ಲಿವ್‌ ಇನ್ ಸಂಬಂಧಕ್ಕೆ ಜನಿಸಿದ ಮಗುವಿಗೆ ತಾಯಿ ಸರ್‌ನೇಮ್‌, ಒಪ್ಪಿದ ಹೈಕೋರ್ಟ್‌!

Published : Feb 28, 2026, 07:44 AM IST
Karnataka High court

ಸಾರಾಂಶ

ಪರಿತ್ಯಕ್ತ ಲಿವ್-ಇನ್ ಸಂಗಾತಿಯ ಹೆಸರನ್ನು ತನ್ನ ಮಗುವಿನ ಜನನ ಪ್ರಮಾಣಪತ್ರದಿಂದ ತೆಗೆದುಹಾಕಲು ಕೋರಿದ್ದ ತಾಯಿಯ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ತಾಯಿಯೇ ಮಗುವಿನ ಏಕೈಕ ನೈಸರ್ಗಿಕ ಪೋಷಕರಾಗಿದ್ದು, ಉಪನಾಮ ಸೇರಿಸಲು ಯಾವುದೇ ಸಾಂವಿಧಾನಿಕ ಅಡ್ಡಿಯಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬೆಂಗಳೂರು (ಪೆ.28): ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತನ್ನ ಪರಿತ್ಯಕ್ತ ಲಿವ್-ಇನ್ ಸಂಗಾತಿಯ (ಮಗುವಿನ ಜೈವಿಕ ತಂದೆ) ಹೆಸರು ತೆಗೆದುಹಾಕಿ ತನ್ನ ಮತ್ತು ಕುಟುಂಬದ ಹೆಸರು (ಉಪನಾಮ) ಸೇರಿಸಲು ತಾಯಿಯೊಬ್ಬರು ಮಾಡಿರುವ ಮನವಿ ಪುರಸ್ಕರಿಸುವಂತೆ ಬೆಂಗಳೂರಿನ ಜನನ ಮತ್ತು ಮರಣಗಳ ಮುಖ್ಯ ನೋಂದಣಾಧಿಕಾರಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಎಂಟು ವರ್ಷದ ಮಗಳ ಜನನ ಪ್ರಮಾಣ ಪತ್ರದಲ್ಲಿ ತಂದೆಯ ಹೆಸರು ತೆಗೆದು, ತನ್ನ ಮತ್ತು ಕುಟುಂಬ ಹೆಸರು ಸೇರಿಸಲು ಕೋರಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ್ದ ಜನನ ಮತ್ತು ಮರಣ ನೋಂದಣಿ ಇಲಾಖೆ ಅಧಿಕಾರಿಗಳ ಕ್ರಮ ಪ್ರಶ್ನಿಸಿ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ, ಪ್ರಕರಣದಲ್ಲಿ ಮಗುವಿಗೆ ತಾಯಿ ಏಕೈಕ ಆರೈಕೆದಾರ ಮತ್ತು ನೈಸರ್ಗಿಕ ಪೋಷಕರಾಗಿದ್ದಾರೆ.

ಸಾಂವಿಧಾನಿಕ ಅಡಚಣೆಯಿಲ್ಲ ಎಂದ ಹೈಕೋರ್ಟ್‌

ವಾಸ್ತವವಾಗಿ, ತಾಯಿಯ ಕುಟುಂಬದ ಉಪನಾಮವನ್ನು ಮಗುವಿನ ಹೆಸರಿನೊಂದಿಗೆ ಸೇರಿಸಲು ಯಾವುದೇ ಸಾಂವಿಧಾನಿಕ ಅಡಚಣೆಯಿಲ್ಲ. ತಾಯಿಯ ಗುರುತು (ಐಡೆಂಟಿಟಿ) ಸೇರಿಸುವುದರಿಂದ ತಂದೆಯ ಸ್ಥಾನಮಾನ ಕಡಿಮೆ ಆಗುವುದಿಲ್ಲ. ಇದು ಸಮಾನತೆಯ ಸಂಕೇತ, ಅಪ್ರಾಪ್ತ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ ಹೆಸರು ಅಳಿಸಿ ಹಾಕುವುದರಿಂದ ಕಾನೂನು ಬದ್ದ ಹಕ್ಕುಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ದೇಶದ ಟ್ಯಾಲೆಂಟ್‌ ಹಬ್‌ ಆಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಡಿಕೆ ಶಿವಕುಮಾರ್
ಪಾರ್ಟಿ ಮಾಡಲು ಕರೆಸಿ ಡ್ರಗ್ಸ್ ನೀಡಿ ರೇ*ಪ್ ಮಾಡುವ ದಂಧೆ? ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್!