ರಾಜ್ ಠಾಕ್ರೆ ಎಚ್ಚರಿಕೆಯ ಬೆನ್ನಲ್ಲೇ, ಎಂಎನ್ಎಸ್ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲಿಸಾ ಪಠಣ!

Published : Apr 03, 2022, 07:08 PM IST
ರಾಜ್ ಠಾಕ್ರೆ ಎಚ್ಚರಿಕೆಯ ಬೆನ್ನಲ್ಲೇ, ಎಂಎನ್ಎಸ್ ಕಚೇರಿಯಲ್ಲಿ ಧ್ವನಿವರ್ಧಕದಿಂದ ಹನುಮಾನ್ ಚಾಲಿಸಾ ಪಠಣ!

ಸಾರಾಂಶ

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು. ಇಲ್ಲದೇ ಇದ್ದಲ್ಲಿ "ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ಹಾಕುವ ಮತ್ತು ಹನುಮಾನ್ ಚಾಲೀಸಾ ನುಡಿಸುವ" ಎಚ್ಚರಿಕೆ ನೀಡಿದ್ದರು. ಅದರಂತೆ ಭಾನುವಾರ ಎಂಎನ್ ಎಸ್ ಕಚೇರಿಯ ಮುಂದೆ ಧ್ವನಿವರ್ಧಕದಲ್ಲಿ ಹನುಮಾನ್ ಚಾಲಿಸಾ ನುಡಿಸಿದ್ದಾರೆ.

ಮುಂಬೈ (ಏ.3): ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ (Raj Thackeray) ಅವರು ಮಸೀದಿಗಳಿಂದ (Masjid) ಧ್ವನಿವರ್ಧಕಗಳನ್ನು(Loudspeakers) ತೆಗೆದುಹಾಕುವಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಒಂದು ದಿನದ ನಂತರ, ಮುಂಬೈನ ಘಾಟ್‌ಕೋಪರ್‌ನಲ್ಲಿರುವ (Ghatkopar ) ಪಕ್ಷದ ಕಚೇರಿಯಲ್ಲಿ ಭಾನುವಾರ 'ಹನುಮಾನ್ ಚಾಲೀಸಾ' ನುಡಿಸಿದ್ದಾರೆ.

ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಎಂಎನ್‌ಎಸ್ (MNS) ಮುಖ್ಯಸ್ಥರು ಶನಿವಾರ ರಾಜ್ಯ ಸರ್ಕಾರವನ್ನು ( State Govt ) ಒತ್ತಾಯಿಸಿದ್ದರು. ಇಲ್ಲದೇ ಇದ್ದಲ್ಲಿ "ಮಸೀದಿಗಳ ಮುಂದೆ ಧ್ವನಿವರ್ಧಕಗಳನ್ನು ಹಾಕುವ ಮತ್ತು ಹನುಮಾನ್ ಚಾಲೀಸಾ ನುಡಿಸುವ" ಎಚ್ಚರಿಕೆ ನೀಡಿದ್ದರು.

ಮುಂಬೈನಲ್ಲಿ ಪಕ್ಷದ ಕಾರ್ಯಕರ್ತರನ್ನು ( Party Workers )  ಉದ್ದೇಶಿಸಿ ಮಾತನಾಡಿದ್ದ ರಾಜ್ ಠಾಕ್ರೆ "ನಾನು ಪ್ರಾರ್ಥನೆಗೆ ವಿರೋಧಿಯಲ್ಲ, ನೀವು ನಿಮ್ಮ ಮನೆಯಲ್ಲಿ ಪ್ರಾರ್ಥನೆ ( Prayers ) ಸಲ್ಲಿಸಬಹುದು, ಆದರೆ ಮಸೀದಿಯ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ಈ ಕುರಿತಾಗಿ ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ. ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಿ. ಇಲ್ಲದಿದ್ದರೆ ಮಸೀದಿ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸಾ (Hanuman Chalisa) ನುಡಿಸುತ್ತೇನೆ' ಎಂದು ಅವರು ಹೇಳಿದ್ದರು.

ರಾಜ್ ಠಾಕ್ರೆಯವರ ಹೇಳಿಕೆಯ ಬಗ್ಗೆ ಕೇಳಲಾದ ಪ್ರಶ್ನೆಗೆ, ಶಿವಸೇನೆ ನಾಯಕ ಸಂಜಯ್ ರಾವತ್  (Shiv Sena leader Sanjay Raut) ಪ್ರತಿಕ್ರಿಯೆ ನೀಡಿದ್ದು,  ಮಹಾರಾಷ್ಟ್ರದಲ್ಲಿ ( Maharastra)  ಈ ನೆಲದ ಕಾನೂನು ಚಾಲ್ತಿಯಲ್ಲಿದೆ ಮತ್ತು ರಾಜ್ಯದ ಗೃಹ ಸಚಿವರು ಕಾನೂನಿನ ಪ್ರಕಾರ ಎಲ್ಲವನ್ನೂ ಮಾಡುತ್ತಾರೆ ಎಂದು ಹೇಳಿದರು. “ರಾಜ್ ಠಾಕ್ರೆ ಅವರು ನಿನ್ನೆ ಮಸೀದಿಗಳಲ್ಲಿ ಅಳವಡಿಸಲಾದ ಧ್ವನಿವರ್ಧಕಗಳನ್ನು ತೆಗೆದುಹಾಕುವ ಬಗ್ಗೆ ಮಾತನಾಡುತ್ತಿದ್ದರು. ಮೊದಲು, ಬಿಜೆಪಿ ಆಡಳಿತವಿರುವ ಯಾವ ರಾಜ್ಯಗಳಲ್ಲಿ ಆಜಾನ್ ಅನ್ನು ( Azaan  ) ನಿಲ್ಲಿಸಲಾಗಿದೆ ಎನ್ನುವುದನ್ನು ತಿಳಿಸಲಿ. ಯಾವ ರಾಜ್ಯದ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ ಎನ್ನುವುದನ್ನು ನೋಡಿ. ಇದು ಮಹಾರಾಷ್ಟ್ರ, ಅಲ್ಲಿ ನೆಲದ ಕಾನೂನನ್ನು ಅನುಸರಿಸಲಾಗುತ್ತದೆ' ಎಂದು ರಾವತ್ ಹೇಳಿದ್ದರು.

ಶನಿವಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ, ಮುಂಬೈನ ಮುಸ್ಲಿಂ ಪ್ರದೇಶಗಳಲ್ಲಿನ ( Muslim Area )ಮಸೀದಿಗಳ ಮೇಲೆ ಒಮ್ಮೆ ರೇಡ್ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದರು ಮತ್ತು ಅಲ್ಲಿ ವಾಸಿಸುವ ಜನರು "ಪಾಕಿಸ್ತಾನಿ ಬೆಂಬಲಿಗರು" ಎಂದು ಹೇಳಿದ್ದರು. ಎಂಎನ್‌ಎಸ್ ಮುಖ್ಯಸ್ಥರು, ಸಂಸದರು ಮತ್ತು ಶಾಸಕರಿಗೆ ನೀಡುತ್ತಿರುವ ಪಿಂಚಣಿಯನ್ನು ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸಿದರು ಮತ್ತು ಅವರಿಗೆ ಮನೆಗಳನ್ನು ನೀಡಬೇಕಾದರೆ ಅವರ ಫಾರ್ಮ್‌ಹೌಸ್ ಅನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

'ಮಸೀದಿಗಳ ಧ್ವನಿವರ್ಧಕ ತೆಗೆಸಿ, ಇಲ್ಲದಿದ್ದರೆ ಮಸೀದಿ ಗೇಟ್‌ ಬಳಿ ಹನುಮಾನ್ ಚಾಲೀಸಾ ಪಠಿಸುತ್ತೇವೆ'

‘ಶಾಸಕ, ಸಂಸದರ ಪಿಂಚಣಿ ನಿಲ್ಲಿಸಬೇಕು. ಹಾಗೇನಾದರೂ ನಿಮಗೆ ಮನೆ ನೀಡಬೇಕು ಎಂದನಿಸಿದಲ್ಲಿ, ಕೊಳಗೇರಿಗಳಲ್ಲಿ ವಾಸ ಮಾಡುವ ವ್ಯಕ್ತಿಗಳಿಗೆ ಮನೆಯನ್ನು ನೀಡಿ. ಶಾಸಕರಿಗೆ ಏಕೆ ಮನೆಗಳನ್ನು ನೀಡಬೇಕು? ಹಾಗೇನಾದರೂ ಕೊಡುವುದಿದ್ದರೆ, ಅವರ ತೋಟದ ಮನೆಗಳನ್ನು ಸರ್ಕಾರಕ್ಕೆ ನೀಡಲಿ' ಎಂದು ಹೇಳಿದರು.

ರಾಜಕೀಯ ಭವಿಷ್ಯಕ್ಕಾಗಿ ಈ ನಟಿಯ ಪ್ರೀತಿಯನ್ನೇ ಬಲಿಕೊಟ್ರಾ ರಾಜ್‌ ಠಾಕ್ರೆ?

ಸರ್ಕಾರ ರಚನೆಯಾದಾಗಿನಿಂದ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಜಾತಿ ಆಧಾರಿತ ದ್ವೇಷವನ್ನು ಹರಡುತ್ತಿದೆ ಎಂದು ರಾಜ್ ಠಾಕ್ರೆ ಆರೋಪಿಸಿದರು. ಎಂಎನ್‌ಎಸ್ ಮುಖ್ಯಸ್ಥರು, “ಇಂದು ಜನರು ರಾಜ್ಯದಲ್ಲಿ ಜಾತಿ ಸಮಸ್ಯೆಗಳ ಬಗ್ಗೆ ಹೋರಾಡುತ್ತಿದ್ದಾರೆ. ನಾವು ಇದರಿಂದ ಹೊರಬಂದು ಹಿಂದೂ ಆಗುವುದು ಯಾವಾಗ? ಎಂದು ಪ್ರಶ್ನಿಸಿದ್ದಾರೆ. ಇನ್ನು ಇತ್ತೀಚೆಗೆ ಮುಂಬೈನಲ್ಲಿ ಶಾಸಕರಿಗೆ ಮನೆ ನೀಡುವ ರಾಜ್ಯ ಸರ್ಕಾರದ ಘೋಷಣೆಯನ್ನು ರಾಜ್ ಠಾಕ್ರೆ ಟೀಕಿಸಿದ್ದರು ಎಂಬುವುದು ಉಲ್ಲೇಖನೀಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !