ನರ್ಸ್‌ಗೆ ಪಾಸ್‌ಪೋರ್ಟ್ ಮರಳಿಸುವ ಬಗ್ಗೆ ಕ್ರಮಕ್ಕೆ ಹೈಕೋರ್ಟ್ ಸೂಚನೆ

By Kannadaprabha News  |  First Published Jun 6, 2024, 1:04 PM IST

ನಿಷೇಧ ಹೇರಿದ್ದರೂ ಉದ್ಯೋಗ ನಿಮಿತ್ತ ಯೆಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಆರೋಪದ ಮೇಲೆ ವಶಪಡಿಸಿಕೊಂಡಿರುವ ಪಾಸ್‌ಪೋರ್ಟ್ ಹಿಂದುರುಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಶುಶ್ರೂಷಕಿಯೊಬ್ಬರ ಮನವಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. 


ಬೆಂಗಳೂರು (ಜೂ.06): ನಿಷೇಧ ಹೇರಿದ್ದರೂ ಉದ್ಯೋಗ ನಿಮಿತ್ತ ಯೆಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಆರೋಪದ ಮೇಲೆ ವಶಪಡಿಸಿಕೊಂಡಿರುವ ಪಾಸ್‌ಪೋರ್ಟ್ ಹಿಂದುರುಗಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಶುಶ್ರೂಷಕಿಯೊಬ್ಬರ ಮನವಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ. ಯೆಮನ್ ದೇಶಕ್ಕೆ ತೆರಳಲು ಮುಂದಾಗಿದ್ದ ಕಾರಣಕ್ಕೆ ತನ್ನ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗಂಡಿಬಾಗಿಲು ನೆರಿಯಾದ ಶುಶೂಷಕಿ ಶೇನಿ ಜಾಯ್ (48) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ. 

ವಿಚಾರಣೆ ವೇಳೆ ಶೇನಿ ಜಾಯ್ ಪರ ವಕೀಲರು, ಅರ್ಜಿದಾರೆ 201031180 ಯೆಮನ್‌ನಲ್ಲಿ ಶುಶೂಷಕಿಯಾಗಿ ಉದ್ಯೋಗ ಮಾಡುತ್ತಿದ್ದಾರೆ. 2014, 2020 ಮತ್ತು 2023ರಲ್ಲಿ ಭಾರತಕ್ಕೆ ಬಂದು ಹೋಗಿದ್ದಾರೆ. ಯೆಮನ್ ಪ್ರವಾಸ ಕೈಗೊಳ್ಳುವುದನ್ನು ನಿಷೇಧಿಸಿ ವಿದೇಶಾಂಗ ಸಚಿವಾಲಯ 2017ರಲ್ಲಿ ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಅರ್ಜಿದಾರರಿಗೆ ಮಾಹಿತಿ ಇಲ್ಲ. 2023ರ ಆ.20ರಂದು ಅರ್ಜಿದಾರರು ಯೆಮನ್ ದೇಶಕ್ಕೆ ಹೋಗುತ್ತಿದ್ದಾಗ ದೆಹಲಿ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಅವರ ಪಾಸ್ ಪೋರ್ಟ್ ಅನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದು, ಏಳು ವರ್ಷಗಳ ಹಿಂದಿರುಗಿಸುವುದಿಲ್ಲ ಎಂದು ತಿಳಿಸಿದ್ದಾರೆ. ತಿಳಿಯದೆ ಮಾಡಿದ ತಪ್ಪಿಗೆ ಏಳು ವರ್ಷ ಪಾಸ್ ಪೋರ್ಟ್ ಮುಟ್ಟಗೋಲು ಹಾಕಿಕೊಂಡರೆ ವಿದೇಶದಲ್ಲಿ ಅರ್ಜಿದಾರೆಯ ಉದ್ಯೋಗಕ್ಕೆ ಕುತ್ತು ಬರಲಿದೆ. 

Latest Videos

undefined

ತನ್ನ ಪ್ರಮಾದದಿಂದ ಲೋಕಸಭೆಯಲ್ಲಿ 6 ಕಡೆ ಸೋತ ಬಿಜೆಪಿ?: ಬಿ.ವೈ.ವಿಜಯೇಂದ್ರ ಹೇಳಿದ್ದೇನು?

ಹಾಗಾಗಿ, ಪಾಸ್‌ಪೋರ್ಟ್ ಹಿಂದಿರುಗಿಸಲು ಕೇಂದ್ರ ಸರ್ಕಾರದ ಸಂಬಂಧಪಟ್ಟ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಅರ್ಜಿದಾರರ ಮನವಿಗೆ ಸ್ಪಂದಿಸಿದ ನ್ಯಾಯಪೀಠ, ವಿದೇಶದಲ್ಲಿ ಉದ್ಯೋಗ ಹೊಂದಲು ಅರ್ಜಿದಾರರಿಗೆ ಪಾಸ್ ಪೋರ್ಟ್ ಅವಶ್ಯಕತೆ ಇದೆ. ಏಳು ವರ್ಷ ಪಾಸ್‌ಪೋರ್ಟ್ ಹಿಂದಿರುಗಿಸದೆ ಹೋದಲ್ಲಿ ಆ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ. ಆದ್ದರಿಂದ ನಾಲ್ಕು ವಾರದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಪಾಸ್‌ಪೋರ್ಟ್ ಹಿಂದಿರುಗಿಸಬೇಕೆಂಬ ಅರ್ಜಿದಾರೆಯ ಮನವಿ ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

click me!