ರಾಜ್ಯದ ಜನತೆಗೆ ಮೂರುನಾಮ ಹಾಕಿ ಮೋಸ ಮಾಡಿದ ಬಜೆಟ್: ಕಾರಜೋಳ ವ್ಯಂಗ್ಯ

By Ravi JanekalFirst Published Feb 16, 2024, 3:56 PM IST
Highlights

ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಇಂದಿನ ಬಜೆಟ್ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಾಡಿನ ಜನತೆಗೆ ಮೂರು ನಾಮ ಹಾಕಿ ಮೋಸ ಮಾಡಿದಂತಹ ಬಜೆಟ್ ಇದು ಎಂದು ರಾಜ್ಯ ಬಜೆಟ್ ವಿರುದ್ಧ ಮಾಜಿ ಸಿಎಂ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದ್ದಾರೆ.

ಬಾಗಲಕೋಟೆ (ಫೆ.16): ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಇಂದಿನ ಬಜೆಟ್ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ನಾಡಿನ ಜನತೆಗೆ ಮೂರು ನಾಮ ಹಾಕಿ ಮೋಸ ಮಾಡಿದಂತಹ ಬಜೆಟ್ ಇದು ಎಂದು ರಾಜ್ಯ ಬಜೆಟ್ ವಿರುದ್ಧ ಮಾಜಿ ಸಿಎಂ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈ ಬಜೆಟ್‌ನಿಂದ ಯಾವುದೇ ಹೊಸ ಯೋಜನೆಗಳು ಇಲ್ಲ. ಹೊಸ ಕಾಮಗಾರಿಗಳಿಗೆ ಅನುದಾನ ಇಲ್ಲ. ಯುವ ಜನತೆಯನ್ನು ಕಡೆಗಣಿಸಲಾಗಿದೆ. ಎಸ್ಸಿ, ಎಸ್ಟಿ ಜನಾಂಗದ ಅನುದಾನವನ್ನು ದುರುಪಯೋಗ ಮಾಡಿಕೊಂಡಿರುವ ಬಜೆಟ್ಟಾಗಿದೆ. ನೀರಾವರಿ ಯೋಜನೆಗೆ ಯುಕೆಪಿಗೆ ಸಹ ಮೋಸ ಮಾಡಲಾಗಿದೆ. ಸಿದ್ದರಾಮಯ್ಯ ಎರಡು ಬಜೆಟ್ ಮಾಡಿದ್ರೂ ಯುಕೆಪಿಗೆ ಒಂದೇ ಒಂದು ರೂಪಾಯಿ ನೀಡಿಲ್ಲ. 15 ಲಕ್ಷ ಎಕರೆ ನೀರಾವರಿ ಆಗುವ ಯೋಜನೆಯನ್ನೇ ಕಡೆಗಣಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ನಾಗರಿಕರ ಮನೆ ಬಾಗಿಲಿಗೆ ಬರುತ್ತೆ ಆಹಾರ ಧಾನ್ಯ! ಅನ್ನಭಾಗ್ಯ ಅಲ್ಲ, ಏನಿದು ಅನ್ನ ಸುವಿಧಾ ಯೋಜನೆ?

ಇನ್ನು ಕೃಷ್ಣಾ ನ್ಯಾಯಾಧೀಕರಣ ಹಂಚಿಕೆಯಲ್ಲಿ ಮಾಡಿರುವ ನೀರನ್ನು ಉಪಯೋಗಿಸುವ ಯಾವ ಚಿಂತನೆಯೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇಲ್ಲ. ಹೀಗಾಗಿ ಇದೊಂದು ಅಭಿವೃದ್ಧಿ ಶೂನ್ಯ ಬಜೆಟ್ ಆಗಿದೆ. ನಾಡಿನ ಜನತೆಗೆ ಈ ಬಜೆಟ್‌ನಲ್ಲಿ ಮೂರು ನಾಮ ಹಾಕಿ ಮೋಸ ಮಾಡಿದ್ದಾರೆ ಎಂದು ಸಿದ್ದರಾಮಯ್ಯರ ಬಜೆಟ್ ಕುರಿತು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯ ಮಾಡಿದರು.

ಬಜೆಟ್ ಮಂಡನೆ ವೇಳೆ ಕೇಂದ್ರದ ವಿರುದ್ಧ ಸಿಎಂ ಟೀಕೆ; ಬಿಜೆಪಿ ನಾಯಕರು ಆಕ್ರೋಶ, ಸಭಾತ್ಯಾಗ

click me!