ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮೊರೆ ಹೋದ ಎಸ್‌ಐಟಿ!

By Gowthami KFirst Published Aug 20, 2024, 1:22 PM IST
Highlights

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧದ ಗಣಿಗುತ್ತಿಗೆ ಹಗರಣದಲ್ಲಿ ಲೋಕಾಯುಕ್ತರು ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್‌ ಅನುಮತಿ ಕೋರಿ ಪತ್ರ ಬರೆದಿದ್ದಾರೆ. 2007 ರಲ್ಲಿ ನಡೆದ ಈ ಘಟನೆಯ ತನಿಖೆಯನ್ನು ಮತ್ತೆ ಆರಂಭಿಸಲಾಗಿದ್ದು, ಕುಮಾರಸ್ವಾಮಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಬೆಂಗಳೂರು (ಆ.20): ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ, ಹೈಕೋರ್ಟ್ ತಾತ್ಕಾಲಿಕ ರಿಲೀಪ್ ಕೊಟ್ಟಿದೆ. ಇದರ  ಬೆನ್ನಲ್ಲೇ ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ  ಭೂಅಕ್ರಮ ಮತ್ತು ಗಣಿಗುತ್ತಿಗೆ ಅಸ್ತ್ರ ಪ್ರಯೋಗ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಹೆಚ್‌ಡಿಕೆ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಲು ಅನುಮತಿ ನೀಡುವಂತೆ ಎಸ್‌ಐಟಿ ಅನುಮತಿ ಕೋರಿದೆ. 

ಹೆಚ್‌ಡಿಕೆ ವಿರುದ್ಧದ ಭೂಹಗರಣಗಳ ಮತ್ತು ಗಣಿ ಗುತ್ತಿಗೆ ಮಂಜೂರು ಆರೋಪ ಇದ್ದು ಲೋಕಾಯುಕ್ತ ವಿಶೇಷ ತನಿಖಾ ತಂಡ (ಗಣಿ ಹಗರಣಕ್ಕೆಂದೇ ಸಂಬಂಧಿಸಿದ್ದು) ಈ ಹಿಂದೆ  ಪ್ರಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಲ್ಲಿ ಪತ್ರ ಬರೆದು ಮನವಿ ಮಾಡಿತ್ತು. ಇದೀಗ ಮತ್ತೆ ಚಾರ್ಜ್ ಶೀಟ್‌ ಸಲ್ಲಿಕೆಗೆ   ಅನುಮತಿ ನೀಡಿ ಎಂದು  ಆಗಸ್ಟ್ 19 ರಾಜ್ಯಪಾಲರಿಗೆ ದಾಖಲೆ ಸಮೇತ ಲೋಕಾಯುಕ್ತ ಎಸ್‌ಐಟಿ ಪ್ರಸ್ಥಾವನೆ ಸಲ್ಲಿಸಿದೆ.

Latest Videos

ಬೆಂಗಳೂರು: ಡ್ರಾಪ್‌ ನೆಪದಲ್ಲಿ ಅತ್ಯಾಚಾರ ಪ್ರಕರಣ, ಯುವತಿ ವಿರುದ್ಧವೇ ಎಫ್ಐಆರ್ ದಾಖಲು!

2014ರಿಂದ ಈ ಸಂಬಂಧ  ತನಿಖೆ ನಡೆಸಿರುವ ಎಸ್‌ಐಟಿ ಲೋಕಾಯುಕ್ತರಿಗೆ ದಾಖಲೆ ಸಲ್ಲಿಸಿದ್ದು, ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್  ಗೆ ಮನವಿ ಮಾಡಿದೆ.  ಹೆಚ್‌ಡಿಕೆ ವಿರುದ್ಧ ಪ್ರಾಸಿಕ್ಯೂಷನ್‌ಗೆ ಎರಡು ಬಾರಿ ಲೋಕಾಯುಕ್ತ  ಎಸ್‌ಐಟಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಮೊದಲನೇ ಪತ್ರ ನವೆಂಬರ್ 21, 2023 ರಂದು ಎಡಿಜಿಪಿ ಚಂದ್ರಶೇಖರ್ ಅವರು ಖುದ್ದಾಗಿ ಬರೆದಿದ್ದರು. ಆಗ ಹೆಚ್ಚಿನ ಮಾಹಿತಿ ನೀಡುವಂತೆ ರಾಜ್ಯಪಾಲರಿಂದ ಉತ್ತರ ಬಂದಿತ್ತು. ಆ ಪತ್ರ ಆಗಸ್ಟ್ 8, 2024ಕ್ಕೆ ಎಸ್‌ಐಟಿ ಕೈ ಸೇರಿದೆ. ಅದಕ್ಕೆ ಈಗ ಎರಡನೇ ಬಾರಿ ಸೋಮವಾರ ಪತ್ರ ಬರೆದಿದ್ದು, ತನಿಖೆ ಪೂರ್ಣಗೊಂಡಿದೆ. ಚಾರ್ಜ್ ಶೀಟ್‌ ಸಲ್ಲಿಕೆ ಮಾಡಬೇಕು ಪ್ರಾಸಿಕ್ಯೂಷನ್‌ ಗೆ ಅನುಮತಿ ನೀಡಿ ಎಂದು ದಾಖಲೆ ಸಮೇತ ಮನವಿ ಮಾಡಲಾಗಿದೆ. 

ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್ ಎಂಬ ಸಂಸ್ಥೆಗೆ ಕುಮಾರಸ್ವಾಮಿ ನೆರವು ನೀಡಿದ್ದಾರೆ. ಮುಖ್ಯಮಂತ್ರಿಯಾಗಿದ್ದಾಗ 6.10.2007ರಂದು ಕಾನೂನು ಬಾಹಿರವಾಗಿ ನೆರವು ನೀಡಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಭಾವಿಹಳ್ಳಿ, ತಿಮ್ಮಪ್ಪಗುಡಿಯಲ್ಲಿ 550 ಎಕರೆ ಜಾಗವನ್ನು ಈ ಕಂಪೆನಿಗೆ ಅಕ್ರಮ ಗಣಿಗಾರಿಕೆಗೆ ಗುತ್ತಿಗೆ ನೀಡಿದ ಆರೋಪ ಇದೆ.

ಕ್ಷೌರಿಕನಿಂದ ಕೊಲೆ, 50 ರೂ ಇದ್ದಿದ್ದರೆ ದಲಿತ ಜೀವ ಉಳಿಯುತ್ತಿತ್ತು, ಹಮಾಲಿ ಮಾಡಿ ಮನೆಗೆ ಆಸರೆಯಾಗಿದ್ದವ ಕೊಲೆಯಾದ!

ಗುತ್ತಿಗೆ ನೀಡುವಾಗ ಮಿನರಲ್ಸ್ ಕನ್ಸಿಷನ್  ನಿಯಮ 59 (2)ನ್ನು ಉಲ್ಲಂಘನೆ ಮಾಡಿದ್ದು, ಈ ಅಕ್ರಮದ ಕುರಿತಾಗಿ ಎಫ್‌ಐಆರ್ ದಾಖಲಾಗಿ ಲೋಕಾಯುಕ್ತದಿಂದ ತನಿಖೆ ನಡೆದು ಎಚ್‌.ಡಿ.ಕುಮಾರಸ್ವಾಮಿಯವರು ತಪ್ಪೆಸಗಿದ್ದಾರೆ ಅಂತ ವರದಿ ಬಂದಿತ್ತು. ಹೀಗಾಗಿ ಲೋಕಾಯುಕ್ತದಿಂದ ಚಾರ್ಚ್‌ಶೀಟ್ ಸಲ್ಲಿಕೆಯಾಗಿ ನಂತರವೇ ಎಡಿಜಿಪಿಯವರು ರಾಜ್ಯಪಾಲರ ಬಳಿ ಪ್ರಾಸಿಕ್ಯೂಷನ್ ಗೆ ಅನುಮತಿಗೆ ಪತ್ರ ಬರೆದಿದ್ದರು. ಆದರೂ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿಲ್ಲ ಎಂಬುದು ಕಾಂಗ್ರೆಸ್ ವಾದ.

2007 ರಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶ್ರೀ ಸಾಯಿ ಮಿನರಲ್ಸ್ ಕಂಪನಿಗೆ   ಗಣಿ ಮತ್ತು ಖನಿಜ ನಿಯಮ ಉಲ್ಲಂಘನೆ ಮಾಡಿ ಅಕ್ರಮವಾಗಿ ನೀಡಿರುವ ಆರೋಪವಿದೆ. ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆಯವರು ಈ ಸಂಬಂಧ 2011ರಲ್ಲಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖ ಇದೆ. ಇದರ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿದೆ. ಈ ತನಿಖೆಯನ್ನು ಮತ್ತೆ ಆರಂಭಿಸುವ ಮೂಲಕ ಕುಮಾರಸ್ವಾಮಿಗೆ ಟಕ್ಕರ್‌ ಕೊಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆಯೇ ಎಂಬ ಗುಮಾನಿ ಎದ್ದಿದೆ.

ಹಾಗಿದ್ರೆ ಕುಮಾರಸ್ವಾಮಿಗೆ ಈ ಮೈನಿಂಗ್ ಲೈಸನ್ಸ್ ಉರುಳಾಗುತ್ತಾ? ಹರಗರಣ ನಡೆದಿದೆ ಎಂಬ ಸಮಯದಲ್ಲಿ ಹೆಚ್‌ಡಿಕೆ ಸಿಎಂ ಆಗಿದ್ದರು ಮತ್ತು ಈಗ ಕೇಂದ್ರದ ಮಂತ್ರಿಯಾಗಿರುವ ಕಾರಣ ಪ್ರಾಸಿಕ್ಯೂಷನ್‌ ಕೊಡುವ ಅಧಿಕಾರ ರಾಜ್ಯಪಾಲರಿಗೆ ಮಾತ್ರ ಇದೆ. ಇದೀಗ ಎರಡನೇ ಪತ್ರಕ್ಕೆ ರಾಜ್ಯಪಾಲರ ಉತ್ತರ ಏನೆಂಬುದು ಕಾದು ನೋಡಬೇಕಿದೆ. ಕೇವಲ ಕುಮಾರಸ್ವಾಮಿ ಮಾತ್ರವಲ್ಲ ಅಂದು ಇದ್ದ ಕೆಲ ಅಧಿಕಾರಿಗಳು ಕೂಡ ಈ ಹಗರಣದಲ್ಲಿ ಇದ್ದಾರೆನ್ನಲಾಗುತ್ತಿದೆ.

ಇದಿಷ್ಟೇ ಅಲ್ಲ ಎಚ್‌ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧದ ಭೂ ಅಕ್ರಮ ಆರೋಪ ಇದೆ.  ಬಿಡದಿಯ ಕೇತಗಾನಹಳ್ಳಿಯಲ್ಲಿ ಗೋಮಾಳ ಜಮೀನನ್ನು ಅತಿಕ್ರಮಣ ಮಾಡಲಾಗಿದೆ ಎಂದು   ಎಸ್‌ ಆರ್ ಹಿರೇಮಠ್ ಅವರು ಆರೋಪ ಮಾಡಿದ್ದು, ಇದರ ಬಗ್ಗೆ ಸಮಗ್ರ ತನಿಖೆಗೆ 2014 ರಲ್ಲೇ ಆದೇಶ ಮಾಡಲಾಗಿದೆ.  ಮಂಜೂರಾತಿ ದಾಖಲೆ ಪತ್ರಗಳ ಸಿಗದಿದ್ದರೆ ತಪ್ಪಿತಸ್ಥರ ವಿರುದ್ಧ ನೋಟಿಸ್ ಮಾಡಿ ಸರ್ಕಾರ ಆ ಜಾಗವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂದು ಆದೇಶದಲ್ಲಿದೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಆಗ್ರಹಿಸಿಸಲಾಗಿದೆ.

click me!