
ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ 2024ನೇ ಸಾಲಿನ ಬಜೆಟ್ ಮಂಡನೆ ವೇಳೆ ಅನ್ನ ಸುವಿಧಾ(Anna Suvidha)ಯೋಜನೆ ಪ್ರಕಟಿಸಿದ್ದಾರೆ.
ಮನೆಯಿಂದ ಹೊರ ಹೋಗಿ ದಿನಬಳಕೆಯ ಸಾಮಗ್ರಿ ಖರೀದಿಸಲು ಕಷ್ಟವಾಗುವ ವಯೋವೃದ್ಧರನ್ನು ಗಮನದಲ್ಲಿಟ್ಟುಕೊಂಡು ಘೋಷಿಸಿರುವ ಯೋಜನೆಯಿದು. 80 ವರ್ಷ ಮೇಲ್ಪಟ್ಟ ವಯಸ್ಸಿನವರೇ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡುವ ಅನ್ನ ಸುವಿಧಾ ಯೋಜನೆಯನ್ನು ಅವರು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಹಸಿವು ಮುಕ್ತ ಕರ್ನಾಟಕವೇ ನಮ್ಮ ಆಶಯ. ಸಾಮಾಜಿಕ ಭದ್ರತೆಯ ಕಳಕಳಿಯೊಂದಿಗೆ ಈ ಯೋಜನೆ ಘೋಷಣೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಬಜೆಟ್ ಮಂಡನೆ ವೇಳೆ ಕೇಂದ್ರದ ವಿರುದ್ಧ ಸಿಎಂ ಟೀಕೆ; ಬಿಜೆಪಿ ನಾಯಕರು ಆಕ್ರೋಶ, ಸಭಾತ್ಯಾಗ
ಅನ್ನ ಸುವಿಧಾ ಯೋಜನೆಯು ಹೋಮ್ ಡೆಲಿವರಿ ಆ್ಯಪ್ ಮೂಲಕ ಜಾರಿಗೆ ತರಲಾಗುವುದು. ಈ ಯೋಜನೆ ಮೂಲಕ 80 ವರ್ಷ ವಯಸ್ಸು ದಾಟಿದ ವೃದ್ಧರ ಅಥವಾ ವೃದ್ಧೆಯರು ಮಾತ್ರ ಇರುವ ಮನೆಗಳಿಗೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಅನ್ನಭಾಗ್ಯ ಯೋಜನೆಯಡಿ 2024ರ ಜನವರಿ ಅಂತ್ಯದ ವರೆಗೆ 4.02 ಕೋಟಿ ಫಲಾನುಭವಿಗಳಿಗೆ 4,595 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ ಎಂದೂ ಸಿಎಂ ಬಜೆಟ್ನಲ್ಲಿ ತಿಳಿಸಿದರು.
ಕರ್ನಾಟಕ ಬಜೆಟ್ 2024 ಲೈವ್ ಅಪ್‌ಡೇಟ್ಸ್ : ಇಂದು ದಾಖಲೆಯ 15ನೇ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ