* ಕೊರೋನಾ ಟೆಸ್ಟ್ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ
* ಸೆಲ್ಫ್ ಕೊವಿಡ್ ಟೆಸ್ಟ್ ಮಾಡಿಕೊಳ್ಳುವವರು ಈ ರೀತಿ ಮಾರ್ಗಸೂಚಿ ಫಾಲೋ ಮಾಡಬೇಕು
* ಟ್ವಿಟ್ಟರ್‌ನಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಮಾಹಿತಿ
ಬೆಂಗಳೂರು, (ಜ.28): ಮನೆಯಲ್ಲಿ ಕೊವಿಡ್ ಪರೀಕ್ಷೆ (Home Testing of Covid) ಮಾಡಿಕೊಳ್ಳುವವರಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳುವವರಿಗೆ ಮಾರ್ಗಸೂಚಿ (Guidelines) ನೀಡಿದ್ದು ಅದರ ವಿವರಗಳನ್ನು ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹಂಚಿಕೊಂಡಿದ್ದಾರೆ.
ಸೆಲ್ಫ್ ಟೆಸ್ಟ್ ವೇಳೆ ಪಾಸಿಟಿವ್ ಬಂದ್ರೆ ಅಪ್ಲೋಡ್ ಮಾಡಬೇಕು. ಐಸಿಎಂಆರ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು. https://cvstatus.icmr.gov.in ನಲ್ಲಿ ಅಪ್ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.
undefined
Corona Update ಕೊರೋನಾ ಕೇಸ್ ಇಳಿಕೆ, ಸಾವಿನ ಸಂಖ್ಯೆ ಏರಿಕೆ, ಇಲ್ಲಿದೆ ಜ.28ರ ಅಂಕಿ-ಸಂಖ್ಯೆ
New guidelines for home testing of Covid:
🔹If test is positive, update status on https://t.co/VaYlBAIH0j
🔹If test is negative but has Covid symptoms, go for RTPCR test.
🔹If test is negative and no symptom, no action required.
ಲಕ್ಷಣ ಇದ್ದು ನೆಗೆಟಿವ್ ಬಂದ್ರೆ RTPCR ಟೆಸ್ಟ್ ಮಾಡಿಸಬೇಕು. ಲಕ್ಷಣಗಳಿಲ್ಲದೇ ಇದ್ದಾಗ ನೆಗೆಟಿವ್ ಬಂದರೆ ಸಮಸ್ಯೆ ಇಲ್ಲ. ಕೊರೋನಾ ಸೆಲ್ಫ್ ಟೆಸ್ಟ್ ವೇಳೆ ಕೊವಿಡ್ 19 ಪಾಸಿಟಿವ್ ಬಂದರೆ ಮೇಲೆ ನೀಡಿರುವ ಲಿಂಕ್ ಹಿಂಬಾಲಿಸಿ ಅಪ್ಲೋಡ್ ಮಾಡಿ ಎಂದು ಸೂಚಿಸಲಾಗಿದೆ.
A new guideline has been issued for disposal of Rapid Antigen and other testing kits in home usage:
🔹DO NOT dispose used kits along with domestic wet/dry waste as it is contagious.
🔹Put it in a bio hazard bag and hand it over to waste collectors separately.
ಜ.28ರ ಕೊರೋನಾ ಅಂಕಿ-ಸಂಖ್ಯೆ
ರಾಜ್ಯದಲ್ಲಿ ಇಂದು(ಶುಕ್ರವಾರ) ಕೊರೋನಾ (Coronavirus) ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, 31,198 ಪಾಸಿಟಿವ್ ಕೇಸ್ ಪತ್ತೆಯಾಗಿವೆ.
ಸಾವಿನ ಸಂಖ್ಯೆ ಏರಿಕೆಯಾಗಿದ್ದು, 50 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 38,804 ಜನ ಸೋಂಕಿತರು ಮೃತಪಟ್ಟಿದ್ರೆ, ಒಟ್ಟು ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಶುಕ್ರವಾರ 71,092 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 33,96,093 ಜನ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 20.91 ರಷ್ಟು ಇದೆ. 2,88,767 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರಿನಲ್ಲಿ ಒಂದೇ ದಿನ 15,199 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16,81,674 ಕ್ಕೆ ಏರಿಕೆಯಾಗಿದ್ರೆ, ಕೊರೋನಾದಿಂದ ಈವರೆಗೆ 16,554 ಸಾವನ್ನಪ್ಪಿದ್ದಾರೆ. 16,81,674 ಸೋಂಕಿತರ ಪೈಕಿ 15,04,941 ಜನರು ಗುಣಮುಖರಾಗಿದ್ದಾರೆ.ಪ್ರಸ್ತುತ ಬೆಂಗಳೂರಲ್ಲಿ 1,60,178 ಸಕ್ರಿಯ ಕೇಸ್‌ಗಳಿವೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್ ?
ಬಾಗಲಕೋಟೆ 187, ಬಳ್ಳಾರಿ 709, ಬೆಳಗಾವಿ 725, ಬೆಂಗಳೂರು ಗ್ರಾಮಾಂತರ 558, ಬೆಂಗಳೂರು ನಗರ 15,199, ಬೀದರ್ 194, ಚಾಮರಾಜನಗರ 618, ಚಿಕ್ಕಬಳ್ಳಾಪುರ 427, ಚಿಕ್ಕಮಗಳೂರು 283, ಚಿತ್ರದುರ್ಗ 192, ದಕ್ಷಿಣ ಕನ್ನಡ 516, ದಾವಣಗೆರೆ 186, ಧಾರವಾಡ 1,500, ಗದಗ 171, ಹಾಸನ 1,037, ಹಾವೇರಿ 179, ಕಲಬುರಗಿ 406, ಕೊಡಗು 371, ಕೋಲಾರ 452, ಕೊಪ್ಪಳ 227, ಮಂಡ್ಯ 963, ಮೈಸೂರು 1,877, ರಾಯಚೂರು 225, ರಾಮನಗರ 262, ಶಿವಮೊಗ್ಗ 509, ತುಮಕೂರು 1,315, ಉಡುಪಿ 818, ಉತ್ತರ ಕನ್ನಡ 760, ವಿಜಯಪುರ 125, ಯಾದಗಿರಿ- 207.
ಕೊರೋನಾದಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಹಾಸನ 5, ದಕ್ಷಿಣ ಕನ್ನಡ, ತುಮಕೂರು 4, ಬೆಳಗಾವಿ, ಶಿವಮೊಗ್ಗ 3, ಹಾವೇರಿ, ರಾಮನಗರ 2, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಬಲಿಯಾಗಿದ್ದಾರೆ.