Bangalore emergency alert test: ನಾಳೆ ನಗರ ನಿವಾಸಿಗಳ ಮೊಬೈಲ್‌ಗೆ ಎಮೆರ್ಜೆನ್ಸಿ ಅಲರ್ಟ್ ಸಂದೇಶ, ಗಾಬರಿಯಾಗಬೇಡಿ! ಕಾರಣ ತಿಳಿಯಿರಿ

Published : May 02, 2026, 08:19 AM IST
Bengaluru Test alert messege

ಸಾರಾಂಶ

ನಾಳೆ ಬೆಂಗಳೂರಿನಲ್ಲಿ ಎಲ್ಲಾ ಮೊಬೈಲ್ ಫೋನ್‌ಗಳಲ್ಲಿ ಏಕಕಾಲಕ್ಕೆ 'TEST' ಎಂಬ ನಿಗೂಢ ಅಲರ್ಟ್ ಸಂದೇಶ ಬರಲಿದೆ. ಇದು ಯಾವುದೇ ಅಪಾಯದ ಮುನ್ಸೂಚನೆಯಲ್ಲ, ಬದಲಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಭವಿಷ್ಯದ ತುರ್ತು ಸಂದರ್ಭಗಳಿಗಾಗಿ ನಡೆಸುತ್ತಿರುವ ಒಂದು ಪರೀಕ್ಷಾರ್ಥ ಸಂದೇಶವಾಗಿದೆ.

ಬೆಂಗಳೂರು (ಮೇ.2) ನಾಳೆ ನಗರದಲ್ಲಿ ಒಂದು ವಿಚಿತ್ರ ವಿದ್ಯಮಾನ ನಡೆಯಲಿದೆ. ಪ್ರತಿಯೊಬ್ಬರ ಜೇಬಿನಲ್ಲಿದ್ದ ಮೊಬೈಲ್ ಫೋನ್‌ಗಳು ಒಮ್ಮೆಲೇ ಅಲರ್ಟ್ ರಿಂಗ್‌ಟೋನ್ ಶುರು ಬರುತ್ತದೆ. ಇದು ನಿಮಗಷ್ಟೇ ಅಲ್ಲ, ಇಡೀ ನಗರದ ಲಕ್ಷಾಂತರ ಜನರ ಫೋನ್‌ಗಳಲ್ಲಿ ಏಕಕಾಲಕ್ಕೆ ಕರ್ಕಶವಾದ ಅಲರ್ಟ್ ಶಬ್ದ ಮೊಳಗುತ್ತದೆ. ಜನರು ಗಾಬರಿಯಾಗಬೇಕಿಲ್ಲ. ಇದೇನಿದು? ನನ್ನ ಫೋನ್ ಹ್ಯಾಕ್ ಆಯ್ತಾ? ಅಥವಾ ಏನಾದರೂ ದೊಡ್ಡ ಅಪಾಯ ಕಾದಿದೆಯೇ? ಎಂಬ ಆತಂಕ ಕ್ಷಣಾರ್ಧದಲ್ಲಿ ಎಲ್ಲರನ್ನೂ ಕಾಡಿದರೂ ಅಚ್ಚರಿಯಿಲ್ಲ.

ಮೊಬೈಲ್ ಸ್ಕ್ರೀನ್ ಮೇಲೆ ಕೇವಲ ‘TEST’ ಎಂಬ ಅಕ್ಷರಗಳು ರಾರಾಜಿಸುತ್ತವೆ. ಈ ನಿಗೂಢ ಸಂದೇಶದ ಹಿಂದಿನ ಮರ್ಮವೇನು ಎಂಬ ಕುತೂಹಲ ಎಲ್ಲರಲ್ಲೂ ಕಾಡಬಹುದು. ಆದರೆ ಈ ಅಲರ್ಟ್‌ನಿಂದ ನೀವು ಗಾಬರಿ ಪಡುವ ಅಗತ್ಯವೇ ಇಲ್ಲ! ಇದು ಯಾವುದೇ ಸೈಬರ್ ದಾಳಿಯಲ್ಲ ಅಥವಾ ಅನಾಹುತದ ಮುನ್ಸೂಚನೆಯೂ ಅಲ್ಲ. ಇದು ಭಾರತದ ದೂರಸಂಪರ್ಕ ಇಲಾಖೆಯ ಒಂದು ಮಾಸ್ಟರ್ ಪ್ಲಾನ್. ಭವಿಷ್ಯದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪ ಅಥವಾ ತುರ್ತು ಸಂದರ್ಭಗಳಲ್ಲಿ ನಾಗರಿಕರನ್ನು ಎಚ್ಚರಿಸಲು ರೂಪಿಸಲಾದ ಹೈಟೆಕ್ ವ್ಯವಸ್ಥೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು 'ಸಿ-ಡಾಟ್' ಸಹಯೋಗದೊಂದಿಗೆ ಈ 'ಪರೀಕ್ಷಾರ್ಥ ಅಲರ್ಟ್ ಸಂದೇಶ ವನ್ನು ಕಳುಹಿಸಲಾಗುತ್ತಿದೆ. ಸುರಕ್ಷಿತ ಸ್ಥಳ ತಲುಪಲು ಜನರಿಗೆ ಮುನ್ಸೂಚನೆ ನೀಡುವ ತಂತ್ರಜ್ಞಾನ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸುವುದೇ ಇದರ ಉದ್ದೇಶ.

ಹಾಗಾಗಿ, ನಾಳೆ ನಿಮ್ಮ ಫೋನ್ ಹಠಾತ್ತಾಗಿ ಸೌಂಡ್ ಮಾಡಿದರೆ ಬೆಚ್ಚಿಬೀಳಬೇಡಿ. ಅದು ನಿಮ್ಮ ಸುರಕ್ಷತೆಗಾಗಿ ಸರ್ಕಾರ ನಡೆಸುತ್ತಿರುವ ಒಂದು ಸಣ್ಣ ಪರೀಕ್ಷೆ ಅಷ್ಟೇ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: Bangalore emergency alert test - ನಾಳೆ ನಗರ ನಿವಾಸಿಗಳ ಮೊಬೈಲ್‌ಗೆ ಎಮೆರ್ಜೆನ್ಸಿ ಅಲರ್ಟ್ ಸಂದೇಶ, ಗಾಬರಿಯಾಗಬೇಡಿ! ಕಾರಣ ತಿಳಿಯಿರಿ
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್‌ ಬೆಲೆ ₹990, ಶೀಘ್ರ ಹೋಟೆಲ್‌ ತಿನಿಸುಗಳ ದರ ಇನ್ನಷ್ಟು ಹೆಚ್ಚಳ