ಕೋರಮಂಗಲದಲ್ಲಿ 1,000 ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಬ್ರಿಗೇಡ್ ರಸ್ತೆ ಹೊಸ ವರ್ಷ ಪಾರ್ಟಿಯಲ್ಲಿ ನೂಕು ನುಗ್ಗಲು, ಲಘು ಲಾಠಿ ಪ್ರಹಾರ!
ಸಿಸಿಟಿವಿ, ಮಿನಿ ಕಂಟ್ರೋಲ್ ರೂಂ ಸೇರಿದಂತೆ ಹಲವು ಅಧುನಿಕ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹೀಗಾಗಿ ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರೂ ಎಲ್ಲವೂ ಸುಸೂತ್ರವಾಗಿ ನಡೆದಿದೆ.