Corona Update ಕೊರೋನಾ ಕೇಸ್ ಇಳಿಕೆ, ಸಾವಿನ ಸಂಖ್ಯೆ ಏರಿಕೆ, ಇಲ್ಲಿದೆ ಜ.28ರ ಅಂಕಿ-ಸಂಖ್ಯೆ

By Suvarna NewsFirst Published Jan 28, 2022, 10:12 PM IST
Highlights

*ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಕೇಸ್ ಇಳಿಕೆ
*ಸೋಂಕಿನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆಯಲ್ಲಿ ಏರಿಕೆ
* ಮಾಹಿತಿ ನೀಡಿದ ರಾಜ್ಯ ಆರೋಗ್ಯ ಇಲಾಖೆ

ಬೆಂಗಳೂರು, (ಜ.28): ರಾಜ್ಯದಲ್ಲಿ ಇಂದು(ಶುಕ್ರವಾರ) ಕೊರೋನಾ (Coronavirus) ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, 31,198 ಪಾಸಿಟಿವ್ ಕೇಸ್  ಪತ್ತೆಯಾಗಿವೆ.

ಸಾವಿನ ಸಂಖ್ಯೆ ಏರಿಕೆಯಾಗಿದ್ದು, 50 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ 38,804 ಜನ ಸೋಂಕಿತರು ಮೃತಪಟ್ಟಿದ್ರೆ, ಒಟ್ಟು ಸೋಂಕಿತರ ಸಂಖ್ಯೆ 37,23,694 ಕ್ಕೆ ಏರಿಕೆಯಾಗಿದೆ.

Covid 3rd Wave: ರಾಜ್ಯದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ಕೊರೋನಾ ಸೋಂಕು

ರಾಜ್ಯದಲ್ಲಿ ಶುಕ್ರವಾರ 71,092 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 33,96,093 ಜನ ಗುಣಮುಖರಾಗಿದ್ದಾರೆ. ಪಾಸಿಟಿವಿಟಿ ದರ ಶೇಕಡ 20.91 ರಷ್ಟು ಇದೆ. 2,88,767 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ  ಒಂದೇ ದಿನ 15,199 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದ್ದು, 8 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ, ಬೆಂಗಳೂರಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 16,81,674 ಕ್ಕೆ ಏರಿಕೆಯಾಗಿದ್ರೆ,  ಕೊರೋನಾದಿಂದ ಈವರೆಗೆ 16,554 ಸಾವನ್ನಪ್ಪಿದ್ದಾರೆ. 16,81,674 ಸೋಂಕಿತರ ಪೈಕಿ 15,04,941 ಜನರು ಗುಣಮುಖರಾಗಿದ್ದಾರೆ.ಪ್ರಸ್ತುತ ಬೆಂಗಳೂರಲ್ಲಿ 1,60,178  ಸಕ್ರಿಯ ಕೇಸ್‌ಗಳಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೊರೋನಾ ಕೇಸ್ ?
ಬಾಗಲಕೋಟೆ 187, ಬಳ್ಳಾರಿ 709, ಬೆಳಗಾವಿ 725, ಬೆಂಗಳೂರು ಗ್ರಾಮಾಂತರ 558, ಬೆಂಗಳೂರು ನಗರ 15,199, ಬೀದರ್ 194, ಚಾಮರಾಜನಗರ 618, ಚಿಕ್ಕಬಳ್ಳಾಪುರ 427, ಚಿಕ್ಕಮಗಳೂರು 283, ಚಿತ್ರದುರ್ಗ 192, ದಕ್ಷಿಣ ಕನ್ನಡ 516, ದಾವಣಗೆರೆ 186, ಧಾರವಾಡ 1,500, ಗದಗ 171, ಹಾಸನ 1,037, ಹಾವೇರಿ 179, ಕಲಬುರಗಿ 406, ಕೊಡಗು 371, ಕೋಲಾರ 452, ಕೊಪ್ಪಳ 227, ಮಂಡ್ಯ 963, ಮೈಸೂರು 1,877, ರಾಯಚೂರು 225, ರಾಮನಗರ 262, ಶಿವಮೊಗ್ಗ 509, ತುಮಕೂರು 1,315, ಉಡುಪಿ 818, ಉತ್ತರ ಕನ್ನಡ 760, ವಿಜಯಪುರ 125, ಯಾದಗಿರಿ- 207.

ಕೊರೋನಾದಿಂದ ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? 
ಬೆಂಗಳೂರು ನಗರ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8 ಮಂದಿ ಸಾವನ್ನಪ್ಪಿದ್ದಾರೆ. ಹಾಸನ 5, ದಕ್ಷಿಣ ಕನ್ನಡ, ತುಮಕೂರು 4, ಬೆಳಗಾವಿ, ಶಿವಮೊಗ್ಗ 3, ಹಾವೇರಿ, ರಾಮನಗರ 2, ಬೆಂಗಳೂರು ಗ್ರಾಮಾಂತರ, ಬೀದರ್, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಗದಗ, ಕಲಬುರಗಿ, ಕೊಡಗು, ಕೋಲಾರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಬಲಿಯಾಗಿದ್ದಾರೆ.

ಕರ್ನಾಟಕ(Karnataka) ಪ್ರಸ್ತುತ ಕರೋನಾ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸದ್ಯ ದೇಶದಲ್ಲಿಯೇ(India) ಅತಿ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗುತ್ತಿರುವುದು ಕರ್ನಾಟಕದಲ್ಲಿಯೇ! ಅದರಲ್ಲೂ, ಕಳೆದ ಕೆಲ ದಿನಗಳಿಂದ ಸೋಂಕು ಹೆಚ್ಚು ಬಾಧಿಸುವ ರಾಜ್ಯವೆಂದು ಹೇಳುವ ಮಹಾರಾಷ್ಟ್ರಕ್ಕಿಂತಲೂ ಒಂದೂವರೆಪಟ್ಟು ಅಧಿಕ ಮಂದಿ ಕರ್ನಾಟಕದಲ್ಲಿ ಸೋಂಕಿತರಾಗುತ್ತಿದ್ದಾರೆ.

ಕೊರೋನಾ(Coronavirus) ಹೊಸ ಪ್ರಕರಣಗಳು ಮಹಾರಾಷ್ಟ್ರ(Maharashtra) ಮತ್ತು ತಮಿಳುನಾಡಿನಲ್ಲಿ(Tamil Nadu) 30 ಸಾವಿರ, ಕೇರಳದಲ್ಲಿ 25 ಸಾವಿರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಗುಜರಾತ್‌ ಹಾಗೂ ಮಧ್ಯಪ್ರದೇಶದಲ್ಲಿ 15 ಸಾವಿರ, ದೆಹಲಿ ಹಾಗೂ ಪಶ್ಚಿಮ ಬಂಗಾಳದಲ್ಲಿ ಐದು ಸಾವಿರ ಆಸುಪಾಸಿಗೆ ಇಳಿಕೆಯಾಗಿವೆ. ಆದರೆ, ಕರ್ನಾಟಕದಲ್ಲಿ ಡಿ.23ರಂದು 50 ಸಾವಿರಕ್ಕೆ ಹೆಚ್ಚಳವಾಗಿದ್ದು, ಕಳೆದ ಎಂಟು ದಿನಗಳಿಂದ 40 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಕಳೆದ ನಾಲ್ಕು ದಿನಗಳಿಂದ 40 ಸಾವಿರಕ್ಕೂ ಅಧಿಕ ಮಂದಿ ಸೋಂಕಿತರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ, ಸೋಂಕಿತರ ಸಾವು ದಾಖಲೆಯಷ್ಟು ವರದಿಯಾಗುತ್ತಿದೆ. ಈ ಮೂಲಕ ಸೋಂಕಿನ ಉಚ್ಛ್ರಾಯ ಸ್ಥಿತಿಯಲ್ಲಿದ್ದೇವೆ ಎನ್ನುತ್ತಾರೆ ಆರೋಗ್ಯ ತಜ್ಞರು(Health Experts).

ನಗರದಲ್ಲಿ ಸತತ 10 ದಿನಗಳಿಂದ ಬೆಂಗಳೂರಿನಲ್ಲಿಯೇ(Bengaluru)  ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಸಕ್ರಿಯ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ನಾಲ್ಕು ದಿನಗಳಿಂದ ಕೊರೋನಾ ಪ್ರಕರಣಗಳು ಮುಂಬೈನಲ್ಲಿ ನಾಲ್ಕು ಸಾವಿರಕ್ಕೆ, ಪುಣೆ ಹಾಗೂ ದೆಹಲಿಯಲ್ಲಿ 10 ಸಾವಿರಕ್ಕೆ ಇಳಿಕೆಯಾಗಿದೆ. ಆದರೆ, ಬೆಂಗಳೂರಿನಲ್ಲಿ 20 ಸಾವಿರ ಆಸುಪಾಸಿನಲ್ಲಿಯೇ ಇದೆ.

click me!