ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಆರಂಭದಲ್ಲೇ ವಿಘ್ನ: ಕೆಲಸಕ್ಕೆ ಬಾರದ ಸಿಬ್ಬಂದಿ, ಕೆಲಸ ಮಾಡದ ಸರ್ವರ್

By Sathish Kumar KHFirst Published Jun 18, 2023, 12:20 PM IST
Highlights

ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಯ ಹಿನ್ನೆಲೆಯಲ್ಲಿ ಭಾನುವಾರ ಕೆಲಸ ಮಾಡುವಂತೆ ಆದೇಶ ಹೊರಡಿಸಿದ್ದರೂ ನಾಡಕಚೇರಿ ಸಿಬ್ಬಂದಿ ಕೆಲಸಕ್ಕೇ ಹಾಜರಾಗಿಲ್ಲ. 

ಬೆಂಗಳೂರು (ಜೂ.18): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಜ್ಯೋತಿ ಯೋಜನೆಗೆ (ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌) ರಾಜ್ಯಾದ್ಯಂತ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆದರೆ, ಕೆಲವೆಡೆ ಅರ್ಜಿ ಸಲ್ಲಿಕೆಗೆ ಸರ್ವರ್‌ ಸಮಸ್ಯೆ ಆಗುತ್ತಿದೆ. ಮತ್ತೊಂದೆಡೆ ಭಾನುವಾರವೂ ಕೂಡ ಕೆಲಸ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿದರೂ ಸಿಬ್ಬಂದಿ ಮಾತ್ರ ಕಚೇರಿಗೆ ಹಾಜರಾಗದೇ ಸಾರ್ವಜನಿಕರು ಬಂದು ವಾಪಸ್‌ ಹೋಗುತ್ತಿದ್ದಾರೆ.

ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರದಿಂದ ಅವಕಾಶ ನೀಡಲಾಗಿದೆ. ಇಂದು ರಾಜ್ಯದ ಎಲ್ಲ ಎಸ್ಕಾಂ, ಬೆಂಗಳೂರು ಓನ್, ನಾಡಕಚೇರಿಗಳಲ್ಲಿ ಅರ್ಜಿ ನಮೂದಿಸುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದಿಂದ ಶನಿವಾರವೇ ಸೂಚನೆಯನ್ನು ನೀಡಿ ಆದೇಶ ಹೊರಡಿಸಿದೆ. ಆದರೆ, ನಾಡಕಚೇರಿ ಸಿಬ್ಬಂದಿ ಸರ್ಕಾರದ ಆದೇಶವನ್ನೇ ಗಾಳಿಗೆ ತೂರಿ ರಜೆಯ ಮೂಡ್‌ನಲ್ಲಿ ಕೆಲಸಕ್ಕೆ ಬಾರದೇ ಮನೆಯಲ್ಲಿದ್ದಾರೆ. ಸರ್ಕಾರ ಆದೇಶಕ್ಕೂ ನೌಕರರ ಕವಡೆ‌ಕಾಸಿನ ಬೆಲೆ ಕೊಡುತ್ತಿಲ್ಲ. ಜಿಲ್ಲಾಧಿಕಾರಿಗಳ ಆದೇಶವಿದ್ದರೂ ನಾಡಕಚೇರಿ ನೌಕರರು ಕೆಲಸಕ್ಕೆ ಹಾಜರಾಗಿಲ್ಲ. 

ಮಹಿಳೆಯರ 'ಶಕ್ತಿ'ಗೆ ಮುರಿದುಬಿದ್ದ ಬಸ್‌ ಡೋರ್‌: ಕಂಡಕ್ಟರ್‌ ಪರದಾಟ

ರಾಜ್ಯಾದ್ಯಂತ ಎಲ್ಲ ನಾಡ ಕಚೇರಿಗಳಲ್ಲಿಯೂ ಜೂನ್ 18ರ ಭಾನುವಾರವನ್ನು ಕರ್ತವ್ಯ ದಿನವೆಂದು ಪರಿಗಣಿಸಿ ಕಾರ್ಯನಿರ್ವಹಿಸಲು ಸರ್ಕಾರದಿಂದ ಸೂಚಿಸಲಾಗಿತ್ತು. ಈ ಸಂಬಂದ ಶನಿವಾರವೇ ನಾಡಕಚೇರಿಗಳಿಗೆ ಸಿಬ್ಬಂದಿಗೆ ಆಯಾ ಜಿಲ್ಲಾಡಳಿತ ಅಧಿಕಾರಿಗಳು ಸುತ್ತೋಲೆಯನ್ನು ಹೊರಡಿಸಿದ್ದರು. ಆದರೆ, ಜಿಲ್ಲಾಧಿಕಾರಿಗಳ ಸೂಚನೆ ಇದ್ದರೂ ನಾಡಕಚೇರಿಗೆ ಸಿಬ್ಬಂದಿ ಮಾತ್ರ ಆಗಮಿಸಿಲ್ಲ. ಬೆಂಗಳೂರಿನ ಮಲ್ಲೇಶ್ವರಂ ನಾಡಕಚೇರಿಗೆ ಸಿಬ್ಬಂದಿಯೇ ಆಗಮಿಸಿರಲಿಲ್ಲ.  ಆದ್ದರಿಂದ ಸಾರ್ವಜನಿಕರು ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗಾಗಿ ದಾಖಲೆಗಳನ್ನು ಹಿಡಿದುಕೊಂಡು ನಾಡಕಚೇರಿಗೆ ಬಂದು ವಾಪಸ್‌ ಹೋಗುತ್ತಿದ್ದಾರೆ. ಮತ್ತೆ ಕೆಲವರು ನಾಡ ಕಚೇರಿ ಬಳಿಯೇ ಕಾಯುತ್ತಾ ಕುಳಿತಿದ್ದಾರೆ.

ಕೆಲವೇ ಗಂಟೆಗಳಲ್ಲಿ ಕೈಕೊಟ್ಟ ಸರ್ವರ್‌:  ಗೃಹಜ್ಯೋತಿ ಗೆ ಅರ್ಜಿ ಸಲ್ಲಿಸಲು ಜನರ ಪರದಾಟ ಮಾಡುತ್ತಿದ್ದಾರೆ. ಪೋರ್ಟಲ್ ಓಪನ್ ಆದಾ ಕೆಲವೇ ಗಂಟೆಗಳಲ್ಲಿ ವೆಬ್ ಸೈಟ್ ಕ್ಲೋಸ್ ಆಗಿದೆ. ಅರ್ಜಿ ಸಲ್ಲಿಕೆಯ ಆರಂಭದಲ್ಲಿ ಫುಲ್ ಸರ್ವರ್ ಬ್ಯುಸಿ ಆಗಿದೆ. ಎಂ‌ಜಿ ರಸ್ತೆಯ ಬೆಸ್ಕಾಂ ಕಚೇರಿಯಲ್ಲಿ ನಡೆಯುತ್ತಿರುವ ಅರ್ಜಿ ಸಲ್ಲಿಕೆಗೆ ಸೇವಾ ಸಿಂಧು ಆ್ಯಪ್ ನಲ್ಲಿ ಸರ್ವರ್ ಬ್ಯುಸಿ ತೋರಿಸುತ್ತಿದೆ. ಟೆಕ್ನಿಕಲ್ ಟೀಮ್ ಕರೆಸಿ ಸರ್ವರ್‌ ಸರಿ ಮಾಡಿಸುತ್ತಿರುವ ಅಧಿಕಾರಿಗಳು. ಇತ್ತ ಬೆಂಗಳೂರು ಒನ್ ಗಳಲ್ಲೂ ಸಿಬ್ಬಂದಿ ಇನ್ನೂ ರಿಜಿಸ್ಟ್ರೇಷನ್‌ ಶುರುಮಾಡಿಲ್ಲ. 

ಯಾದಗಿರಿಯಲ್ಲಿ ಆರಂಭವಾಗದ ಗೃಹಜ್ಯೋತಿ ಅರ್ಜಿ ಸಲ್ಲಿಕೆ: ಯಾದಗಿರಿಯಲ್ಲಿ ಆರಂಭವಾಗದ ಗೃಹ ಜ್ಯೋತಿ ಯೋಜನೆ. ಗೃಹಜ್ಯೋತಿ ಅರ್ಜಿ ಸಲ್ಲಿಕೆ ನೋಂದಣಿ ಮಾಡಲಾಗುತ್ತಿಲ್ಲ. 200 ಯುನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಗೆ ಇಂದಿನಿಂದ ಅರ್ಜಿ ಸ್ವೀಕಾರದ ನೊಂದಣಿ ಕಾರ್ಯ ಆರಂಭವಾಗಬೇಕಿತ್ತು. ಆದರೆ, ಸೇವಾಸಿಂಧು ಮೂಲಕ ಇನ್ನೂ ಯಾವುದೇ ನೊಂದಣಿಯೇ ಆಗುತ್ತಿಲ್ಲ. ಯಾದಗಿರಿ ತಹಶಿಲ್ದಾರ ಕಚೇರಿಯಲ್ಲಿರುವ ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರ ಖಾಲಿ ಖಾಲಿಯಾಗಿದೆ. ಇನ್ನೂ ಯಾವುದೇ ಸೂಚನೆ ನೀಡದ ಹಿನ್ನೆಲೆಯಲ್ಲಿ ನೊಂದಣಿ ಮಾಡಿಕೊಳ್ಳದ ಸಿಬ್ಬಂದಿ. ಈಗಾಗಲೇ ನೊಂದಣಿ ಮಾಡಿಸಲು ಬಂದ ಕೆಲ ಬೆರಳೆಣಿಕೆಯಷ್ಟು ಜನರೂ ಸಿಬ್ಬಂದಿಗಾಗಿ ಕಾಯುತ್ತಿದ್ದಾರೆ. 

ಇಂದಿನಿಂದ ಉಚಿತ ವಿದ್ಯುತ್‌ಗೆ ಅರ್ಜಿ ಹಾಕಿ: ‘ಗೃಹಜ್ಯೋತಿ’ ಯೋಜನೆ ಅರ್ಜಿ ಸ್ವೀಕಾರ ಆರಂಭ

ಮಧ್ಯಾಹ್ನ 3 ಗಂಟೆಯಿಂದ ಸುಲಲಿತ ಅರ್ಜಿ ಸಲ್ಲಿಕೆಗೆ ಅವಕಾಶ: ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಕೆಗೆ ಇಂದಿನಿಂದ ಅವಕಾಶ ಕೊಡಲಾಗಿದೆ. ಬೆಳಗ್ಗೆ 11 ಗಂಟೆಯಿಂದ್ಲೇ ನೋಂದಾಣಿಗೆ ಅವಕಾಶ ನೀಡಲಾಗಿದೆ. ಬೆಂಗಳೂರು ಓನ್, ಗ್ರಾಮ ಓನ್, ಕರ್ನಾಟಕ ಓನ್ ಕೇಂದ್ರ ಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ ಎಲ್ಲಾ ಎಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ದಿನಕ್ಕೆ ಎಷ್ಟು ಫಲಾನುಭವಿಗಳು ಬಂದರೂ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು. ಸರ್ವರ್ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಇಂದಿನಿಂದ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಗ್ರಾಹಕರು ಈ ಯೋಜನೆ ಸದುಪಯೋಗ ಮಾಡಿಕೊಳ್ಳಬಹುದು ಎಂದು ಏಷ್ಯಾನೆಟ್ ಸುವರ್ಣನ್ಯೂಸ್ ಗೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ‌ ಮಾಹಿತಿ ನೀಡಿದ್ದಾರೆ. 

click me!