ನಿಡುಮಾಮಿಡಿ ಶ್ರೀಗೆ ಕೊರೋನಾ ದೃಢ: ಹೊಸ ಉತ್ತರಾಧಿಕಾರಿ ನೇಮಕಕ್ಕ ಪತ್ರ ಬರೆದ ಸ್ವಾಮೀಜಿ

By Suvarna NewsFirst Published May 11, 2021, 10:04 PM IST
Highlights

* ನಿಡುಮಾಮಿಡಿ ಶ್ರೀಗಳಿಗೆ ತಗುಲಿದ ಕೊರೋನಾ ವೈರಸ್ ಸೋಂಕು 
* ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳಿಗೆ ಹೊಸ ಉತ್ತರಾಧಿಕಾರಿ ನೇಮಕ ಪ್ರಸ್ತಾಪ
* ಮಠದ ಸದ್ಬಕ್ತರಿಗೆ ಸಾರ್ವಜನಿಕರ ಅವಗಾಹನೆಗೆ 6 ಪುಟಗಳ ಪತ್ರ ಬರೆದ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ

ಚಿಕ್ಕಬಳ್ಳಾಪುರ, (ಮೇ.11): ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗೂಳೂರು ನಿಡುಮಾಮಿಡಿ ಮಾನವ ಧರ್ಮ ಪೀಠದ ಪೀಠಾಧಿಪತಿ ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

 ಆದ್ರೆ,   ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿಗಳು ಮಠಕ್ಕೆ ಉತ್ತರಾಧಿಕಾರಿ ನೇಮಕದ ಬಗ್ಗೆ ಪ್ರಸ್ತಾಪಿಸಿ ಸಾರ್ವಜನಿಕರಿಗೆ ಪತ್ರ ಬರೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

 ಸೆಪ್ಪಂಬರ್‌ನಲ್ಲಿ ಮೊದಲ ಕೋವಿಡ್ ಅಲೆಯಲ್ಲಿ ಸೋಂಕಿತನಾಗಿ ಗುಣಮುಖನಾಗಿದ್ದೆ. ಈಗ ಎರಡನೇ ಅಲೆಯಲ್ಲಿ ಸೋಂಕು ದೃಢವಾಗಿದ್ದು ಮಠದಲ್ಲಿ ಚಿಕಿತ್ಸೆ ಪಡೆಯುತ್ತಿರುವೆ.

ಪ್ರತಾಪ್ ಸಿಂಹಗೆ ಕೊರೋ ದೃಢ: ಸ್ವಾಮೀಜಿ, ಸಚಿವರಿಗೆ, ಅಧಿಕಾರಿಗಳಿಗೆ ಆತಂಕ

ಆದರೆ ಸೋಂಕು ಗುಣಮುಖವಾಗದೇ ನನ್ನ ಅಂತ್ಯವಾದರೆ ಪೀಠದ ಪ್ರಗತಿಗೆ ತೊಂದರೆ ಆಗಬಾರದೆಂಬ ಏಕೈಕ ಕಾರಣಕ್ಕೆ ನಾನು ತುರ್ತು ಕಾರ್ಯವೊಂದನ್ನು ನಿರ್ವಹಿಸಬೇಕೆಂದು ಶ್ರೀಗಳು ಉತ್ತರಾಧಿಕಾರಿ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ಪತ್ರ ಬರೆದಿರುವುದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಶ್ರೀಗಳ ಪತ್ರದ  ವಿವರ:
 ಪೂಜ್ಯ ಗುರುಗಳಾದ ಡಾ.ಶ್ರೀ ಜಚನಿ ಕೃಪಾರ್ಶೀವಾದಿಂದ ಪೀಠದ ಸೇವೆಯಲ್ಲಿ 31ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಬರುವ ಜೂನ್ 1ಕ್ಕೆ ನನಗೆ 61 ವರ್ಷ ಆಗುತ್ತದೆ. ಇಷ್ಟು ದಿನ ನಿಸ್ವಾರ್ಥವಾಗಿ  ಬದುಕಿದ್ದು ದಕ್ಷಣ ಭಾರತದ ಪ್ರಾಚೀಣ ಪೀಠಗಳಲ್ಲಿ ಒಂದಾಗಿರುವ ನಿಡುಮಾಮಿಡಿ ಮಾನವ ಧರ್ಮ ಪೀಠ ಗೂಳೂರು ಮಹಾಸಂಸ್ಥಾನಕ್ಕೆ ಯೋಗ್ಯ ಉತ್ತರಾಧಿಕಾರಿಗಳನ್ನು ನೇಮಿಸುವ ತುರ್ತು ಸಂದರ್ಭ ಒದಗಿ ಬಂದಿದೆಯೆಂದು ಶ್ರೀಗಳು ಹೇಳಿದ್ದಾರೆ. 

ಉತ್ತರಾಧಿಕಾರಿ ನೇಮಕಕ್ಕೆ ಶಿಷ್ಯರ-ಅಭಿಮಾನಗಳ ಕರೆದು ಚರ್ಚಿಸಬೇಕಿತ್ತು. ಆದರೆ ಕೊರೋನಾ ಎಲ್ಲವನ್ನು ಕಟ್ಟಿ ಹಾಕಿದೆ. ಆ ಕಾರಣಕ್ಕೆ ಬಹುಮತದದ ಆಧಾರದ ಮೇಲೆ ಸಾರ್ವಜನಿಕ ಸಲಹೆ ಪಡೆದು ಉತ್ತರಾಧಿಕಾರ ನೇಮಕ ಮಾಡಬೇಕಿಂದಿರುವ ಶ್ರೀಗಳು, ಮಠದ ಪರಂಪರೆ ಭಾಗವಾಗಿರುವ ಸ್ಥಿರಪಟ್ಟ, ಚರಪಟ್ಟದ ಜೊತೆಗೆ ವಪಟ್ಟವನ್ನು ಸೇರಿಸಿ ಮಠಕ್ಕೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ನೇಮಕ ಮಾಡಿ ಅಧಿಕಾರ ವೀಕೇಂದ್ರೀಕರಣಗೊಳಿಸುವ ಅಶಯವನನು ಶ್ರೀಗಳು ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ಎರಡು ಸ್ಥಾನಗಳಿಗೆ ಇಬ್ಬರನ್ನು ಮನಸ್ಸಿನಲ್ಲಿಟ್ಟುಕೊಂಡು ಪೀಠದ ವತಿಯಿಂದ ವಿದ್ಯಾಭ್ಯಾಸ ಮಾಡಿಸಿ ಶಿವದೀಕ್ಷೆ ನೀಡಿ ತರಬೇತಿ ನೀಡಿದ್ದಾನೆ. ಮೂರನೇ ಸ್ಥಾನಕ್ಕೆ ಅವಿವಾಹಿತ ಮಹಿಳೆಯಾದರೂ ಜಂಗಮ ಸಮಾಜದ ಮಹಿಳೆ ದೊರೆಯುವುದಾದರೆ ಅವರಿಗೆ ಅವಕಾಶ ನೀಡುವುದಾಗಿ ಶ್ರೀಗಳು ಆಶಯ ವ್ಯಕ್ತಪಡಿಸಿದ್ದಾರೆ.

Posted by Sri Nidumamidi Mahasamsthana Matha on Monday, May 10, 2021
click me!