ಬೆಂಗಳೂರು ಕಸಕ್ಕೆ ಹೊಸ ಸೂತ್ರ: ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWML ಸೂಚನೆ

Published : Apr 20, 2026, 07:34 AM IST
Bengaluru BBMP Waste Rules

ಸಾರಾಂಶ

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು (ಬಿಎಸ್‌ಡಬ್ಲ್ಯುಎಂಎಲ್‌) ನಗರದಲ್ಲಿ ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಮೇಲ್ವಿಚಾರಣೆ ಚುರುಕುಗೊಳಿಸಲು ಹೊಸ ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

ಬೆಂಗಳೂರು: ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕರೂ ಕಡ್ಡಾಯವಾಗಿ ತ್ಯಾಜ್ಯವನ್ನು ನಾಲ್ಕು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸಿ ನೀಡಬೇಕು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್‌) ಸೂಚನೆ ನೀಡಿದೆ.

‘ಘನ ತ್ಯಾಜ್ಯ ನಿರ್ವಹಣಾ ನಿಯಮಗಳು–2026’ ಅನುಷ್ಠಾನಗೊಳಿಸಲು ನಗರದ ಪುರಭವನದಲ್ಲಿ ನಾಗರಿಕರು, ನಿವಾಸಿಗಳ ಕಲ್ಯಾಣ ಸಂಘಗಳು, ಸರ್ಕಾರೇತರ ಸಂಸ್ಥೆಗಳು, ಹೋಟೆಲ್ ಸಂಘಟನೆಗಳು ಹಾಗೂ ಸಂಸ್ಥೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಈ ಸೂಚನೆ ನೀಡಲಾಗಿದ್ದು, ತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಹಾಗೂ ಮರುಬಳಕೆಯನ್ನು ಉತ್ತೇಜಿಸಲಿ ಹಸಿ, ಒಣ, ನೈರ್ಮಲ್ಯ ಮತ್ತು ವಿಶೇಷ ಕಾಳಜಿಯ ತ್ಯಾಜ್ಯ ಎಂದು ನಾಲ್ಕು ಭಾಗಗಳಲ್ಲಿ ಕಸವನ್ನು ವಿಂಗಡಿಸಬೇಕು ಎಂದು ಬಿಎಸ್‌ಡಬ್ಲ್ಯುಎಂಎಲ್‌ ಹೇಳಿದೆ.

ಕಾರ್ಯಾಗಾರದಲ್ಲಿ ಮಾತನಾಡಿದ ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ಅವರು, ನಗರದ ದೊಡ್ಡ ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ತ್ಯಾಜ್ಯವನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬುದರ ಕುರಿತು 5 ಪಾಲಿಕೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಭೆಗಳನ್ನು ನಡೆಸಿ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಶೀಘ್ರ ಹೊಸ ಪೋರ್ಟಲ್‌

ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಮೇಲ್ವಿಚಾರಣೆ ಚುರುಕುಗೊಳಿಸಲು ಹೊಸ ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಈ ಮೂಲಕ ಘನ ತ್ಯಾಜ್ಯ ನಿರ್ವಹಣೆಯ ಮೂಲಸೌಕರ್ಯ ಮತ್ತು ದೈನಂದಿನ ಕಾರ್ಯಾಚರಣೆಗಳ ನಿಖರ ವರದಿಯನ್ನು ನಿರ್ವಹಿಸಲಾಗುತ್ತದೆ.ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ಜವಾಬ್ದಾರಿಯನ್ನು ಹೆಚ್ಚಿಸಲು ಮತ್ತು ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನವನ್ನು ಖಚಿತಪಡಿಸಲು ‘ವಿಸ್ತೃತ ಬೃಹತ್ ತ್ಯಾಜ್ಯ ಉತ್ಪಾದಕರ ಜವಾಬ್ದಾರಿ’ ಎಂಬ ಹೊಸ ಹೊಣೆಗಾರಿಕಾ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕರೀಗೌಡ ತಿಳಿಸಿದರು.

ಸಂಸ್ಥೆಯ ಸಿಒಒ ರಮಾಮಣಿ ಮಾತನಾಡಿ, ನಾಗರಿಕರು, ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು, ಸಂಸ್ಕರಣಾ ಘಟಕಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಜವಾಬ್ದಾರಿಗಳ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ವಿವರವಾದ ಮಾಹಿತಿ ನೀಡಿದರು.

ತ್ಯಾಜ್ಯದ ನಿರ್ವಹಣೆಯನ್ನು ವೈಜ್ಞಾನಿಕ ಹಾಗೂ ಪರಿಣಾಮಕಾರಿ ಮಾಡಲು ಹೊಸ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತದೆ. ಸ್ವಚ್ಛ ಬೆಂಗಳೂರಿಗೆ ನಾಗರಿಕರ ಸಹಕಾರ ಬೇಕು ಎಂದು , ಬಿ.ಎಸ್.ಡಬ್ಲ್ಯು.ಎಂ.ಎಲ್‌ ನ  ಸಿಇಓ ಕರೀಗೌಡ ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಕಸ ಎಸೆದವರಿಗೆ ಅನಿರೀಕ್ಷಿತ ರಿಟರ್ನ್ ಗಿಫ್ಟ್! ಒಂದೇ ದಿನ 2.80 ಲಕ್ಷ ರೂ ದಂಡ ಸಂಗ್ರಹ

4 ವಿಧಗಳಲ್ಲಿ ತ್ಯಾಜ್ಯದ ಕಡ್ಡಾಯ ವಿಂಗಡಣೆ

* ಹಸಿ ತ್ಯಾಜ್ಯ: ಜೈವಿಕವಾಗಿ ಕರಗುವ ತ್ಯಾಜ್ಯ.

* ಒಣ ತ್ಯಾಜ್ಯ: ಮರುಬಳಕೆ ಮಾಡಬಹುದಾದ ತ್ಯಾಜ್ಯ.

* ನೈರ್ಮಲ್ಯ ತ್ಯಾಜ್ಯ (ಸ್ಯಾನಿಟರಿ ವೇಸ್ಟ್): ವೈಯಕ್ತಿಕ ನೈರ್ಮಲ್ಯಕ್ಕೆ ಬಳಸಿದ ತ್ಯಾಜ್ಯ.

* ವಿಶೇಷ ಕಾಳಜಿಯ ತ್ಯಾಜ್ಯ: ವಿಲೇವಾರಿ ವೇಳೆ ವಿಶೇಷ ಎಚ್ಚರಿಕೆ ಅಗತ್ಯವಿರುವ ತ್ಯಾಜ್ಯ.

ಇದನ್ನೂ ಓದಿ: ಬೆಂಗಳೂರು: ಕಸ ಎಸೆಯಲು ಹೋದ ಯುವತಿ ತಬ್ಬಿಕೊಂಡು, ಖಾಸಗಿ ಭಾಗ ಮುಟ್ಟಿದ ಕಿಡಿಗೇಡಿಗಳು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎಲ್ಲದಕ್ಕೂ ಉತ್ತರಿಸಲಿದೆ ಕಾಲ: ಡಿಕೆಶಿ ಮತ್ತೆ ಮಾರ್ಮಿಕ ಮಾತು
ದೇವರು ನಮ್ಮ ಪ್ರತಿ ನಡವಳಿಕೆ ಗಮನಿಸುತ್ತಿರುತ್ತಾನೆ: ಮುಖ್ಯಮಂತ್ರಿ ಸಿದ್ದರಾಮಯ್ಯ