
ಬೆಂಗಳೂರು (ಆ.7): ನೇಮ್ ಚೇಂಜಿಂಗ್ ಸರ್ಕಾರ ಇದು, ಗೇಮ್ ಚೇಂಜಿಂಗ್ ಏನೂ ಇಲ್ಲ. ಯಾರ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೂ ಬಿಜೆಪಿಯವರು ಅದರ ಕ್ರೆಡಿಟ್ ಪಡೆಯಲು ಮುಂದಾಗುತ್ತಾರೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದರು.
ಕಲಬುರಗಿಯಲ್ಲಿ ಗುತ್ತಿಗೆದಾರರೊಬ್ಬರ ಸಾವಿನ ಘಟನೆಯ ಕುರಿತು ಮಾತನಾಡಿದ ಖರ್ಗೆ, ಆ ಪ್ರಕರಣದಲ್ಲಿ ನನ್ನ ಹೆಸರು ಇರದಿದ್ದರೂ ನನ್ನನ್ನು ಅಪರಾಧಿಯಂತೆ ಬಿಜೆಪಿಯವರು ಆರೋಪಿಸಿದರು. ಆರ್. ಅಶೋಕ್, ಚಲವಾದಿ ನಾರಾಯಣ ಸ್ವಾಮಿ, ಮತ್ತು ವಿಜಯೇಂದ್ರ ಅವರು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿದರು, ಜಿಲ್ಲೆಯನ್ನು 'ರಿಪಬ್ಲಿಕ್ ಆಫ್ ಕಲಬುರಗಿ' ಎಂದು ಟೀಕಿಸಿದ್ದರು. ಅವರು ಅಧಿಕಾರದಲ್ಲಿದ್ದಾಗ ಕಲಬುರಗಿಯ ರೈತರಿಗಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಆದರೆ ವಿಪಕ್ಷದಲ್ಲಿದ್ದಾಗ ಬಂದು ಟೀಕೆ ಮಾಡಿದರು. ಬಾಬು ಕುಟುಂಬಕ್ಕೆ ಸಂತಾಪ ಸೂಚಿಸಿರುವ ಖರ್ಗೆ, ಈ ಘಟನೆಯ ಕುರಿತು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ ಬೆಂಗಳೂರಿನ ಎಲ್ಲೋ ಲೈನ್ ಮೆಟ್ರೋ ಯೋಜನೆಯ ಕುರಿತು ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೇವಲ 37% ಧನಸಹಾಯ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆಯನ್ನೂ ನಾವೇ ಮಾಡಬೇಕು, ಹಾಗಾದರೆ ಬಿಜೆಪಿಯ ಕೊಡುಗೆ ಏನು? ಎಂದು ಪ್ರಶ್ನಿಸಿದ ಖರ್ಗೆ, ಈ ಯೋಜನೆಯ ಕ್ರೆಡಿಟ್ ಕೇಂದ್ರ ಸರ್ಕಾರಕ್ಕೆ ಸಲ್ಲಬೇಕೆಂದು ಬಿಜೆಪಿಯವರು ನೋಡುತ್ತಿದ್ದಾರೆ ಅಲ್ಲದೆ, ಜಲಜೀವನ ಮಿಷನ್‌ನಲ್ಲಿ ಸಿದ್ದರಾಮಯ್ಯ ಅವರ ಫೋಟೋ ಬಳಕೆಗೆ ಬಿಜೆಪಿಯವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಬಿಟ್ಟಿ ಪ್ರಚಾರಕ್ಕೆ ಬಿಜೆಪಿಯವರನ್ನು ನೋಡಿ ಕಲಿಯಬೇಕು ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ