ಕರ್ನಾಟಕದ ಕೆಎಸ್‌ಆರ್‌ಟಿಸಿಗೆ ಸಿಕ್ತು ಭರ್ಜರಿ ಜಯ, ಕೇರಳದ ತಕರಾರು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

By Sathish Kumar KH  |  First Published Dec 15, 2023, 5:22 PM IST

ಕೆ‌ಎಸ್‌ಆರ್‌ಟಿಸಿ (KSRTC) ಹೆಸರು‌ ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈಕೋರ್ಟ್‌ನಲ್ಲಿ ಕೇರಳ ಸರ್ಕಾರದ ರಸ್ತೆ ಸಾರಿಗೆ ನಿಗಮವು (RTC) ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಲಾಗಿದೆ.


ಬೆಂಗಳೂರು (ಡಿ.15): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ  ಕೆ‌ಎಸ್‌ಆರ್‌ಟಿಸಿ (KSRTC) ಹೆಸರು‌ ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳುವ ಮೂಲಕ ಮದ್ರಾಸ್ ಹೈಕೋರ್ಟ್‌ನಲ್ಲಿ ಕೇರಳ ಸರ್ಕಾರದ ರಸ್ತೆ ಸಾರಿಗೆ ನಿಗಮವು (RTC) ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಜಾಗೊಳಿಸಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್ಆರ್ ಟಿ ಸಿ’ಎಂದು ಸಂಕ್ಷಿಪ್ತ ಬಳಕೆಗಾಗಿ ಟ್ರೇಡ್ ಮಾರ್ಕ್ ಪ್ರಮಾಣಪತ್ರವನ್ನು ನೀಡಲು ಅರ್ಜಿ ಸಲ್ಲಿಸಿದ್ದು ಭಾರತ ಸರ್ಕಾರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿಯಿಂದ 2013 ರಲ್ಲಿ ಟ್ರೇಡ್ ಮಾರ್ಕ್ ಪ್ರಮಾಣಪತ್ರಗಳನ್ನು ಸಂಸ್ಥೆಯು ದಿನಾಂಕ 1.11.1973 ಯಿಂದ ಬಳಸುತ್ತಿರುವುದನ್ನು ಮಂಜೂರು ಮಾಡಲಾಗಿರುತ್ತದೆ. ಭಾರತ ಸರ್ಕಾರದ ರಿಜಿಸ್ಟ್ರಾರ್ ಆಫ್ ಕಾಪಿ ರೈಟ್ಸ್, ರವರಿಂದ 'KSRTC' ಲೋಗೋ ಮತ್ತು 'ಗಂಡಭೇರುಂಡ ಗುರುತು' ಬಳಕೆಗಾಗಿ ಕಾಪಿ ರೈಟ್ ಅನ್ನು ಸಹ ಪಡೆಯಲಾಗಿರುತ್ತದೆ.

Tap to resize

Latest Videos

ರೈತರ ಸಹಕಾರಿ ಬ್ಯಾಂಕ್ ಸಾಲದ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ ಘೋಷಣೆ

ಇದಾದ ನಂತರ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಚೆನ್ನೈನಲ್ಲಿರುವ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯ (Intellectual  Property Appellate Board) ಮುಂದೆ ಕೇರಳ ಸಾರಿಗೆ ನಿಗಮದಿಂದ ಪ್ರಶ್ನೆ ಮಾಡಲಾಗಿದೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 42 ವರ್ಷಗಳಿಂದ ಕರ್ನಾಟಕ ರಸ್ತೆ ಸಾರಿಗೆ ನಿಮಗದಿಂದ (RTC) ಟ್ರೇಡ್ ಮಾರ್ಕ್ ಅನ್ನು ಬಳಸುವುದರ ಬಗ್ಗೆ ತಿಳಿದಿರುತ್ತದೆ  ಆದ್ದರಿಂದ KSRTCಯು ಪಡೆದಿರುವ  ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಾಗಿದೆ ಎಂದು ಅರ್ಜಿ ಸಲ್ಲಿಸಲು ನೀವು (ಕೇರಳದ ರಸ್ತೆ ಸಾರಿಗೆ ನಿಗಮ) ಅರ್ಹರಾಗಿರುವುದಿಲ್ಲ ಎಂದು KSRTC ವಾದಿಸಿದೆ. 

ಕೇರಳ KRTC ಕೂಡ 2019ರಲ್ಲಿ KSRTCಗೂ ಹಿಂದಿನಿಂದ  ಸಂಕ್ಷಿಪ್ತ ಹೆಸರನ್ನು ಬಳಸುತ್ತಿರುವ ಕುರಿತು  ನೋಂದಣಿಯನ್ನು ಪಡೆದುಕೊಂಡಿದೆ. ನಂತರ ಕೇಂದ್ರ ಸರ್ಕಾರವು ಐಪಿಎಬಿಯನ್ನು ರದ್ದುಗೊಳಿಸಿದ್ದು ಐಪಿಎಬಿ ಮುಂದೆ ಬಾಕಿ ಉಳಿದಿದ್ದ ಪ್ರಕರಣಗಳನ್ನು ಚೆನ್ನೈನಲ್ಲಿರುವ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು. ಈ ಪ್ರಕರಣವು ಡಿ.12ರಂದು ಮದ್ರಾಸ್ ಹೈಕೋರ್ಟ್ ಮುಂದೆ ಬಂದಿದ್ದು, ಕೇರಳ RTC ಸಲ್ಲಿಸಿದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ .

ಕರ್ನಾಟಕದ ಶಾಸಕರಿಗೆ ಕನ್ನಡವೇ ಬರೊಲ್ಲ, ಮರಾಠಿಯಲ್ಲಿ ಮಾತನಾಡಿದ ವಿಠಲ್ ಹಲಗೇಕರ್

ಕೇರಳದ KRTC ಸಲ್ಲಿಸಿದ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್  ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ‌ (KSRTC) ಪ್ರಸಕ್ತ ಹಾಗೂ ಮುಂಬರುವ ದಿನಗಳಲ್ಲಿ ಸಹ ಕೆಎಸ್‌ಆರ್‌ಟಿಸಿ ಹೆಸರನ್ನು ಬಳಸಲು ಯಾವುದೇ ಕಾನೂನು ಅಡಚಣೆಯಿರುವುದಿಲ್ಲ.

click me!