
ಬೆಂಗಳೂರು (ಜೂ.28): ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ವಲಸಿಗರ ಸಂಖ್ಯೆ ಗಾಬರಿ ಹುಟ್ಟಿಸುತ್ತದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಒಟ್ಟು 13,675 ಅಕ್ರಮ ವಿದೇಶಿ ವಲಸಿಗರು ಇರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಇವರಲ್ಲಿ ಬಹುಪಾಲು ಮಂದಿ ಬೆಂಗಳೂರಿನಲ್ಲೇ ನೆಲೆಸಿರುವುದು ಗಮನಾರ್ಹವಾಗಿದೆ.
ರಾಜಧಾನಿ ಬೆಂಗಳೂರೊಂದರಲ್ಲೇ ಬರೋಬ್ಬರಿ 10,650 ಮಂದಿ ಅಕ್ರಮ ವಿದೇಶಿ ವಲಸಿಗರು ನೆಲೆಸಿರುವುದು ಆತಂಕಪಡುವ ವಿಚಾರ. ಇನ್ನು ಉಳಿದ ಜಿಲ್ಲೆಗಳಲ್ಲಿಯೂ ನೂರಾರು ಮಂದಿ ಪತ್ತೆಯಾಗಿದ್ದಾರೆ. ಜಿಲ್ಲಾವಾರು ಪಟ್ಟಿಯೇನೋ ಸಿದ್ಧವಾಗಿದೆ ಆದರೆ ಶಿಫ್ಟಿಂಗ್ ಯಾವಾಗ? ವಿದೇಶಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಳಕ್ಕೆ ಕಡಿವಾಣ ಬೀಳುವುದು ಯಾವಾಗ? ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ವಲಸಿಗರ ತಡೆಗೆ ಏನು ಕ್ರಮ ಕೈಗೊಂಡಿದ್ದೀರಿ? ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ವಲಸಿಗರು ನೆಲೆಸಿದ್ದರೂ ಗಡಿಪಾರು ಮಾಡಲು ಯಾಕೆ ವಿಳಂಬ? ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಹತ್ತು ಸಾವಿರ ಅಕ್ರಮ ವಿದೇಶಿಗರು ನೆಲೆಸಿದ್ದಾರೆ ಎಂದರೆ ಆತಂಕ ಪಡುವ ವಿಚಾರವಲ್ಲವೇ? ಸಾರ್ವಜನಿಕರ ಎಲ್ಲ ಪ್ರಶ್ನೆ, ಆತಂಕಗಳಿಗೆ ಉತ್ತರ ಬೇಕಿದೆ. ಅಕ್ರಮ ವಿದೇಶಿ ವಲಸಿಗರ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳುವ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.
ವಿದೇಶಿ ಅಕ್ರಮ ವಲಸಿಗರ ಜಿಲ್ಲಾವಾರು ಮಾಹಿತಿ :
ಬೆಂಗಳೂರು : 10,650
ಬೆಳಗಾವಿ : 458
ಬಳ್ಳಾರಿ : 53
ಚಾಮರಾಜನಗರ : 03
ಚಿಕ್ಕಬಳ್ಳಾಪುರ : 38
ಚಿತ್ರದುರ್ಗ : 08
ದಕ್ಷಿಣ ಕನ್ನಡ : 268
ದಾವಣಗೆರೆ : 20
ಧಾರವಾಡ : 10
ಹಾಸನ : 05
ಹುಬ್ಬಳ್ಳಿ/ಧಾರವಾಡ : 35
ಕಲಬುರಗಿ : 09
ಕೋಲಾರ : 13
ಕೊಡಗು : 10
ಕೊಪ್ಪಳ : 10
ಮಂಡ್ಯ : 37
ಮೈಸೂರು : 810
ರಾಯಚೂರು : 19
ರಾಮನಗರ : 191
ಶಿವಮೊಗ್ಗ : 21
ತುಮಕೂರು : 40
ಉಡುಪಿ : 458
ಉತ್ತರ ಕನ್ನಡ : 496
ವಿಜಯಪುರ : 03
ವಿಜಯನಗರ : 08
ಒಟ್ಟು : 13,675
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ