Caste abuse: ಸ್ಪೀಕರ್‌ ಹೊರಟ್ಟಿ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ

By Kannadaprabha News  |  First Published Feb 1, 2022, 6:42 AM IST

*  ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರ ಹಾಜರಿ ಇಲ್ಲ
*  ಎಫ್‌ಐಆರ್‌ನಲ್ಲಿ ಆರೋಪಿ ವಿರುದ್ಧ ಗಂಭೀರ ವಿಚಾರ ಇಲ್ಲ
*  ಸುಳ್ಳು ಜಾತಿನಿಂದನೆ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಲಿ
 


ಬೆಂಗಳೂರು(ಫೆ.01):  ಜಾತಿ ನಿಂದನೆ(Caste abuse) ಆರೋಪ ಸಂಬಂಧ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti) ಅವರ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌(High Court) ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಜಾತಿ ನಿಂದನೆ ಆರೋಪ ಸಂಬಂಧ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರು ಈ ಆದೇಶ ಮಾಡಿದರು. 

ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರು ಇರಲಿಲ್ಲ. ಎಫ್‌ಐಆರ್‌ನಲ್ಲಿಯೂ(FIR) ಅವರ ವಿರುದ್ಧ ಗಂಭೀರ ವಿಚಾರಗಳು ಇಲ್ಲ. ಅರ್ಜಿದಾರರು ವಿಧಾನ ಪರಿಷತ್‌(Vidhan Parishat) ಸಭಾಪತಿಯಾಗಿದ್ದು(Speaker), ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರಕರಣವನ್ನು ನ್ಯಾಯಾಲಯ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಹಂತದಲ್ಲಿ ತಡೆ ನೀಡಬಹುದಾಗಿದೆ ಎಂದ ನ್ಯಾಯಪೀಠ, ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿತು.

Tap to resize

Latest Videos

Caste Abuse: ಸಭಾಪತಿ ಹೊರಟ್ಟಿ ವಿರುದ್ಧ ಜಾತಿ ನಿಂದನೆ ಪ್ರಕರಣ

ಅಲ್ಲದೆ, ಪ್ರಕರಣದಲ್ಲಿ ಉಳಿದವರ ವಿರುದ್ಧ ಪೊಲೀಸರು(Police) ಮುಂದಿನ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಇದೇ ವೇಳೆ ನ್ಯಾಯಪೀಠ ಸ್ಪಷ್ಟಪಡಿಸಿದೆ. ಹಾಗೆಯೇ, ಪ್ರಕರಣದ ದೂರುದಾರರಿಗೆ ತುರ್ತು ನೋಟಿಸ್‌(Notice) ಹಾಗೂ ರಾಜ್ಯ ಸರ್ಕಾರ(Government of Karnataka) ಸೇರಿ ಉಳಿದ ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ದುರುದ್ದೇಶದಿಂದ ಹೊರಟ್ಟಿ ವಿರುದ್ಧ ಜಾತಿನಿಂದನೆ ಪ್ರಕರಣ

ಧಾರವಾಡ(Dharwad): ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ಪರ್ಧಿಸಲಿರುವ ವಿಧಾನಪರಿಷತ್‌ ಚುನಾವಣೆ ಸಮೀಪಿಸಿದಾಗ ಸರ್ವೋದಯ ಟ್ರಸ್ಟ್‌ ಮುನ್ನೆಲೆಗೆ ಬರುತ್ತಿದ್ದು, ದುರುದ್ದೇಶದಿಂದ ಬಸವರಾಜ ಹೊರಟ್ಟಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಂ. ಅರವಿಂದ ಆರೋಪಿಸಿದರು.

ಸರ್ವೋದಯ ಶಿಕ್ಷಣ ಟ್ರಸ್ಟ್‌ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ದೊರೆತ ಹಿನ್ನೆಲೆ ಭರತ ಮುಗದೂರ ಹಾಗೂ ಅವರ ಬೆಂಬಲಿಗರು ಗಲಾಟೆ ಮಾಡಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಾಕಷ್ಟು ಬಾರಿ ಇಬ್ಬರ ಮಧ್ಯೆ ರಾಜಿ ಸಂಧಾನಕ್ಕೆ ಯತ್ನಿಸಿದೆ. ಬಸವರಾಜ ಹೊರಟ್ಟಿ ಅವರು ತಮ್ಮ ಪರವಾದ ದಾಖಲೆಗಳನ್ನು ತಂದರೂ, ಭರತ ಮುಗದೂರ ಇಂದಿಗೂ ಯಾವುದೇ ದಾಖಲೆಗಳನ್ನು ತೋರಿಸಲು ಮುಂದಾಗಿಲ್ಲ. ದಾಖಲೆಗಳಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ನ್ಯಾಯಾಲಯದಲ್ಲಿ ತಮ್ಮ ಪರ ತೀರ್ಪು ಬರುವುದಿಲ್ಲ ಎಂಬುದು ಅರಿತ ಭರತ ಈ ಪ್ರಕರಣ ಜಾತಿ ಸಂಘರ್ಷಕ್ಕೆ ತಿರುಗಿಸುವ ಹುನ್ನಾರ ಮಾಡಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ ಬಗ್ಗೆ ಸಂಶಯ ಇದೆ. ಇದರ ಸತ್ಯಾಸತ್ಯತೆ ತನಿಖೆ ಮಾಡಬೇಕು. ವರ್ಷದಿಂದ ಪೊಲೀಸರು ಇಂತಹ ಪ್ರಕರಣ ನಿರ್ವಹಿಸಲು ವಿಫಲರಾಗಿದ್ದು, ಅನುಕೂಲಕ್ಕೆ ತಕ್ಕಂತೆ ಬಳಿಸಿದ್ದಾರೆ ಎಂದರು.

ವಿಧಾನಸೌಧದಿಂದ ಅಧಿಕಾರಿಗಳ ಕಚೇರಿ ಸ್ಥಳಾಂತರಿಸಿ: ಹೊರಟ್ಟಿ

ಸರ್ವೋದಯ ಟ್ರಸ್ಟ್‌ ವಿವಾದದ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸುಳ್ಳು ಪ್ರಕರಣ ದಾಖಲಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಫೆ. 2ರಂದು ಮುಖ್ಯಮಂತ್ರಿಗಳಿಗೆ ಭೇಟಿ ಮಾಡುತ್ತಿದ್ದೇನೆ. ಪ್ರಕರಣದ ವಿವರವನ್ನು ಅವರಿಗೆ ಸಲ್ಲಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಜು ಗುಡ್ಡದ, ರವಿ. ವಿ, ಮಂಗೇಶ ತಿಮಕಾಪೂರ, ಚಂದ್ರಶೇಖರ ತಳವಾರ ಇದ್ದರು.

ಸುಳ್ಳು ಜಾತಿನಿಂದನೆ ಪ್ರಕರಣಗಳ ಬಗ್ಗೆ ಸರ್ಕಾರ ಎಚ್ಚರ ವಹಿಸಲಿ

ಧಾರವಾಡ: ರಾಜ್ಯದಲ್ಲಿ ಇತ್ತೀಚೆಗೆ ಸುಳ್ಳು ಜಾತಿನಿಂದನೆ ಪ್ರಕರಣ ಹೆಚ್ಚಾಗುತ್ತಿದ್ದು, ಜಾತಿನಿಂದನೆ ಕಾನೂನು ಮರುಪರಿಶೀಲಿಸಬೇಕೆಂದು ‘ಅಖಿಲ ಭಾರತ ವೀರಶೈವ ಮಹಾಸಭಾ’ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಆಗ್ರಹಿಸಿದ್ದರು. 
 

click me!