ಕರ್ನಾಟಕದಲ್ಲಿ ಈಗ 5.37 ಕೋಟಿ ಮತದಾರರು

By Kannadaprabha NewsFirst Published Jan 23, 2024, 9:08 AM IST
Highlights

ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದು, ಒಟ್ಟು 5.37 ಕೋಟಿ ಮತದಾರರಿದ್ದಾರೆ. ಈ ಪೈಕಿ 2.69 ಕೋಟಿ ಪುರುಷ ಮತದಾರರು, 2.68 ಕೋಟಿ ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರಿದ್ದಾರೆ. 

ಬೆಂಗಳೂರು(ಜ.23):  ರಾಜ್ಯದ ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿ ಬಿಡುಗಡೆ ಮಾಡಿದ್ದು, 17,937 ಶತಾಯುಷಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 5.37 ಕೋಟಿ ಮತದಾರರಿದ್ದಾರೆ. ಕರಡುಪಟ್ಟಿಗೆ ಹೋಲಿಸಿದರೆ ಅಂತಿಮ ಪಟ್ಟಿಯಲ್ಲಿ ಮತದಾರರ ಸಂಖ್ಯೆ 4.08 ಲಕ್ಷದಷ್ಟು ಹೆಚ್ಚಳವಾಗಿದೆ. ಸೋಮವಾರ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮುಖ್ಯಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿ ಪ್ರಕಾರ 5.33 ಕೋಟಿ ಮತದಾರರಿದ್ದರು. ಇದೀಗ 4.08 ಲಕ್ಷ ಮತದಾರರು ಹೆಚ್ಚಳವಾಗಿದ್ದು, ಒಟ್ಟು 5.37 ಕೋಟಿ ಮತದಾರರಿದ್ದಾರೆ. ಈ ಪೈಕಿ 2.69 ಕೋಟಿ ಪುರುಷ ಮತದಾರರು, 2.68 ಕೋಟಿ ಮಹಿಳಾ ಮತದಾರರು ಮತ್ತು 4,920 ಇತರೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. 

Latest Videos

ಬೆಂಗಳೂರಿನಲ್ಲಿದ್ದಾರೆ 66,000 ಪದವೀಧರ, 11,000 ಶಿಕ್ಷಕ ಮತದಾರರು: ತುಷಾರ್‌

17 ಎಂಪಿ ಕ್ಷೇತ್ರಗಳಲ್ಲಿ ಮಹಿಳೆಯರೇ ನಂ.1

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರದಲ್ಲಿ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಎ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

ಮಹಿಳಾ ಮತದಾರರದಲ್ಲಿ ಗಮನಾರ್ಹವಾಗಿ ಹೆಚ್ಚಳವಾಗಿದ್ದು, 2.77 ಲಕ್ಷ ಮತದಾರರು ಅಧಿಕವಾಗಿದ್ದಾರೆ. ಪುರುಷ ಮತದಾರರ ಸಂಖ್ಯೆ 1.30 ಲಕ್ಷ ಮತ್ತು ಇತರೆ ಮತದಾರರ ಸಂಖ್ಯೆ 24 ಹೆಚ್ಚಳವಾಗಿದೆ. ವಯಸಿನೆ ಮತದಾರರ ಸಂಖ್ಯೆ, 100 ವರ್ಷ ಮೇಲ್ಪಟ್ಟ ವಯಸ್ಸಿನ 17,937 ಆಗಿದೆ. ಆದರೆ ಕರಡು ಮತದಾರರ ಪಟ್ಟಿಯಲ್ಲಿ 100 ವರ್ಷ ಮೇಲ್ಪಟ್ಟವಯಸ್ಸಿನಮತದಾರರ ಸಂಖ್ಯೆಯು 23,377 ಇತ್ತು. 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆಯಲ್ಲಿಯೂ ಇಳಿಮುಖವಾಗಿದ್ದು, ಕರಡುಪಟ್ಟಿಯಲ್ಲಿ 13.82 ಲಕ್ಷ ಮತದಾರರಿದ್ದರೆ, ಅಂತಿಮ ಮತದಾರರ ಪಟ್ಟಿಯಲ್ಲಿ 12.71 ಲಕ್ಷ ಮತದಾರರಿದ್ದಾರೆ ಎಂದು ವಿವರಿಸಿದರು.

ಎಂಪಿ ಕ್ಷೇತ್ರ: ಬೆಂ.ಉತ್ತರ ಅತಿಹೆಚ್ಚು ಮತದಾರರು

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಅಧಿಕ ಮತದಾರರಿದ್ದು, 31.30 ಲಕ್ಷ ಮಂದಿ ಇದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಡಿಮೆ ಮತದಾರರಿದ್ದು, 15.65 ಲಕ್ಷ ಮತದಾರರಿದ್ದಾರೆ ಎಂದು ಮೀನಾ ತಿಳಿಸಿದರು.
224 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರು ಅಂದರೆ, 7.17 ಲಕ್ಷ ಮಂದಿ ಇದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾರರಿದ್ದಾರೆ. ಅಲ್ಲಿ ಒಟ್ಟು1.67 ಲಕ್ಷ ಮತದಾರರಿದ್ದಾರೆ ಎಂದು ವಿವರಿಸಿದರು.

click me!