ರಾಜ್ಯದ ಕರಾವಳಿ ಭಾಗದಲ್ಲಿ ಮೇ 13ರಂದು ರಂಜಾನ್

By Suvarna NewsFirst Published May 11, 2021, 10:58 PM IST
Highlights

* ರಾಜ್ಯದ ಕರಾವಳಿ ಭಾಗದಲ್ಲಿ ಮೇ 13ರಂದು ರಂಜಾನ್ 
* ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ಮೇ 13ರಂದು ರಂಜಾನ್ ಹಬ್ಬ ಆಚರಿಸುವಂತೆ ಘೋಷಣೆ
* ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಗುರುವಾರದಂದು (ಮೇ.13) ರಂಜಾನ್ ಹಬ್ಬ

ಮಂಗಳೂರು, (ಮೇ.11): ಇಂದು (ಮಂಗಳವಾರ) ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಭಾಗದಲ್ಲಿ ಮೇ 13ರಂದು ಹಬ್ಬ ಆಚರಿಸುವಂತೆ ಉಳ್ಳಾಲ ಖಾಜಿ ಸೈಯದ್​ ಕೂರತ್ ತಂಗಲ್ ಸೂಚಿಸಿದ್ದಾರೆ.

ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ದುಬೈನಲ್ಲಿ ಗುರುವಾರದಂದು (ಮೇ.13) ರಂಜಾನ್ ಹಬ್ಬ ಆಚರಿಸಲಾಗುತ್ತದೆ. ಪ್ರತಿ ವರ್ಷವೂ ಸಹ ರಾಜ್ಯದ ಇತರೆ ಭಾಗಗಳಿಗಿಂತ ಕರವಾಳಿ ಭಾಗದಲ್ಲಿ ಒಂದು ದಿನ ಮುಂಚೆನೇ ರಂಜಾನ್ ಹಬ್ಬ ಆಚರಿಸುವುದನ್ನು ನಾವು ಇಲ್ಲಿ ಸ್ಮರಿಸಬಹುದು.

ರಂಜಾನ್ ಆಚರಣೆಗೆ ಸರ್ಕಾರದಿಂದ ಗೈಡ್ ಲೈನ್ಸ್ ಬಿಡುಗಡೆ: ಹಬ್ಬ ಇದರಂತೆ ಆಚರಿಸಬೇಕು

ಈ ಬಾರಿ ಕೊವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಈದುಲ್ ಫಿತ್ರ್ ಹಬ್ಬವನ್ನು ಸರಳವಾಗಿ ಮನೆಯಲ್ಲಿಯೇ ಆಚರಿಸಬೇಕು. ಅತ್ಯಂತ ಸರಳವಾಗಿ ಆಚರಿಸಬೇಕು. ಬದವಡಿಗೆ ಹೆಚ್ಚಿನ ದಾನ ನೀಡಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಅಲ್ ಹಾಝ್ ಅಹ್ಮದ್ ಮುಸ್ಲಿಯರ್ ಕರೆ ನೀಡಿದ್ದಾರೆ.

ಪವಿತ್ರ ಹಬ್ಬದ ಸಂಭ್ರಮಾಚರಣೆಯ ಸಮಯದಲ್ಲೇ ಕೊವಿಡ್ ಸೋಂಕು ಸಹ ಇರುವುದರಿಂದ ಹಬ್ಬದ ಆಚರಣೆ ಸೋಂಕಿನ ಹೆಚ್ಚಳ ಆಗಬಾರದು. ಎಲ್ಲರೂ ಮನೆಯಲ್ಲಿಯೇ ಬೆಳಗಿನ ಪ್ರಾರ್ಥನೆ ಸಲ್ಲಿಸಬೇಕು. ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

click me!