ವಕ್ಫ್ ತಿದ್ದುಪಡಿ ವಿರೋಧಿಸುವವರು ದೇಶದ್ರೋಹಿಗಳು: ಪ್ರಮೋದ್ ಮುತಾಲಿಕ್

ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವವರನ್ನು ದೇಶದ್ರೋಹಿಗಳು ಎಂದು ಕರೆದಿದ್ದಾರೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ನಡೆಯುತ್ತಿದ್ದ ಲೂಟಿಯನ್ನು ತಡೆಯಲು ಈ ಮಸೂದೆ ಸಹಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

Those opposing Indian Govt Waqf Amendment Bill are traitors says Pramod Muthalik sat

ಹುಬ್ಬಳ್ಳಿ (ಏ.03): ದೇಶದಲ್ಲಿ ರೈತರು ಹಾಗೂ ಬಡಜನರ ಆಸ್ತಿಯನ್ನು ಉಳಿಸುವುದಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ವಿರೋಧ ಮಾಡುವವರು ದೇಶದ್ರೋಹಿಗಳು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಹಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಗುರುವಾರ ಮಾತನಾಡಿ, ಹಲವು ವಿರೋಧಗಳ ನಡುವೆ ವಕ್ಫ್ ತಿದ್ದುಪಡಿ ಬಿಲ್ ಪಾಸ್ ಆಗಿರೋದು ಸ್ವಾಗತಾರ್ಹ. ಸಂಸತ್ತಿನಲ್ಲಿ ಮಂಡನೆ ಮಾಡಿದ ಅವತೇ ರಾತ್ರಿ ಬಿಲ್ ಪಾಸ್ ಆಗಿದ್ದು ಒಳ್ಳೆಯ ಬೆಳವಣಿಗೆ ಆಗಿದೆ. ವಕ್ಪ್ ಬೋರ್ಡ್ ಹೆಸರಿನಲ್ಲಿ ಸರ್ಕಾರಿ ಜಾಗ, ರೈತರ, ಮಠಮಾನ್ಯಗಳ , ದಲಿತರ ಜಾಗ, ಎಂಎಲ್ ಎ , ಎಂಪಿಗಳ ಜಾಗವನ್ನು ಅತಿಕ್ರಮಣ ಮಾಡಲಾಗುತ್ತಿತ್ತು. ವಕ್ಪ್ ಬೋರ್ಡ್ ಲೂಟಿ ಮಾಡುತ್ತಿತ್ತು. ಇಂಥದರ ವಿರುದ್ಧ ಬಿಲ್ ಪಾಸ್ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಅಭಿನಂದನೆ. ಇದನ್ನು ವಿರೋಧ ಮಾಡುತ್ತಿರುವವರು ದೇಶದ್ರೋಹಿಗಳು ಎಂದು ಹೇಳಿದರು.

Latest Videos

ವಕ್ಫ್ ತಿದ್ದುಪಡಿ ಕಾಯ್ದೆಯು ಬರೀ ಓಟ್ ಬ್ಯಾಂಕ್, ಅಧಿಕಾರ ಒಂದೇ ಅಲ್ಲ. ದೇಶ, ಜನ ಇದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಕೆಲ ಪಕ್ಷಗಳು ಲೂಟಿಕೋರರ ಪರವಾಗಿ ನಿಲ್ಲತ್ತಾರೆ. ಇವರಿಗೆ ಕನಿಷ್ಠ ಪ್ರಜ್ಞೆ ಇಲ್ಲ. ಸಂವಿಧಾನದ ಮೀರಿ ಕಾಂಗ್ರೆಸ್ ಕಾನೂನು ತಂದಿದೆ. ಅವರಿಗೆ ನಾಚಿಕೆ ಆಗಬೇಕು. ಸಂವಿಧಾನದ ಧಿಕ್ಕರಿಸಿ ವಕ್ಪ್ ಬೋರ್ಡ್ ಗೆ ಪವರ್ ನೀಡಿದ್ದರು. ಕಾಂಗ್ರೆಸ್ ನಾಯಕರು ನೀತಿಗೆಟ್ಟವರು, ನೀಚರು. ವಕ್ಪ್ ಬೋರ್ಡ್ ಅನ್ನು ಕೆಲ ಮೌಲ್ವಿಗಳು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡುತ್ತಿದ್ದರು ಎಂದು ಆರೋಪಿಸಿದರು.

ಇದನ್ನೂ ಓದಿ: ಏರ್‌ಕ್ರಾಫ್ಟ್‌ ನಿರ್ಮಾಣಕ್ಕಾಗಿ ಕರ್ನಾಟಕದಲ್ಲಿ ಭಾರೀ ಜಾಗ ಖರೀದಿ ಮಾಡಿದ Tata Advanced Systems!

ಮಲ್ಲಿಕಾರ್ಜುನ ಖರ್ಗೆ ವಕ್ಪ್ ಬೋರ್ಡ್ ಹೆಸರಿನಲ್ಲಿ  ನೂರಾರು ಎಕರೆ ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಅನ್ವರ್ ಮಾನ್ಪಡಿ ವರದಿಯಲ್ಲಿ ದಾಖಲೆ ಸಮೇತ ಇದೆ. ಇದಕ್ಕೆಲ್ಲಾ ಕರ್ನಾಟಕ ಬಿಜೆಪಿ ಕಾರಣ. ಕರ್ನಾಟಕ ಬಿಜೆಪಿಯವರು ಅನ್ವರ್ ಮಾನ್ಪಡಿ ವರದಿಯನ್ನು ತಮ್ಮ ಕುರ್ಚಿ ಬುಡದಲ್ಲಿ ಇಟ್ಟುಕೊಂಡಿದ್ದರು ಈಗ ವಕ್ಪ್ ಬೋರ್ಡ್ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕ ಬಿಜೆಪಿಗೆ ನಾಚಿಕೆ ಆಗಬೇಕು. ಎಷ್ಟು ರೀತಿಯ ಡೀಲಿಂಗ್, ವ್ಯವಹಾರ ಆಗಿದೆ. ಕರ್ನಾಟಕ ಬಿಜೆಪಿಗೆ ವಕ್ಪ್ ಬೋರ್ಡ್ ಬಿಲ್ ಬಗ್ಗೆ ಮಾತನಾಡಬೇಡಿ, ಓವೈಸಿ ಮತ್ತು ಮುಸ್ಲಿಂ ಸಂಸದರಿಗಿಂತ ಹಿಂದೂ ಸಂಸದರು ವಿರೋಧ ಮಾಡಿದ್ದಾರೆ. ಇವರಿಗೆ ಮಾನ, ಮರ್ಯಾದೆ ಇದೆಯಾ? ವಕ್ಪ್ ಬೋರ್ಡ್ ಮುಂದೆ ನಿಮ್ಮ ಆಸ್ತಿ ಕಬಳಿಸಿದಾಗ ನೀವು ಸತ್ತೋಗಿರುತ್ತಿರಿ. ಮೋದಿಯವರು ತೆಗೆದುಕೊಂಡ ಕ್ರಮ ಅತ್ಯಂತ ಶ್ರೇಷ್ಠವಾಗಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

ಇದನ್ನೂ ಓದಿ: ಮುಸ್ಲಿಮರ ಹಕ್ಕು ಕಿತ್ತುಕೊಳ್ಳೋ ಕಾನೂನು ಎಂದು ರಾಹುಲ್ ಗಾಂಧಿ ಟ್ವೀಟ್

vuukle one pixel image
click me!