
ತುಮಕೂರು (ಮೇ.2): ನವಿಲುಗಳ ಸರಣಿ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ಭೋಪಾಲ್ ಲ್ಯಾಬ್ ಸ್ಪಷ್ಟಪಡಿಸಿದ್ದು, ರಾಷ್ಟ್ರೀಯ ಉಚ್ಚ ಸುರಕ್ಷಾ ಪಶುರೋಗ ಸಂಸ್ಥೆ ನೀಡಿದ ಅಧಿಕೃತ ವರದಿ ಪ್ರಕಾರ ನವಿಲುಗಳ ಅಂಗಾಂಶ ಮಾದರಿಯಲ್ಲಿ ಎಚ್5ಎನ್1 ವೈರಸ್ ಇರುವುದು ದೃಢಪಟ್ಟಿದೆ.
ಈ ಹಿಂದೆ ತುಮಕೂರು ತಾಲೂಕಿನ ಸುತ್ತಮುತ್ತ 44 ನವಿಲುಗಳ ಅಸಹಜವಾಗಿ ಏಕಾಏಕಿ ಸಾವನ್ನಪ್ಪಿಪ್ಪಿದ್ದವು. ಈ ವೇಳೆ ಮೃತ ನವಿಲುಗಳಿಂದ ಅರಣ್ಯ ಇಲಾಖೆ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಲು ಲ್ಯಾಬಿಗೆ ಕಳುಹಿಸಿತ್ತು. ಈಗ ಅದರ ವರದಿ ಬಂದಿದ್ದು, ನವಿಲುಗಳ ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂದು ದೃಢಪಟ್ಟಿದೆ.
ಹಕ್ಕಿಜ್ವರ ದೃಢಪಟ್ಟ ಬೆನ್ನಲ್ಲೇ ತುರ್ತುಕ್ರಮಕ್ಕೆ ಪಶು ಸಂಗೋಪನಾ ಇಲಾಖೆ ಮುಂದಾಗಿದೆ. ಈ ಭಾಗದ ಕೋಳಿ ಸಾಕಾಣಿಕೆ ಕೇಂದ್ರಗಳ ಮೇಲೆ ಇಲಾಖೆ ತೀವ್ರ ನಿಗಾ ಇಟ್ಟಿದ್ದು, ಜನರು ಆತಂಕ ಪಡದೆ ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದಾರೆ.
ಈ ಮಧ್ಯೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗಾಗಿ ಸತ್ತ ಯಾವುದೇ ಪಕ್ಷಿಗಳನ್ನು ಮುಟ್ಟದಂತೆ ಸಾರ್ವಜನಿಕರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.
ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಸದ್ಯಕ್ಕೆ ಸಾಕು ಪ್ರಾಣಿ-ಪಕ್ಷಿಗಳ ಕುರಿತು ಯಾವುದೇ ಆದೇಶವಿಲ್ಲ. ಆದ್ದರಿಂದ ಜನರು ಆತಂಕ ಪಡಬಾರದು ಎಂದು ಶಿವಪ್ರಸಾದ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ