ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್‌; ಹಿರೇಮಠ್‌ಗೆ ಹಿನ್ನಡೆ

By Sharath Sharma  |  First Published Aug 26, 2022, 1:38 PM IST

Mining to restart in Ballari: ಕಳೆದ ಕೆಲ ವರ್ಷಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅಂಕುಶ ಹಾಕಲಾಗಿತ್ತು. ಆದರೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ಪೀಠ ಇಂದು ಗಣಿಗಾರಿಕೆಗೆ ಅನುಮತಿ ನೀಡಿ ಆದೇಶ ನೀಡಿದೆ. ಸಾಮಾಜಿಕ ಕಾರ್ಯಕರ್ತ ಎಸ್‌ಆರ್‌ ಹಿರೇಮಠ್‌ ಗಣಿಗಾರಿಕೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.


ನವದೆಹಲಿ: ಕರ್ನಾಟಕದಲ್ಲಿ ಅದಿರು ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಗಣಿಗಾರಿಕೆಗೆ ಅನುಮತಿ ನೀಡಿ ಆದೇಶಿಸಿದೆ. ಬಳ್ಳಾರಿ ಜಿಲ್ಲೆಯಲ್ಲಿ 35 ಮೆಟ್ರಿಕ್ ಟನ್ ತನಕ ಗಣಿಗಾರಿಕೆ ನಡೆಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಹಾಲಿ ಇರುವ 28 ಮೆಟ್ರಿಕ್ ಟನ್ ನಿಂದ 35 ಮೆಟ್ರಿಕ್ ಟನ್ ಗಣಿಗಾರಿಕೆಗೆ ಅವಕಾಶ ನೀಡಲಾಗಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠದಿಂದ ಆದೇಶ ಹೊರಬಂದಿದ್ದು, ಗಣಿಗಾರಿಕೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲು ಏರಿದ್ದ ಎಸ್. ಆರ್. ಹಿರೇಮಠ ಅವರಿಗೆ ಹಿನ್ನಡೆಯಾಗಿದೆ. ಸಮಾಜ ಪರಿವರ್ತನಾ ಸಮುದಾಯದ ಸ್ಥಾಪಕ ಎಸ್‌ ಆರ್ ಹಿರೇಮಠ್‌ ಗಣಿಗಾರಿಕೆ ನಿಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಸಮಾಜ ಪರಿವರ್ತನಾ ಸಮುದಾಯದಿಂದ ಅರ್ಜಿ ಸಲ್ಲಿಸಲಾಗಿತ್ತು. ಅತಿಯಾದ ಗಣಿಗಾರಿಕೆ ನಡೆಸಬಾರದು, ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು ಸೂಚನೆಯನ್ನು ಸಹ ಸುಪ್ರೀಂ ಕೋರ್ಟ್‌ ನೀಡಿದೆ. ಸಿಇಸಿ ಶಿಫಾರಸ್ಸಿನಂತೆ ಅದಿರು ಗಣಿಗಾರಿಕೆ ಮಿತಿಯನ್ನು ಪೂರ್ಣವಾಗಿ ತೆಗೆದುಹಾಕಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. 

ವಿವಿಧೆಡೆ ಖನಿಜ ಪರಿಶೋಧನೆ: 

Latest Videos

undefined

ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌, ಭಾರತ ಸರ್ಕಾರದ ಗಣಿ ಸಚಿವಾಲಯ, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ದೇಶದ ವಿವಿಧೆಡೆ ಖನಿಜ ಪರಿಶೋಧನೆ ಕಾರ್ಯಗಳು ವಿವಿಧ ಹಂತಗಳಲ್ಲಿ ನಡೆಸಿದ್ದವು. ಕೆಐಒಸಿಎಲ್ಅಂತಹ ನಾಲ್ಕು ಬ್ಲಾಕ್ಗಳಿಗೆ ಜಿ4 ಮಟ್ಟದ ಖನಿಜ (ನಿಕ್ಕೆಲ್, ಲೈಮ್ಸ್ಟೋನ್, ಡೋಲೊಮೈಟ್) ಪರಿಶೋಧನಾ ಕಾರ್ಯ ಪೂರ್ಣಗೊಳಿಸಿ ರಾಷ್ಟ್ರೀಯ ಖನಿಜ ಪರಿಶೋಧನಾ ಟ್ರಸ್ಟ್‌ ವರದಿ ಸಲ್ಲಿಸಿತ್ತು. ಜತೆಗೆ ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸರ್ಕಾರದಿಂದ ಮಂಜೂರಾದ 10 ಕಬ್ಬಿಣ ಮತ್ತು ಮ್ಯಾಂಗನೀಸ್‌ ಕ್ವಾರಿಗಳಲ್ಲಿ ಜಿ2, ಜಿ3 ಮಟ್ಟದ ಪರಿಶೋಧನೆ ಕಾರ್ಯ ಪ್ರಗತಿಯಲ್ಲಿವೆ ಎಂದು ವಿವರಿಸಿದ್ದರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋಣ್‌ ಸರ್ವೆ : ಎಚ್ಚೆತ್ತುಗೊಂಡ ಇಲಾಖೆ

ಕೆಐಒಸಿಎಲ್‌ ತಯಾರಿಸುವ ಉನ್ನತ ದರ್ಜೆಯ ಕಬ್ಬಿಣದ ಉಂಡೆಗಳಿಗೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆ ವಿಸ್ತಾರಗೊಳಿಸಲು ಪ್ರಯತ್ನ ಮುಂದುವರಿದಿತ್ತು. ಬ್ರೆಝಿಲ್, ಓಮನ್, ಮಲೇಷ್ಯಾ ಮತ್ತಿತರ ದೇಶಗಳಲ್ಲಿ ಚೀನಾದ ಮಾರುಕಟ್ಟೆ ಪಾಲು ಶೇ.44ರಷ್ಟಿದ್ದರೂ, ಅಲ್ಲಿ ಮಾರುಕಟ್ಟೆ ವಿಸ್ತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ: ಮತ್ತೆ ರಾಜ್ಯ ರಾಜಕೀಯಕ್ಕೆ ಜನಾರ್ಧನ ರೆಡ್ಡಿ ಎಂಟ್ರಿ, ಅಧಿಕೃತ ಘೋಷಣೆ

1059 ಕೋಟಿ ತ್ರೈಮಾಸಿಕ ಒಟ್ಟು ಆದಾಯ:

2020-21ನೇ ಆರ್ಥಿಕ ವರ್ಷದಲ್ಲಿ ಕೆಐಒಸಿಎಲ್ 2477.83 ಒಟ್ಟು ಆದಾಯ ಪಡೆದಿದ್ದು, 410.23 ಕೋಟಿ ರು. ನಿವ್ವಳ ಲಾಭ ದಾಖಲಿಸಿದೆ. 2021-22ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ 215.92 ಕೋಟಿ ರು. ತೆರಿಗೆ ನಂತರದ ಆದಾಯ ಪಡೆದಿದೆ. 1059.50 ಕೋಟಿ ರು. ಒಟ್ಟು ಆದಾಯ ದಾಖಲಿಸಿದೆ ಎಂದು ಕೆಐಒಸಿಎಲ್ ಎಂಡಿ ಸಾಮಿನಾಥನ್‌ ತಿಳಿಸಿದ್ದರು. ಇದೀಗ ಸುಪ್ರೀಂ ಕೋರ್ಟ್‌ ಕೂಡ ಹೆಚ್ಚುವರಿ ಗಣಿಗಾರಿಕೆಗೆ ಅನುಮತಿ ನೀಡಿದ್ದು ಬಳ್ಳಾರಿಯಲ್ಲಿ ಮತ್ತೆ ಮುಂದಿನಂತೆ ಗಣಿಗಾರಿಕೆ ಆರಂಭವಾಗಲಿದೆ. ಇತ್ತೀಚೆಗಷ್ಟೇ ಜನಾರ್ಧನ ರೆಡ್ಡಿ ಅವರ ಆಂಧ್ರ ಪ್ರದೇಶದ ಓಬಳಾಪುರಂ ಮೈನಿಂಗ್‌ ಕಂಪೆನಿಗೆ ಗಣಿಗಾರಿಕೆಗೆ ಪರವಾನಗಿ ಸಿಕ್ಕಿತ್ತು. ದೇಶದ ಹಲವೆಡೆ ಗಣಿಗಾರಿಕೆಗಳು ಮತ್ತೆ ಹೆಚ್ಚುವ ಮುನ್ಸೂಚನೆ ಈ ಆದೇಶದಿಂದ ಹೊರಬಂದಿದೆ.

click me!