ಸಿಎಂ ಸಾಹೇಬ್ರೇ, ಜಾರ್ಜ್‌ ಚೇಟಾ ಇಲ್ನೋಡಿ, ನಿಮ್ಮ ಗೃಹಲಕ್ಷ್ಮಿ ಬೀದೀಲಿ ಹೆಣವಾಗಿದ್ದಾಳೆ! ಯಾರನ್ನ ಹೊಣೆ ಮಾಡ್ತೀರಿ?

ಚಿತ್ರದುರ್ಗದಲ್ಲಿ ಕಳಪೆ ನಿರ್ವಹಣೆಯಿಂದ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಸಿಎಂ ಸಾಹೇಬ್ರೇ, ಜಾರ್ಜ್ ಅವರೇ ಅಮಾಯಕ ತಾಯಿ, ಮಗು ವಿದ್ಯುತ್‌ ಸ್ಪರ್ಶಿಸಿ ಸತ್ತರಲ್ಲ, ಯಾರನ್ನ ಹೊಣೆ ಮಾಡ್ತೀರೀ?


ಚಿತ್ರದುರ್ಗ (ಏ.03): ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆ ಅಡಿ ಉಚಿತ ವಿದ್ಯುತ್ ಕೊಡ್ತೀವಿ ಎಂದು ಕಳಪೆ ನಿರ್ವಹಣೆ ಮಾಡಲಾಗುತ್ತಿದೆ. ಜನರು ವಿದ್ಯುತ್ ಕಂಬ ಬಿದ್ದು, ವಿದ್ಯುತ್ ತಂತಿ ಬಿದ್ದು ಸಾವಿಗೀಡಾಗುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಇಲ್ಲಿನೋಡಿ ನಿಮಗೆ ಮತ ಹಾಕಿ ಗೆಲ್ಲಿಸಿದ ಗೃಹಲಕ್ಷ್ಮಿಯ ಪ್ರಾಣವನ್ನು, ಜಾರ್ಜ್ ಅವರ ಗೃಹಜ್ಯೋತಿ ಕಿತ್ತುಕೊಂಡಿದ್ದಾಳೆ. ಇದಕ್ಕೆಲ್ಲಾ ಕೊನೆಯೇ ಇಲ್ಲವೇ? ಈ ಸಾವಿಗೆ ಯಾರು ಉತ್ತರ ಕೊಡುತ್ತೀರಿ, ಯಾರನ್ನು ಹೊಣೆ ಮಾಡುತ್ತೀರಿ.?

ರಾಜ್ಯ ಸರ್ಕಾರದಿಂದ ಕಳೆದ ಎರಡೂವರೆ ವರ್ಷದಲ್ಲಿ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಿ ಜನರಿಗೆ ಬರೆ ಎಳೆದಿದೆ. ಇದೀಗ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದ್ದು, 200 ಯೂನಿಟ್‌ವರೆಗೆ ವಿದ್ಯುತ್ ಉಚಿತ ಬಡಜನರಿಗೆ ಬೆಲೆ ಏರಿಕೆ ಬಿಸಿ ತಾಗುತ್ತಿಲ್ಲ. ಒಂದೊಮ್ಮೆ ಗ್ಯಾರಂಟಿ ವಾಪಸ್ ಹೋದರೆ ಜನರು ಕರೆಂಟ್ ಬಿಲ್ ಕಟ್ಟುವುದಕ್ಕೂ ಪರದಾಡಬೇಕಾಗುತ್ತದೆ. ಆದರೆ, ಗೃಹಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಫ್ರೀ ಕೊಡ್ತೀವಿ ಎಂದು ಬೇಕಾಬಿಟ್ಟು ನಿರ್ವಹಣೆ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕೂಲಿ-ನಾಲಿ ಮಾಡಿಕೊಂಡು ಜೀವನ ಮಾಡುತ್ತಾ, ನಿಮಗೆ ಓಟು ಹಾಕಿ ಗೆಲ್ಲಿಸಿದ ತಪ್ಪಿಗೆ ಇಲ್ಲೊಬ್ಬ ತಾಯಿ ಮಗು ವಿದ್ಯುತ್ ತಂತಿ ಸ್ಪರ್ಶಿಸಿ ಬೀದಿ ಹೆಣವಾಗಿದ್ದಾರೆ.

Latest Videos

ಇದನ್ನೂ ಓದಿ: ಸಿಎಂ ಸಿದ್ದು ಸರ್‌, ಡಿಸಿಎಂ ಡಿಕೆಶಿ ಸರ್‌, ರಸ್ತೆಯಲ್ಲಿ ನಿಲ್ಲೋ ಈ ನೀರಿಗೆ ಟ್ಯಾಕ್ಸ್‌ ಕಟ್ಟಂಗಿಲ್ವಾ?

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ತಾಯಿ ಬೋರಮ್ಮ(25) ಮಗ ಪ್ರಣೀತ್(03) ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದ್ದಾರೆ. ವಿದ್ಯುತ್ ತಂತಿ ಸ್ಪರ್ಶಿಸಿದ್ದ ಮಗನನ್ನು ನೋಡಿದ ತಾಯಿ ತನ್ನ ಪ್ರಾಣವನ್ನು ಲೆಕ್ಕಿಸದೇ ರಕ್ಷಣೆಗೆ ಮುಂದಾದ ತಾಯಿಯೂ ಸಾವನ್ನಪ್ಪಿದ್ದಾಳೆ. ಬೆಳಗ್ಗೆ ಜೀವಂತವಾಗಿದ್ದ ತಾಯಿ-ಮಗ ಇದೀಗ ಹೆಣವಾಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ  ರಾಜಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತಂತೆ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ತಂತಿಗಳು ಮನುಷ್ಯರಿಗೆ ತಾಗುವಷ್ಟು ಕೆಳಗೆ ನೇತಾಡುತ್ತಿರುತ್ತವೆ. ಈ ಬಗ್ಗೆ ದೂರು ನೀಡಿದರೂ ಕನಿಷ್ಠ ನಿರ್ವಹಣೆಯನ್ನೂ ಮಾಡುವುದಿಲ್ಲ. ಇನ್ನು ಕೆಲವು ಕಡೆ ತಂತಿ ನೇತಾಡುತ್ತಿದ್ದಾಗ, ಗಾಳಿ ಬೀಸಿ ಕಿಡಿ ಹೊತ್ತಿಕೊಂಡು ತುಂಡಾಗಿ ಬೀಳುತ್ತಿರುತ್ತವೆ. ಇನ್ನು ಕೆಲವೊಮ್ಮೆ ರೈತರು, ಜಾನುವಾರುಗಳು, ರೈತರ ಬೆಳೆಗಳು ಕಡ ಅನಾಹುತಕ್ಕೆ ಬಲಿಯಾಗುತ್ತವೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಸಮಸ್ಯೆಯ ಕಡೆಗೆ ಗಮನ ಹರಿಸುವುದಿಲ್ಲ. ಯಾವುದ್ದಾದರೂ ಸಾವು ಸಂಭವಿಸಿ, ಜನರು ರೊಚ್ಚಿಗೆದ್ದು ಕಲ್ಲೆಸೆಯುವವರೆಗೂ ಎಮ್ಮೆ ಚರ್ಮದ ಅಧಿಕಾರಿಗಳಿಗೆ ಬಿಸಿಯೇ ತಾಗುವುದಿಲ್ಲ. ತಾಯಿ-ಮಗು ಸಾವಿಗೆ ಯಾರ ನಿರ್ಲಕ್ಷ್ಯ ಕಾರಣ? ಕುಟುಂಬದ ನಷ್ಟ ತುಂಬಿ ಕೊಡುವವರಾರು? ಈ ಬಗ್ಗೆ ಇಂಧನ ಸಚಿವರು ಉತ್ತರ ಕೊಡಬೇಕು.

ಇದನ್ನೂ ಓದಿ: ಬೆಂಗಳೂರು -ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಕಾರಿಗೆ ಗುದ್ದಿದ ಐರಾವತ ಬಸ್; ಅಂತ್ಯಕ್ರಿಯೆಗೆ ಹೊರಟ ನಾಲ್ವರು ದುರ್ಮರಣ

click me!