ಕೇರಳ ಸಿಎಂ ಪುತ್ರಿಯ 135 ಕೋಟಿ ವಂಚನೆ ಕೇಸ್, ವೀಣಾ ವಿಜಯನ್ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್

By Suvarna NewsFirst Published Feb 16, 2024, 4:20 PM IST
Highlights

ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಪುತ್ರಿ ಮೇಲೆ ಕೇಳಿ ಬಂದಿರುವ  135 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಎಫ್ಐಒ ತನಿಖೆ ಪ್ರಶ್ನಿಸಿ ವೀಣಾ ವಿಜಯನ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಬೆಂಗಳೂರು (ಫೆ.16): ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರ ಪುತ್ರಿ ಮೇಲೆ ಕೇಳಿ ಬಂದಿರುವ  135 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಎಫ್ಐಒ ತನಿಖೆ ಪ್ರಶ್ನಿಸಿ ವೀಣಾ ವಿಜಯನ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಕೇಂದ್ರದ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದೆ.  ನ್ಯಾ.ಎಂ.ನಾಗಪ್ರಸನ್ನ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.

ಪಿಣರಾಯಿ ವಿಜಯನ್ ಪುತ್ರಿ ಟಿ.ವೀಣಾ  ಎಕ್ಸಲಾಜಿಕ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕಿಯಾಗಿದ್ದಾರೆ. ಈ ವೀಣಾ ಕಂಪೆನಿ ಮತ್ತು  ಕೊಚ್ಚಿನ್ ಮಿನರಲ್ಸ್‌- ರುಟೈಲ್ ಲಿಮಿಟೆಡ್‌ ನಡುವಿನ ಆರ್ಥಿಕ ವಹಿವಾಟುಗಳ ಕುರಿತ ವಿವಾದಕ್ಕೆ ಸಂಬಂಧಿಸಿ  ಕೇಂದ್ರ ಸರ್ಕಾರದ ಅಧೀನದ ಗಂಭೀರ ವಂಚನೆಗಳ ತನಿಖಾ ಕಚೇರಿಗೆ (ಎಸ್‌ಎಫ್‌ಐಒ) ಪ್ರಕರಣವನ್ನು ಒಪ್ಪಿಸಲಾಗಿದೆ. ಎಸ್‌ಎಫ್‌ಐಒ ತನಿಖೆ ಪ್ರಶ್ನಿಸಿ ವೀಣಾ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು ಅದು ಈಗ ವಜಾಗೊಂಡಿದೆ. ಈಗಾಗಲೇ ವೀಣಾ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಹೈಕೋರ್ಟ್ ಎಸ್‌ಎಫ್‌ಐಒ  ಸೂಚನೆ ನೀಡಿತ್ತು.

ವೈದ್ಯಕೀಯ ಮತ್ತು ಉನ್ನತ ಶಿಕ್ಷಣಕ್ಕೆ ಸಿದ್ದರಾಮಯ್ಯ ಘೋಷಿಸಿದ ಅನುದಾನಗಳಿವು

ಅಲ್ಲದೆ, ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ಎಸ್‌ಎಫ್‌ಐಒಗೆ ಒದಗಿಸಬೇಕು. ಅರ್ಜಿದಾರರ ವಿರುದ್ಧ ಬಂಧನದಂತಹ ಯಾವುದೇ ಬಲವಂತದ ಕ್ರಮವನ್ನು ಎಸ್‌ಫ್‌ಐಒ ಕೈಗೊಳ್ಳಬಾರದು ಎಂದು ಈಗಾಗಲೇ ಸೂಚಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಕಂಪನಿಗಳ ನಡುವಿನ ಆರ್ಥಿಕ ವ್ಯವಹಾರದ ಮಾಹಿತಿ ನೀಡದಿರುವುದು ವಂಚನೆಯಾಗುವುದಿಲ್ಲ. ಯಾವುದೇ ಅಪರಾಧ ಎಸಗದಿದ್ದರೂ ಅರ್ಜಿದಾರರ ವಿರುದ್ಧ ಎಸ್‌ಎಫ್‌ಓ ತನಿಖೆಗೆ ಕೇಂದ್ರ ಸರ್ಕಾರ ಆದೇಶಿಸಿರುವುದು ಕಾನೂನುಬಾಹಿರ ಕ್ರಮವಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಅಲ್ಪಸಂಖ್ಯಾತ ಸಮುದಾಯಕ್ಕೆ ಬಂಪರ್ ಘೋಷಿಸಿದ ಸಿದ್ದರಾಮಯ್ಯ, 393 ಕೋಟಿ ರೂ ಅನುದಾನ ಮೀಸಲು

ಕೇಂದ್ರ ಸರ್ಕಾರದ ಪರ ವಕೀಲರು, ಕೊಚ್ಚಿನ್ ಮಿನರಲ್ಸ್ ಕಂಪನಿ ಅರ್ಜಿದಾರರ ಆಪೇಕ್ಷೆಯಂತೆ 135 ಕೋಟಿ ರು. ರಾಜಕೀಯ ವ್ಯಕ್ತಿಗಳಿಗೆ ನೀಡಿದೆ ಹಾಗೂ ಸಾಫ್ಟ್‌ವೇರ್‌ ಸೇವೆಗೆಂದು 1.72 ಕೋಟಿ ರು. ನೀಡಿದೆ. ಆದರೆ, ವಾಸ್ತವವಾಗಿ ಯಾವುದೇ ಸೇವೆ ನೀಡದಿದ್ದರೂ ಎಕ್ಸಾಲಜಿಕ್‌ ಸಲ್ಯೂಷನ್ಸ್‌ ಕಂಪನಿಗೆ ಕೊಚ್ಚಿನ್ ಮಿನರಲ್ಸ್ ಹಣ ಸಂದಾಯ ಮಾಡಿದೆ. ಮಾಹಿತಿ ಕೇಳಿದರೆ ಜಿಎಸ್ ಟಿ ಪಾವತಿಸಿರುವುದಾಗಿ ಕಂಪನಿ ಹೇಳುತ್ತಿದೆ. ಈ ಎರಡು ಕಂಪನಿಗಳ ನಡುವಿನ ಹಲವು ವ್ಯವಹಾರಗಳು ಅನುಮಾನಾಸ್ಪದವಾಗಿವೆ ಎಂದು ಆರೋಪಿಸಿದರು.

click me!