Karnataka High Court ಸಿದ್ಧಗಂಗೆ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಕೋರಿ ಸಲ್ಲಿಸಿದ್ದ ಅರ್ಜಿ ವಜಾ!

By Suvarna News  |  First Published Apr 3, 2022, 8:38 PM IST
  • ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಲು ಆಗ್ರಹ
  • ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ
  • ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಕಾರಣವೇನು?

ಬೆಂಗಳೂರು(ಏ.03): ತುಮಕೂರು ಸಿದ್ಧಗಂಗಾದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಜಿಗೆ ಭಾರತ ರತ್ನ ನೀಡಬೇಕು ಅನ್ನೋ ಕೂಗೂ ಇಂದು ನಿನ್ನೆಯದಲ್ಲ. ಶ್ರೀಗಳಿಗೆ ಭಾರತ ರತ್ನ ನೀಡಲು ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಇದು ಕನ್ನಡಿಗರಲ್ಲಿ ಆಶಾಭಾವನೆ ಮೂಡಿಸಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಈ ಅರ್ಜಿಯನ್ನು ತರಿಸ್ಕರಿಸಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ನೇತೃತ್ವದ ಪೀಠ ಭಾರತ ರತ್ನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ರೆಹಾನ್ ಖಾನ್ ಈ ಅರ್ಜಿಯನ್ನು ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಶಿವಕುಮಾರ ಸ್ವಾಮೀಜಿಗಳು ಶಿಕ್ಷಣ, ಕೋಮು ಸೌಹಾರ್ಧತೆಯಲ್ಲಿ ಸಮಾಜಕ್ಕೆ ಅಪಾರ ಕೊಡು ನೀಡಿದ್ದಾರೆ. ಪ್ರಧಾನ ಮಂತ್ರಿಗೆ ಈ ಕುರಿತು ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್ ಸೂಚಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

Tap to resize

Latest Videos

ರತನ್‌ ಟಾಟಾಗೆ ಭಾರತ ರತ್ನ ಕೊಡಿ ಎಂದಿದ್ದ ಅರ್ಜಿ ತಿರಸ್ಕರಿಸಿದ ಕೋರ್ಟ್‌: ಕೊಟ್ಟ ಕಾರಣ ಹೀಗಿದೆ!

ಅರ್ಜಿದಾರರಿಗೆ ಹಕ್ಕಿದ್ದಾಗ ಮಾತ್ರ ನ್ಯಾಯಾಲಯ ನಿರ್ದೇಶಿಸಲು ಸಾಧ್ಯವಿದೆ. ಆದರೆ ಇಲ್ಲಿ ಅರ್ಜಿದಾರರ ಸೂಕ್ತ ಹಕ್ಕು ಕಾಣುತ್ತಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ. ಇದೇ ವೇಳೆ ಇದು ಭಾರತ ಸರ್ಕಾರದ ವ್ಯಾಪ್ತಿಗೆ ಬರಲಿದೆ. ಸಾಧಕರಿಗೆ ಭಾರತ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಚರ್ಚಿಸಿ ಅಂತಿಮಗೊಳಿಸುತ್ತಾರೆ. ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಿ ಸರ್ಕಾರ ನೀಡಲಿದೆ. ಇದನ್ನು ಇನ್ನೊಬ್ಬರು ಇವರಿಗೆ ಕೊಡಿ ಎಂದು ಸೂಚಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಕೋರ್ಟ್ ಸಾರ್ವಜನಿಕ ಅರ್ಜಿ ತಿರಸ್ಕರಿಸಿದ ಬಳಿಕ, ಕೇಂದ್ರ ಗೃಹ ಸಚಿವರು ನಗರದಲ್ಲಿ ಇದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಭಾರತ ರತ್ನ ನೀಡಲು ಕೋರ್ಟ್ ನಿರ್ದೇಶಿನ ನೀಡುವಂತೆ ಅರ್ಜಿ ಹಾಕುವ ಬದಲು ಅಮಿತ್ ಶಾ ಜೊತೆ ಮಾತನಾಡಿ, ಮನವಿ ಮಾಡಿ. ಗೃಹ ಸಚಿವರು, ಪ್ರಧಾನಿಗಳ ಜೊತೆ ಮಾತನಾಡಲಿದ್ದಾರೆ ಎಂದು ಕೋರ್ಟ್ ಅರ್ಜಿದಾರರಿಗೆ ಕಿವಿ ಮಾತು ಹೇಳಿದೆ.

Kodagu: ಹೆಮ್ಮೆಯ ಕನ್ನಡಿಗ ಫೀಲ್ಡ್ ಮಾರ್ಷಲ್‌ ಕಾರ್ಯಪ್ಪಗೆ ಭಾರತ ರತ್ನಕ್ಕಾಗಿ ಅಭಿಯಾನ

ಇದೇ ವೇಳೆ ನ್ಯಾಯಮೂರ್ತಿಗಳು, ರತನ್ ಟಾಟಾಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ಕೂಡ ವಜಾಗೊಂಡಿದೆ ಎಂದು ಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ.

ರತನ್ ಟಾಟಾ ಪರ ಸಲ್ಲಿಸಿದ್ದ ಅರ್ಜಿ ವಜಾ
ಭಾರತದ ಶ್ರೇಷ್ಠ ಉದ್ಯಮಿ, ದೇಶದ ಕಲ್ಯಾಣಕ್ಕಾಗಿ ದುಡಿಯುತ್ತಿರುವ ರತನ್ ಟಾಟಾಗೆ ಭಾರತ ರತ್ನ ನೀಡಬೇಕು ಎಂದು ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ರತನ್ ಟಾಟಾ 3,000 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನೀಡಿದ್ದಾರೆ. ಇನ್ನು ಅತೀ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ವೈಯುಕ್ತಿ ಹಿತಾಸಕ್ತಿ ಇಲ್ಲದೆ ಜೀವನ ನಡೆಸಿದ್ದಾರೆ. ಇತರರ ಬಾಳಿಗೆ ಬೆಳಕಾಗಿದ್ದಾರೆ. ಹೀಗಾಗಿ ಅವರ ಕೊಡುಗೆಯನ್ನು ಪರಿಗಣಿಸಿ ಭಾರತ ರತ್ನ ನೀಡಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. 

ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಗರಂ ಆಗಿತ್ತು. ಭಾರತ ರತ್ನ ಯಾರಿಗೆ ನೀಡಬೇಕು, ಯಾರಿಗೆ ನೀಡಬಾರದು ಅನ್ನೋದನ್ನು ಯಾರು ನಿರ್ಧರಿಸಬೇಕು? ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲಿದೆ  ರಾಷ್ಟ್ರಪತಿಗಳು ಆಯಾ ಇಲಾಖೆ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಇದರಲ್ಲಿ ಇವರಿಗೆ ನೀಡಿ ಎಂದು ಹೇಳಲು ಹೇಗೆ ಸಾಧ್ಯ? ಅರ್ಹ ವ್ಯಕ್ತಿಗಳಿಗೆ ಪ್ರಶಸ್ತಿ ಸಿಗಲಿದೆ. ಆದರೆ ಅದನ್ನು ಕೋರ್ಟ್ ಹೇಳಲು ಸಾಧ್ಯವಿಲ್ಲ. ಅದರದ್ದೆ ಆದ ಸಂಸ್ಥಗಳು ಕಾರ್ಯನಿರ್ವಹಿಸುತ್ತಿದೆ. ಈ ರೀತಿಯ ಅರ್ಜಿಗಳನ್ನು ಹಾಕಿ ಸಮಯ ವ್ಯರ್ಥ ಮಾಡಬೇಡಿ. ತಕ್ಷಣವೇ ಅರ್ಜಿ ವಾಪಸ್ ಪಡೆಯಿರಿ, ಇಲ್ಲಾ ದಂಡ ಎದುರಿಸಿ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು.
 

click me!