ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ.
ಬೆಂಗಳೂರು, (ಆಗಸ್ಟ್.26): ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಕರ್ನಾಟಕ ಕೋರ್ಟ್‌ನ ಏಕ ಸದಸ್ಯ ಪೀಠ ಆದೇಶವನ್ಜು ವಿಭಾಗೀಯ ಪೀಠ ಎತ್ತಿ ಹಿಡಿಡಿದ್ದು, ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಲು ಸೂಚನೆ ನೀಡಿದೆ. ಈದ್ಗಾ ಮೈದಾನದಲ್ಲಿ ಬಕ್ರೀದ್ ಮತ್ತು ರಂಜಾನ್ ಆಚರಣೆ ಹೊರತುಪಡಿಸಿ ಬೇರೆ ದಿನಗಳಲ್ಲಿ ಪ್ರಾರ್ಥನೆಗೆ ಮುಸಲ್ಮಾನ ಸಮುದಾಯ ಬಳಸಿಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಜತೆಗೆ ಸ್ವತಂತ್ರೋತ್ಸವ, ಗಣರಾಜ್ಯೋತ್ಸವ ಆಚರಣೆಯನ್ನು ಈದ್ಗಾ ಮೈದಾನದಲ್ಲಿ ಆಚರಿಸಬಹುದಾ ಅಥವಾ ಆಚರಿಸಬಾರದಾ ಎಂಬುದನ್ನು ಬಿಬಿಎಂಪಿ ಮತ್ತು ಸರ್ಕಾರ ನಿರ್ಧರಿಸಬೇಕು ಎಂದು ಕೋರ್ಟ್ ಸೂಚಿಸಿದೆ.
ಜತೆಗೆ ಗಣೇಶೋತ್ಸವವನ್ನು ಈದ್ಗಾ ಮೈದಾನದಲ್ಲಿ ಆಚರಿಸುವ ಸಂಬಂಧವೂ ವಿಚಾರಣೆ ನಡೆಸಿದ ನ್ಯಾಯಾಲಯ, ಆಚರಣೆಗೆ ಅನುಮತಿ ನೀಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಸರ್ಕಾರ ಅನುಮತಿ ನೀಡಿದರೆ ಗಣೇಶೋತ್ಸವ ನಡೆಸಬಹುದು ಎಂದು ಕೋರ್ಟ್ ಸೂಚಿಸಿದಂತಾಗಿದೆ. ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಕೊಡಬೇಕು ಎಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದಾಗ ಸಾಧ್ಯವಿಲ್ಲ ಎಂದು ಮುಸ್ಲಿಂ ಸಮುದಾಯದ ನಾಯಕರು ಹೇಳಿದ್ದೇ ಇಡೀ ವೃತ್ತಾಂತ ಕೋರ್ಟ್ ಮೆಟ್ಟಿಲೇರುವಂತಾಗಲು ನೇರ ಕಾರಣ.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ: ಸದನ ಸಮಿತಿ ರಚನೆ
ಜಮೀರ್ ಅಹ್ಮದ್, ಪ್ರಮೋದ್ ಮುತಾಲಿಕ್, ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಕುರಿತಾಗಿ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದರು. ತಾಕತ್ತಿದ್ದರೆ ಆಚರಣೆ ಮಾಡಿ ನೋಡಿ ಎಂದು ಜಮೀರ್ ಬಹಿರಂಗ ಸವಾಲು ಹಾಕಿದ್ದರೆ, ಬಿಜೆಪಿ ನಾಯಕ ರೇಣುಕಾಚಾರ್ಯ ಈದ್ಗಾ ಮೈದಾನ ನಿಮ್ಮಪ್ಪ ಮನೆಯದ್ದಾ ಎಂದು ಪ್ರತಿಕ್ರಿಯಿಸಿದ್ದರು. ರಂಜಾನ್ ಹಬ್ಬ ಆಚರಿಸುವುದಾದೆ ಸ್ವತಂತ್ರೋತ್ಸವ ಮತ್ತು ಗಣೇಶೋತ್ಸವ ಆಚರಣೆ ಯಾಕೆ ಮಾಡಬಾರದು ಎಂದು ಹಿಂದೂ ಸಂಘಟನೆಗಳು ಪ್ರಶ್ನಿಸಿದರೆ, ಮುಸ್ಲಿಂ ಸಮುದಾಯಕ್ಕೆ ಮೀಸಲಿರುವ ಮೈದಾನ ಕೆಲವೇ ಕೆಲವು. ಅದನ್ನೂ ಯಾಕೆ ಎಲ್ಲ ಆಚರಣೆಗಳಿಗೆ ನೀಡಬೇಕು ಎಂದು ಮುಸಲ್ಮಾನ ಸಂಘಟನೆಗಳು ಪ್ರಶ್ನಿಸಿದ್ದವು.
ಇದೀಗ ಹೈಕೋರ್ಟ್ ಸ್ಪಷ್ಟ ನಿರ್ದೇಶನ ಸರ್ಕಾರಕ್ಕೆ ನೀಡಿದ್ದು, ಕೋರ್ಟ್ ಆದೇಶವನ್ನು ಪಾಲಿಸುವ ಮೂಲಕ ಎರಡೂ ಬಣಗಳು ಸುಮ್ಮನಾಗುತ್ತವಾ ಎಂಬುದನ್ನು ಕಾದು ನೋಡಬೇಕು. ಧಾರ್ಮಿಕ ಕಾರ್ಯಕ್ಕೆ ಬರುವ ಅರ್ಜಿಗಳ ಪರಿಗಣಿಸುವ ಅಧಿಕಾರವನ್ನ ಹೈಕೋರ್ಟ್, ಸರ್ಕಾರಕ್ಕೆ ನೀಡಿದೆ. ಅನುಮತಿ ಕೋರಿದ ಅರ್ಜಿಗಳನ್ನು ಪರಿಶೀಲಿಸಿ ಅನುಮತಿ ನೀಡಬಹುದು ಎಂದು ಹೇಳಿದೆ. ಧಾರ್ಮಿಕ, ಸಾಂಸ್ಕೃತಿಕ ಆಚರಣೆಗೆ ಅನುಮತಿ ನೀಡಬಹುದು ಎಂದು ಆದೇಶದಲ್ಲಿ ತಿಳಿಸಿದೆ.
ವಕ್ಫ್ ಬೋರ್ಡ್ ಪರ ವಕೀಲ ಜಯಕುಮಾರ್ ಪಾಟೀಲ್ ವಾದ ಮಂಡಿಸಿದ್ರೆ, ಸರ್ಕಾರದ ಪರವಾಗಿ ಎಜಿ ಪ್ರಭುಲಿಂಗ ನಾವದಗಿ ಮತ್ತೆ ವಾದ ಮಂಡನೆ ಮಾಡಿದರು.
ಇದನ್ನೂ ಓದಿ: Idgah Maidan ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಕೋರ್ಟ್ ಬ್ರೇಕ್
ಏಕಸದಸ್ಯ ಪೀಠ ಹೇಳಿದ್ದೇನು?
ಚಾಮರಾಜಪೇಟೆ ಮೈದಾನ(Chamrajpet Idgah Maidan) ಮಾಲೀಕತ್ವಕ್ಕೆ ಸಂಬಂಧಿಸಿ BBMP ಆದೇಶದ ವಿರುದ್ಧ ವಕ್ಫ್ ಬೋರ್ಡ್ ಹೈಕೋರ್ಟ್(High Court) ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ಅವಕಾಶ ಇಲ್ಲ. ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠ ಆ.25 ಆದೇಶ ಹೊರಡಿಸಿತ್ತು. ಈ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು.