ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಬಲವರ್ದನೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮಪಂಚಾಯ್ತಿ ಅಧಿಕಾರಿಗಳು, ನೌಕರರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಒಂದು ಸಹ ಮಳೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.
ಬೆಂಗಳೂರು (ಅ.5): ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳ ಬಲವರ್ದನೆ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮಪಂಚಾಯ್ತಿ ಅಧಿಕಾರಿಗಳು, ನೌಕರರು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದಿರುವ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದ್ದು, ಒಂದು ಸಹ ಮಳೆ ಲೆಕ್ಕಿಸದೆ ಪ್ರತಿಭಟನೆ ನಡೆಸಿದರು.
ರಾಜ್ಯದ ಮೂಲೆ ಮೂಲೆಗಳಿಂದ ಬಂದ ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾದರು.RDPR ಇಲಾಖೆಯ 11 ವೃಂದಗಳ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾದರು. ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಿರುವ ಪ್ರತಿಭಟನೆ. ಎಲ್ಲ ಬೇಡಿಕೆಗಳು ಈಡೇರುವವರಿಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿರುವ ನೌಕರರು. ಸಾವಿರಾರು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ರಾಜ್ಯದ್ಯಾಂತ ಗ್ರಾಪಂಗಳು ಸ್ತಬ್ದವಾಗಿವೆ.
ಭ್ರಷ್ಟಾಚಾರಕ್ಕೆ ಇನ್ಮುಂದೆ ಗ್ರಾಪಂ ಅಧ್ಯಕ್ಷರೂ ಹೊಣೆ?
ತಲೆಕೆಡಿಸಿಕೊಳ್ಳದ ಸರ್ಕಾರ:
ರಾಜ್ಯಾದ್ಯಂತ ಪಂಚಾಯತ್ ರಾಜ್ ಸೇವೆ ಬಂದ್ ಮಾಡಿ ನೌಕರರು, ಸಿಬ್ಬಂದಿ ನಗರದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಡೋಂಟ್ ಕೇರ್ ಎಂದ ಸರ್ಕಾರ. ಇದುವರೆಗೆ ಸ್ಥಳಕ್ಕೆ ಬಾರದ ಅಧಿಕಾರಿಗಳು ಸಚಿವರು. ಹೀಗಾಗಿ ಹೋರಾಟ ಇನ್ನಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿರುವ ನೌಕರರು.
ಒಂದೆಡೆ ಬೇರೂರಿರುವ ಸಬ್ ರಿಜಿಸ್ಟ್ರಾರ್‌ಗಳ ಟ್ರಾನ್ಸಫರ್: ಸಚಿವ ಎಚ್.ಕೆ. ಪಾಟೀಲ್
ಎಲ್ಲ ಗ್ರಾಪಂಚಾಯ್ತಿ ಪಿಡಿಒ ಹುದ್ದೆಗಳನ್ನು ಗೆಜೆಟೆಡ್ ಗ್ರುಪ್ ಬಿ ದರ್ಜೆಗೆ ಒತ್ತಾಯಿಸಿರುವ ನೌಕರರು. ಜೇಷ್ಟತಾ ಪಟ್ಟಿ ಅಂತಿಮಗೊಳಿಸಿ, ಬಡ್ತಿ ನೀಡಬೇಕು, ಕುಂದು ಕೊರತೆ ನಿವಾರಣೆಗೆ ತಜ್ಞರ ಸಮಿತಿ ರಚಿಸಬೇಕು, ಪಂಚಾಯ್ತಿ ನೌಕರರಿಗೆ ಇಲಾಖೆಯೇ ವೇತನ ನಿಗದಿ ಮಾಡಬೇಕು ಇನ್ನೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಮುಂದಾಗಿರುವ ಗ್ರಾಮೀಣಾಭಿವೃದ್ಧಿ ನೌಕರರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಕೂಡ ಮುಂದುವರೆದ ಹೋರಾಟ, ನಗರದಲ್ಲಿ ಮಳೆಯಾಗುತ್ತಿದ್ದರೂ ಮಳೆ ಲೆಕ್ಕಿಸದೇ ಪ್ರತಿಭಟನೆಯಲ್ಲಿ ಭಾಗಿಯಾಗಿ ಬೇಡಿಕೆ ಈಡೇರಿಸದ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.