ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ರಾಜ್ಯ ಸರ್ಕಾರ

Published : Apr 20, 2026, 08:13 AM IST
Alcohol Price Hike

ಸಾರಾಂಶ

ರಾಜ್ಯ ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ಮದ್ಯದ ದರಗಳು ಗಣನೀಯವಾಗಿ ಏರಿಕೆಯಾಗಲಿವೆ. ವಿಶೇಷವಾಗಿ, ಜನಸಾಮಾನ್ಯರು ಹೆಚ್ಚಾಗಿ ಸೇವಿಸುವ 'ಎಕಾನಮಿ' ಬ್ರ್ಯಾಂಡ್‌ಗಳ ಬೆಲೆಗಳು ಹೆಚ್ಚಾಗಲಿದೆ.

ಬೆಂಗಳೂರು (ಏ.20): ಗೃಹ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ರಾಜ್ಯ ಸರ್ಕಾರ ಈಗ ಮತ್ತೊಂದು ಶಾಕ್ ನೀಡಿದೆ. ನೀರಿನ ದರ ಮತ್ತು ವಿದ್ಯುತ್ ದರ ಏರಿಕೆಯ ಬೆನ್ನಲ್ಲೇ, ಬಡ ಹಾಗೂ ಸಾಮಾನ್ಯ ವರ್ಗದ ಜನರು ಹೆಚ್ಚಾಗಿ ಸೇವಿಸುವ ಮದ್ಯದ ದರವನ್ನು (Liquor Price Hike) ಗಣನೀಯವಾಗಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಮುಂದಿನ ವಾರದಿಂದಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದ್ದು, ಈ ಕುರಿತು ಸರ್ಕಾರ ಈಗಾಗಲೇ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಬೆಲೆ ಏರಿಕೆಗೆ ಕಾರಣವೇನು?

ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯದ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಮದ್ಯದ ಮೇಲೆ ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದೆ. ಈ ಹೊಸ ವ್ಯವಸ್ಥೆಯನ್ವಯ, ಮದ್ಯದಲ್ಲಿರುವ ಆಲ್ಕೊಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದಾಗಿ ಜನ ಸಾಮಾನ್ಯರು ಹೆಚ್ಚಾಗಿ ಬಳಸುವ 'ಎಕಾನಮಿ' ಬ್ರ್ಯಾಂಡ್‌ಗಳ ಬೆಲೆ ಏರಿಕೆಯಾಗುವುದು ಖಚಿತವಾಗಿದೆ.

ಯಾವ ಬ್ರ್ಯಾಂಡ್ ಬೆಲೆ ಎಷ್ಟು ಏರಿಕೆ? (180 ML ಬಾಟಲ್ ಅಂದಾಜು ದರ)

ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಸುಮಾರು 10 ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಒರಿಜಿನಲ್‌ ಚಾಯ್ಸ್‌ನ 180 ಎಂಎಲ್‌ಗೆ ಪ್ರಸ್ತುತ 95 ರೂಪಾಯಿ ದರವಿದ್ದು, ಹೊಸ ದರ ಅಂದಾಜು 115 ರೂಪಾಯಿ ಆಗಲಿದೆ. ಅದೇ ರೀತಿಯಲ್ಲಿ, ಒಟಿ (ಓಲ್ಡ್‌ ಟ್ಯಾವರಿನ್‌) 180 ಎಂಎಲ್‌ಗೆ ಪ್ರಸ್ತುತ 80 ರೂಪಾಯಿ ದರ ಇದ್ದು, ಹೊಸ ದರ 100 ರೂಪಾಯಿ ಆಗಲಿದೆ. ಇನ್ನು ಬಡ ಜನರಲ್ಲಿ ಜನಪ್ರಿಯವಾಗಿರುವ ರಾಜಾ ವಿಸ್ಕಿಯ 180 ಎಂಎಲ್‌ನ ಹೊಸ ಬೆಲೆ 95 ರೂಪಾಯಿ ಆಗಲಿದೆ. ಪ್ರಸ್ತುತ ಇದಕ್ಕೆ 70 ರೂಪಾಯಿ ಬೆಲೆ ಇದೆ. ಇನ್ನು ಹಯ್ವಾರ್ಡ್ಸ್‌ಗೆ 100 ರೂಪಾಯಿ ಬೆಲೆ ಇದ್ದು,ಹೊಸ ದರ 120 ರೂಪಾಯಿ ಆಗಲಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಕಸಕ್ಕೆ ಹೊಸ ಸೂತ್ರ: ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWML ಸೂಚನೆ
ಎಲ್ಲದಕ್ಕೂ ಉತ್ತರಿಸಲಿದೆ ಕಾಲ: ಡಿಕೆಶಿ ಮತ್ತೆ ಮಾರ್ಮಿಕ ಮಾತು