ಕೊಲ್ಕತ್ತಾ ವೈದ್ಯೆ ರೇಪ್, ಮರ್ಡರ್ ಪ್ರಕರಣ ಹಿನ್ನೆಲೆ: ವೈದ್ಯಕೀಯ ಸಿಬ್ಬಂದಿ, ಮಹಿಳೆಯರ ರಕ್ಷಣೆಗೆ ಮುಂದಾದ ಸರ್ಕಾರ

By Ravi Janekal  |  First Published Aug 20, 2024, 5:38 PM IST

ಇತ್ತೀಚೆಗೆ ನಡೆದ ಕೊಲ್ಕತ್ತಾ ಘಟನೆ ಅಮಾನವೀಯವಾದುದ್ದು. ಈ ಘಟನೆಯಿಂದ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.


ವಿಧಾನಸೌಧ (ಆ.20): ಇತ್ತೀಚೆಗೆ ನಡೆದ ಕೊಲ್ಕತ್ತಾ ಘಟನೆ ಅಮಾನವೀಯವಾದುದ್ದು. ಈ ಘಟನೆಯಿಂದ ದೇಶದಲ್ಲಿ ಅಭದ್ರತೆ ಕಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕಳವಳ ವ್ಯಕ್ತಪಡಿಸಿದರು.

ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಕೊಲೆ ಪ್ರಕರಣ ಹಿನ್ನೆಲೆ ರಾಜ್ಯದಲ್ಲೂ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಲು ಇಂದು ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವರು,  ವಿಶೇಷವಾಗಿ ಮಹಿಳೆಯರ ಮೇಲೆ ಆಗ್ತಿರುವ ಕೃತ್ಯದಿಂದಾಗಿ  ಹೆಚ್ಚಿನ ಅರಿವು ಮೂಡಿಸ್ಬೇಕಿದೆ. ಮಹಿಳೆಯರೇ ಎಲ್ಲ ಕಡೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಮಹಿಳೆಯರಿಗೆ ಭದ್ರತೆ ನೀಡಬೇಕಿದೆ. ಕರ್ತವ್ಯ ನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗೆ ಭದ್ರತೆ ಹೆಚ್ಚಿಸುವ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಭದ್ರತೆ, ಭರವಸೆ ಮೂಡಿಸುವ ನಿಟ್ಟಿನಲ್ಲಿ IMA, Phana, ಖಾಸಗಿ ವೈದ್ಯಕೀಯ ಅಸೋಸಿಯೇಷನ್, ಆಯುಷ್ ಸೇರಿದಂತೆ 12 ಸಂಘಟನೆಗಳೊಂದಿಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು. ಸಭೆಯಲ್ಲಿ ಆರೋಗ್ಯ ಇಲಾಖೆ ಆಯುಕ್ತ ರಂದಿಪ್,  ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ.

Tap to resize

Latest Videos

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ

ಟಾಸ್ಕ್ ಫೋರ್ಸ್ ಟೀಂ ರಚನೆ:

ಮಹಿಳೆಯರ ಭದ್ರತೆಗೆ ಸಿಸಿಟಿವಿ, ಎಮರ್ಜೆನ್ಸಿ ಕಾಲ್, ಪ್ಯಾನಿಕ್ ಬಟನ್, ಪೊಲೀಸ್ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಬಗ್ಗೆ ಸಲಹೆ ನೀಡಲಾಗಿದೆ. ಕಾನೂನುಗಳನ್ನು ಅಧ್ಯಯನ ಮಾಡಿ ಅದರ ಜೊತೆಗೆ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಗಿದೆ. ಇನ್ನೊಂದು ತಿಂಗಳಲ್ಲೇ ಟಾಸ್ಕ್ ಫೋರ್ಸ್ ಟೀಂ ರಚನೆ ಮಾಡಲು ತೀರ್ಮಾನ ಮಾಡಲಾಗಿದೆ. 

ಜ್ವರ ಜತೆ ಕಣ್ಣು ಕೆಂಪಾಯ್ತಾ? ಝೀಕಾ ವೈರಸ್ ಟೆಸ್ಟ್ ಮಾಡಿಸಿ!

ಇನ್ನು ರಾಜ್ಯದಲ್ಲಿ ಝೀಕಾ ವೈರಸ್‌ನಿಂದ ವ್ಯಕ್ತಿ ಸಾವನ್ನಪ್ಪಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಶಿವಮೊಗ್ಗದಲ್ಲಿ ಕೇವಲ ಝೀಕಾ ವೈರಸ್‌ನಿಂದ ಸತ್ತಿಲ್ಲ. ವ್ಯಕ್ತಿಗೆ ಬೇರೆ ಬೇರೆ ಕಾಯಿಲೆಗಳಿದ್ದವು ಜೊತೆಗೆ ಝೀಕಾ ಅಟ್ಯಾಕ್ ಆಗಿತ್ತು. ಹೀಗಾಗಿ ಮೃತಪಟ್ಟಿದ್ದಾರೆ. ಝೀಕಾ ಬಗ್ಗೆ ಜನ ಭಯಪಡಬೇಕಾಗಿಲ್ಲ. ಗರ್ಭಿಣಿಯರಿಗೆ ಹುಟ್ಟುವ ಮಗುವಿಗೆ ಝೀಕಾದಿಂದ ತೊಂದರೆಯಾಗುತ್ತೆ ಹೀಗಾಗಿ ಎಚ್ಚರಿಕೆಯಿಂದ ಇರಬೇಕು.  ಜಿಗಣಿಯಲ್ಲಿ ಝೀಕಾದಿಂದ ಬಳಲುತ್ತಿದ್ದ ಗರ್ಭಿಣಿಯ ಡೆಲಿವರಿ ಆಗಿದೆ. ತಾಯಿ‌ ಮಗು ಆರೋಗ್ಯವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ ಎಂದರು.

click me!