ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ ಪ್ರಕರಣ ಎಚ್ಚರಿಕೆ ಗಂಟೆ: ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ

Kannadaprabha News   | Kannada Prabha
Published : Jun 27, 2026, 11:36 AM IST
KS Eshwarappa

ಸಾರಾಂಶ

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಲೂಟಿ ಪ್ರಕರಣದ ಬಗ್ಗೆ ಉಗ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಬಿಜೆಪಿಗೆ ಬಂದ ಶಾಸಕರು ಪಕ್ಷ ಕಟ್ಟಲು ಬಂದವರಲ್ಲ ಎಂದು ಸ್ಪಷ್ಟಪಡಿಸಿದ ಅವರು, ರಾಜಕೀಯದಲ್ಲಿನ ಕುದುರೆ ವ್ಯಾಪಾರವನ್ನು ಟೀಕಿಸಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಜೊತೆಗೆ, ಎನ್‌ಸಿಇಆರ್‌ಟಿ ಪಠ್ಯಪುಸ್ತಕದ ಹೆಸರಿನ ಬಗ್ಗೆಯೂ ಅವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಶಿವಮೊಗ್ಗ: ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿ ಆಗಿರುವ ಘಟನೆ ವಿಶ್ವದಾದ್ಯಂತ ಇರೋ ರಾಮಭಕ್ತರಿಗೆ ಆಘಾತ ತಂದಿದೆ. ಈ ಲೂಟಿ ಕೂಡ ದೊಡ್ಡ ಎಚ್ಚರಿಕೆ ಗಂಟೆ. ಈ ಕೃತ್ಯದಲ್ಲಿ ಯಾರೇ ಇದ್ದರೂ ಉಗ್ರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಬರ್ ಧ್ವಂಸ ಮಾಡಿದ ಜಾಗದಲ್ಲಿ ಅಯೋಧ್ಯೆಯ ಭವ್ಯವಾದ ರಾಮಮಂದಿರ ಕಟ್ಟಲಾಗಿದೆ. ಸರ್ಕಾರದ ಹಣವಿಲ್ಲದೇ, ಭಕ್ತರ ಹಣದಿಂದ ರಾಮಮಂದಿರ ಕಟ್ಟಲಾಯಿತು. ಈಗ ಕಳೆದ 6 ತಿಂಗಳ ಹಿಂದೆ ದೇವಾಲಯದ ಸಿಸಿಟಿವಿ ಹಾಳು ಮಾಡಿ 200 ಬೆಳ್ಳಿಯ ಇಟ್ಟಿಗೆ, ಬಂಗಾರದ ಆಭರಣಗಳನ್ನು ದೋಚಿರುವುದು ಆಶ್ಚರ್ಯ ಮತ್ತು ನೋವು ತಂದಿದೆ ಎಂದರು.

ರಾಮಮಂದಿರವನ್ನು ಕಟ್ಟುವುದನ್ನು ವಿರೋಧಿಸುತ್ತಿರುವ ಕೂಗು ಈಗ ಜೋರಾಗಿದೆ. ಈ ವಿಚಾರವನ್ನು ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಮಧ್ಯೆ ತಂದು ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಅಲ್ಲಿ ಆಡಳಿತ ಮಂಡಳಿಯು ಜವಬ್ದಾರಿ ತೆಗೆದುಕೊಂಡು ಇದನ್ನು ಬೇಧಿಸಬೇಕಿದೆ. ಇಲ್ಲದಿದ್ದರೆ ಪುಣ್ಯ ಕ್ಷೇತ್ರದ ಬಗ್ಗೆ ಇರುವ ಗೌರವ ಕಡಿಮೆ ಆಗಲಿದೆ. ಈ ಪ್ರಕರಣದಲ್ಲಿ ಅಯೋಧ್ಯೆಯ ದೇವಾಲಯದ ಟ್ರಸ್ಟಿಗಳೇ ಇದ್ದರೂ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕ ಟೀಕಾಕಾರರಿಗೆ ಈ ಮೂಲಕ ಉತ್ತರ ನೀಡಲಿ ಎಂದರು.

ಹಲವಾರು ಜನರು ಈ ಘಟನೆ ಬಗ್ಗೆ ಈಗ ಬಹಳ ಟೀಕೆ ಮೂಲಕ ಮಾತನಾಡುತ್ತಿದ್ದಾರೆ. ಕುಟುಂಬದಲ್ಲಿ ಯಾರೋ ಒಬ್ಬ ಕಳ್ಳ ಇದ್ದ ಕೂಡಲೇ ಇಡೀ ಕುಟುಂಬ ಕಳ್ಳತನ ಮಾಡಿದೆ ಎಂದಲ್ಲ. ಯಾರು ಅಲ್ಲಿ ಕಳ್ಳತನ ಮಾಡಿದ್ದಾರೋ ಅವರ ವಿರುದ್ಧ ಕಠಿಣ ಕ್ರಮ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿಗೆ ಬಂದ ಶಾಸಕರು ಪಕ್ಷ ಕಟ್ಟಲು ಬಂದವರಲ್ಲ

ಈ ಹಿಂದೆ ಬಿಜೆಪಿಗೆ ಬಂದ 17 ಜನ ಶಾಸಕರು ಪಕ್ಷ ಕಟ್ಟಲು ಬಂದಿರಲಿಲ್ಲ, ತಾವು ಯಾವುದೇ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಈ ಮಾತು ಹೇಳಿಲ್ಲ. ಬದಲಿಗೆ ಪ್ರಸ್ತುತ ರಾಜಕೀಯದಲ್ಲಿ ನಡೆಯುತ್ತಿರುವ ಹಣದ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿರುವುದಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದರು.

ಇತ್ತೀಚೆಗೆ ನಡೆದ ರಾಜ್ಯಸಭೆ ಹಾಗೂ ಎಂಎಲ್‌ಸಿ ಚುನಾವಣೆಯ ಅಡ್ಡಮತದಾನದ ಕುರಿತು ನಾನು ಮಾತನಾಡಿದ್ದೆ. ಈ ವೇಳೆ ಬಿ.ಸಿ. ಪಾಟೀಲ್, ಅಥವಾ ಶಿವರಾಂ ಹೆಬ್ಬಾರ್ ಅವರ ಹೆಸರನ್ನು ನಾನು ಎಲ್ಲೂ ಪ್ರಸ್ತಾಪಿಸಿಲ್ಲ. ಆದರೆ, ಕೆಲವರು ನನ್ನ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ರಾಜಕೀಯ ಮಾಡುತ್ತಿದ್ದಾರೆ. ಅಂದು ಆ ಶಾಸಕರು ಬಂದಿದ್ದಕ್ಕೇ ಬಿಜೆಪಿ ಅಧಿಕಾರಕ್ಕೆ ಬಂದಿತು ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ಅವರ್ಯಾರೂ ಪಕ್ಷ ಕಟ್ಟುವ ಉದ್ದೇಶದಿಂದ ಬಿಜೆಪಿಗೆ ಬಂದಿರಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇತ್ತೀಚಿನ ಎಂಎಲ್‌ಸಿ ಚುನಾವಣೆಯಲ್ಲಿ ಇದೇ ಕಾಂಗ್ರೆಸ್ ಸರ್ಕಾರ ಕೂಡ ಶಾಸಕರನ್ನು ಖರೀದಿಸಿರುವುದು ನಿಜ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ತಕ್ಷಣ ಈ ಕುದುರೆ ವ್ಯಾಪಾರವನ್ನು ಗಮನಿಸಬೇಕಿದೆ. ರಾಜಕೀಯದಲ್ಲಿ ಇದೇ ರೀತಿ ಶಾಸಕರ ಖರೀದಿ ಪ್ರಕ್ರಿಯೆ ಮುಂದುವರಿದರೆ, ರಾಜ್ಯದ ಈಗಿನ ಕಾಂಗ್ರೆಸ್ ಸರ್ಕಾರವೂ ಪತನವಾಗುವುದು ನೂರಕ್ಕೆ ನೂರು ಗ್ಯಾರಂಟಿ ಎಂದು ಹೇಳಿದರು.

ಎನ್‌ಸಿಇಆರ್‌ಟಿಯ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಸಿದ್ದಾರೆ. ಇದು ಈಗ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ. ಈ ದೇಶದ ಜನ ಅದಕ್ಕೆ ಬೆಂಬಲ ಕೊಡುವುದಿಲ್ಲ. ಇಲ್ಲಿ ಕಂಸನ ವಂಶಸ್ಥರೂ ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಆಕ್ರಮಣ ಇದೇ ಮೊದಲಲ್ಲ. ಕೃಷ್ಣ ರಾಮನ ಬಗ್ಗೆ ಟೀಕೆ ಮಾಡುವವರು ಈ ದೇಶದಲ್ಲಿದ್ದಾರೆ. -ಕೆ.ಎಸ್‌.ಈಶ್ವರಪ್ಪ, ಮಾಜಿ ಡಿಸಿಎಂ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟೆಲ್‌ಗೆ ನುಗ್ಗಿ ಧಮ್ಕಿ, ಸಹಾಯಕ್ಕಾಗಿ ಕರೆ ಮಾಡಿದ ಮಾಲೀಕನ ಮೇಲೆ ಪೊಲೀಸ್ ಕೆಂಡಾಮಂಡಲ
Karnataka News Live: ಕರಾವಳಿ-ಮುಂಬೈ ಪ್ರಯಾಣಿಕರಿಗೆ ಸಿಹಿ ಸುದ್ದಿ, ಮಂಗಳೂರು-ಬಾಂದ್ರಾ ಟರ್ಮಿನಸ್ ಹೊಸ ರೈಲು ಸೇವೆ ಶೀಘ್ರ!