ಬೆಳಗಾವಿಯಲ್ಲಿ ಹೆಚ್ಚಾಯ್ತು ಮರಾಠಿಗರ ಪುಂಡಾಟ: ಕನ್ನಡ ಬಾವುಟ ಹಾರಿಸಿದ ಕನ್ನಡಿಗರ ಮೇಲೆ ಹಲ್ಲೆ!

By Sathish Kumar KHFirst Published Dec 20, 2023, 2:46 PM IST
Highlights

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕನ್ನಡದ ಧ್ವಜ ಅಳವಡಿಕೆ ಮಾಡಿದ ಯುವಕನ ಮೇಲೆ ಮರಾಠಿಗರು ಗುಂಪು ಮನಸೋ ಇಚ್ಛೆ ಹಲ್ಲೆ ಮಾಡಿದೆ.

ಬೆಳಗಾವಿ (ಡಿ.20): ಕರ್ನಾಟಕದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗನೇ ಸಾರ್ವಭೌಮ ಎಂದು ಸಿನಿಮಾ ಡೈಲಾಗ್ ಮತ್ತು ಕನ್ನಡಪರ ಹೋರಾಟಗಾರರ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಆದರೆ, ಬೆಳಗಾವಿಯಲ್ಲಿ ಕನ್ನಡದ ಧ್ವಜವನ್ನು ಹಾರಿಸಿದ ಕನ್ನಡಿಗರ ಮೇಲೆ ಮರಾಠಿಗರ ದೌರ್ಜನ್ಯ ನಡೆಯುತ್ತಲೇ ಇದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಕನ್ನಡದ ಧ್ವಜ ಅಳವಡಿಕೆ ಮಾಡಿದ ಯುವಕನ ಮೇಲೆ ಮರಾಠಿ ಸಮುದಾಯದ ಹಲವರು ಗುಂಪು ಕಟ್ಟಿಕೊಂಡು ಗ್ರಾಮ ಪಂಚಾಯಿತಿ ಎದುರಲ್ಲೇ ಮನಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಕರ್ನಾಟಕದಲ್ಲಿ ನವೆಂಬರ್‌ ತಿಂಗಳು ಮಾತ್ರ ಕನ್ನಡ ರಾಜ್ಯೋತ್ಸವವನ್ನು ಹೆಚ್ಚಾಗಿ ಆಚರಣೆ ಮಾಡುವ ಮೂಲಕ ನಾವು ಕನ್ನಡಿಗರು ಎಂಬ ದರ್ಪವನ್ನು ಮರೆಯುವುದಕ್ಕೆ ಕಡಿಮೆಯೇನಿಲ್ಲ. ಆದರೆ, ಕನ್ನಡಕ್ಕೆ ಅಥವಾ ಕನ್ನಡಿಗರಿಗೆ ಅನೇಕ ಸ್ಥಳಗಳಲ್ಲಿ ಕುತ್ತು ಬಂದಿದೆ ಎಂಬುದು ಗೊತ್ತಿದ್ದರೂ ತಾತ್ಕಾಲಿಕ ಹೋರಾಟ ಮಾಡಿ ಸುಮ್ಮನೆ ಕುಳಿತುಕೊಳ್ಳುತ್ತೇವೆ. ಇದರಿಂದ ಕನ್ನಡಿಗರ ಮೇಲೆ ಕನ್ನಡ ನಾಡು, ನುಡಿಗೆ ಸಂಬಂಧಪಟ್ಟಂತೆಯೇ ಅನ್ಯ ಭಾಷಿಕರ ಹಲ್ಲೆ ಘಟನೆಗಳು ಹೆಚ್ಚಾಗುತ್ತಿವೆ.

Latest Videos

ಪಿಎಸ್‌ಐ, ಎಫ್‌ಡಿಎ ಪರೀಕ್ಷೆ ನಕಲು ಕಿಂಗ್‌ಪಿನ್‌ ಆರ್.ಡಿ.ಪಾಟೀಲ್ ಮೇಲೆ ಕೋಕಾ ಜಾರಿ: ಇನ್ಮೇಲೆ ಬೇಲ್ ಸಿಗೋದೇ ಇಲ್ಲ!

ಇದೇ ರೀತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಅಳವಡಿಸಿದ್ದ ಕನ್ನಡ ಧ್ವಜ ತೆರವು ಮಾಡುವಂತೆ ಕನ್ನಡಿಗ ಯುವಕನನ್ನ ಮರಾಠಿ ಪುಂಡರು ಥಳಿಸಿ ವಿಕೃತಿ ಮೆರೆದಿದ್ದಾರೆ. ಕರ್ನಾಟಕದಲ್ಲಿಯೇ ಕನ್ನಡಿಗರ ಮೇಲೆ ಅನ್ಯ ಭಾಷಿಕರು ದೌರ್ಜನ್ಯ ಮಾಡುತ್ತಿದ್ದಾರೆ. ಇನ್ನು ಘಟನೆಗೆ ಬರುವುದಾದರೆ ಅಂಕಲಿ ಗ್ರಾಮದಲ್ಲಿ ಶಿವಾಜಿ ಪುತ್ಥಳಿ ಬಳಿ ಕನ್ನಡ ಧ್ವಜವನ್ನು ಅಳವಡಿಕೆ ಮಾಡಲಾಗಿತ್ತು. ಆದರೆ, ಮರಾಠಿಗರು ನೀವು ಕನ್ನಡ ಧ್ವಜವನ್ನು ಏಕೆ ಹಾಕಿದ್ದೀರಿ, ಅಲ್ಲಿ ಕೇಸರಿ ಬಾವುಟ ಮಾತ್ರ ಇರಬೇಕು ಎಂದು ಕನ್ನಡಿಗರೊಂದಿಗೆ ಜಗಳ ಆರಂಭಿಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಕೆಲ ಮರಾಠಾ ಸಮುದಾಯದ ಕಿಡಿಗೇಡಿಗಳಿಂದ  ಕನ್ನಡಿಗರ ಮೇಲೆ ಹಲ್ಲೆ ಮಾಡಲಾಗಿದ್ದು, ಈಗ ಇದರ ವಿಡಿಯೋ ವೈರಲ್ ಆಗಿದೆ. 

‘ಪೇ ಚಲುವ’ ಭಿತ್ತಿಪತ್ರ ಕೇಸಿನ ವಿಚಾರಣೆಗೆ ಹೈಕೋರ್ಟ್‌ ತಡೆ

ಈ ಘಟನೆಗೆ ಸಂಬಂಧಪಟ್ಟಂತೆ ಐದು ಜನ ಮರಾಠಿ ಪುಂಡರ ವಿರುದ್ದ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಬಾಕಿ ನಾಲ್ಕು ಜನರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮ ಎನ್ನುವುದು ಭಾಷಣಕ್ಕೆ ಮಾತ್ರ ಸೀಮಿತ ಆಗುತ್ತಿದೆ ಎನ್ನುವುದು ಇಲ್ಲಿ ಕಂಡುಬರುತ್ತಿದೆ. ಇನ್ನು ಸರ್ಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಬೇಕು.

ಕರ್ನಾಟಕದಲ್ಲಿ ಕನ್ನಡ ಮತ್ತು ಕನ್ನಡಿಗನೇ ಸಾರ್ವಭೌಮ ಎನ್ನುವುದು ಸಿನಿಮಾ ಡೈಲಾಗ್ ಮತ್ತು ಭಾಷಣಕ್ಕೆ ಮಾತ್ರ ಸೀಮಿತ ಎನಿಸುತ್ತಿದೆ..!
ಬೆಳಗಾವಿಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಶಿವಾಜಿ ಮೂರ್ತಿಯ ಬಳಿ ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಕನ್ನಡಿಗ ಯುವಕರ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡಿದ್ದಾರೆ. pic.twitter.com/i0G2MID0AL

— ಸತೀಶ್ ಕಂದಗಲ್ ಪುರ (@sathisho2555)
click me!