ಹಾಸನದ ಗ್ರಾಮವೊಂದರಲ್ಲಿ ನಾಟಿ ಹಸುವೊಂದು 2 ತಲೆಯ ಕರುವಿಗೆ ಜನ್ಮ ನೀಡಿದ್ದು, ನಿಸರ್ಗದ ವಿಸ್ಮಯಕ್ಕೆ ಸಾಕ್ಷಿಯಾಗಿದೆ.
ಹಾಸನ (ಡಿ.20): ಈವರೆಗೆ ಎರಡು ತಲೆಯ ಹಾವನ್ನು ಬಹುತೇಕರು ನೋಡಿದ್ದೀರಿ. ಆದರೆ, ಹಾಸನ ಜಿಲ್ಲೆಯಲ್ಲಿ ನಾಟಿ ಹಸುವಿಗೆ ಎರಡು ತಲೆಯ ಕರುವಿಗೆ ಜನ್ಮ ನೀಡಿದೆ. ಈ ಎರಡು ತಲೆಯ ಕರು ಒಂದೇ ದೇಹವನ್ನು ಹೊಂದಿದ್ದು, ಆರೋಗ್ಯವಾಗಿದೆ. ಈ ಕರುವನ್ನು ನೋಡಲು ಸುತ್ತಲಿನ ಗ್ರಾಮಗಳಿಂದ ರೈತರು ಆಗಮಿಸುತ್ತಿದ್ದಾರೆ.
ನಾವು ಸಾಮಾನ್ಯವಾಗಿ ರಾಮಾಯಣದಲ್ಲಿ ಸೀತೆಯನ್ನು ಅಪಹರಣ ಮಾಡಿದ ರಾವಣನಿಗೆ 10 ತಲೆಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಪುರಾವೆಗಳಿಲ್ಲ. ಇದನ್ನು ಬಿಟ್ಟರೆ ಅವಳಿ ಮಕ್ಕಳು, ಸಯಾಮಿ ಮಕ್ಕಳನ್ನು ನಾವು ನೋಡಿದ್ದೇವೆ. ಇನ್ನು ಕಟ್ಟು ಕಥೆಗಳ ಭಾಗವೋ ಅಥವಾ ನೈಜವೋ ಎಂಬಂತೆ 7 ಹೆಡೆಯ ಸರ್ಪ, 5 ತಲೆಯ ಸರ್ಪ ಇದೆ ಎಂದೆಲ್ಲಾ ಹೇಳಲಾಗುತ್ತದೆ. ಈವರೆಗೆ ಅದನ್ನು ಯಾರೊಬ್ಬರೂ ನೋಡಿಲ್ಲ. ಆದರೆ, ಎರಡು ತಲೆಯ ಹಾವುಗಳನ್ನು ನೋಡಿದ್ದೇವೆ. ಈಗ, ಅದೇ ರೀತಿ ಎರಡು ತಲೆಯ ಕರುವೊಂದು ಹಾಸನದಲ್ಲಿ ಜನಿಸಿದೆ.
ಬೆಂಗಳೂರು ಏರ್‌ಪೋರ್ಟ್: ತಮಿಳು ಅಯಾನ್ ಸಿನಿಮಾ ರೀತಿ ಕೊಕೇನ್ ಮಾತ್ರೆಗಳನ್ನು ನುಂಗಿಬಂದ ಡ್ರಗ್ಸ್ ಪೆಡ್ಲರ್!
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಎರಡು ತಲೆಯ ಕರುವಿಗೆ ನಾಟಿ ಹಸು ಜನ್ಮ ನೀಡಿದೆ. ಶಂಕರೇಗೌಡ ಎಂಬುವರ ಮನೆಯ ಹಸು ಎರಡು ತಲೆ ಹಾಗೂ ನಾಲ್ಕು ಕಣ್ಣುಗಳಿರೋ ಹಸುವಿನ ಕರುವಿಗೆ ಇಂದು ಬೆಳಗ್ಗೆ ಜನ್ಮ ನೀಡಿದೆ. ಇನ್ನು ದೇಹ ಒಂದೇ ಇದ್ದ ಹೊಟ್ಟೆ, ನಾಲ್ಕು ಕಾಲು, ಬಾಲ ಎಲ್ಲವೂ ಸಾಮಾನ್ಯವಾಗಿವೆ. ಆರೋಗ್ಯದಿಂದಿರುವ ಕರು ಎರಡೂ ಬಾಯಿಯಿಂದ ಹಾಲನ್ನು ಸೇವನೆ ಮಾಡುತ್ತಿದೆ. ಆದರೆ, ದೇಹವು ಒಂದೇ ಇದ್ದು ಯಾವ ರೀತಿಯಾಗಿ ತನ್ನ ಹಸಿವನ್ನು ನೀಗಿಸಿಕೊಂಡ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತದೆ ಎಂಬುದು ವೈದ್ಯರಿಗೆ ಸವಾಲಾಗಿದೆ.
ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರುಪಾಕ್ಷಪ್ಪಗೆ ಕ್ಲೀನ್ ಚಿಟ್ ಕೊಟ್ಟ ಹೈಕೋರ್ಟ್!
ಕರುವನ್ನು ನೋಡಲು ಆಗಮಿಸುತ್ತಿರುವ ಜನ: ಜಗತ್ತನ್ನು ಒಂದು ವಿಸ್ಮಯ ಎಂದು ಕರೆಯುತ್ತೇವೆ. ಅದೇ ರೀತಿ ಜಗತ್ತಿನ ವಿಸ್ಮಯಗಳಲ್ಲಿ ಒಂದೆಂಬಂತೆ ಈಗ ನಾಟಿ ಹಸುವಿಗೆ 2 ತಲೆಯ ಕರು ಕೂಡ ಜನಿಸಿದೆ. ಆದ್ದರಿಂದ ಶಂಕರೇಗೌಡ ಅವರ ಹಸುವಿನ ಕರುವನ್ನು ನೋಡಲು ಗ್ರಾಮದ ಜನರು ಹಾಗೂ ಸುತ್ತಲಿನ ಹಳ್ಳಿಗಳ ಜನರು ಆಗಮಿಸುತ್ತಿದ್ದಾರೆ. ಇನ್ನು ವೈದ್ಯರು ಕೂಡ ಕರುವನ್ನು ತಪಾಸಣೆ ಮಾಡಿದ್ದು, ಆರೋಗ್ಯವಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಜನರು ಬಂದು ಅದನ್ನು ಮುಟ್ಟುತ್ತಾ ಆಶ್ಚರ್ಯದಿಂದ ನೋಡಿದ್ದಾರೆ. ಇನ್ನು ಕೆಲವರು ಇದು ದೇವರ ಸ್ವರೂಪವೆಂದು ಕೈಮುಗಿಯುತ್ತಿದ್ದಾರೆ. ಒಟ್ಟಾರೆ ನಿಸರ್ಗದ ವಿಸ್ಮಯವನ್ನು ನೋಡಲು ಜನ ಮರಳೋ, ಜಾತ್ರೆ ಮರಳೋ ಎಂಬಂತೆ ಸಾವಿರಾರು ಆಗಮಿಸುತ್ತಿದ್ದಾರೆ.