Breaking: ವಾಲ್ಮೀಕಿ ನಿಗಮ ಅಕ್ರಮ ಹಣ ವರ್ಗಾವಣೆ, ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

By Santosh NaikFirst Published May 31, 2024, 6:12 PM IST
Highlights

ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ರಾಜ್ಯ ಸರ್ಕಾರಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಲು ತೀರ್ಮಾನ ಮಾಡಿದೆ.
 

ಬೆಂಗಳೂರು (ಮೇ.31): ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈ ಕೇಸ್‌ನಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿರುವ ನಡುವೆಯೇ, ರಾಜ್ಯ ಸರ್ಕಾರ ದೊಡ್ಡ ನಿರ್ಧಾರ ಮಾಡಿದೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿಯನ್ನು ನೇಮಕ ಮಾಡಿದೆ.ಸಿಐಡಿ ಅಪರ ಪೊಲೀಸ್ ಮಹಾನಿರ್ದೇಶಕ ಮನೀಶ್‌ ಖರ್ಬೀಕರ್ ನೇತೃತ್ವದಲ್ಲಿ ಎಸ್ ಐಟಿ ರಚನೆಯಾಗಿದೆ. ಮನೀಶ್‌ ಖರ್ಬೀಕರ್  ಸಿಐಡಿಯ, ಆರ್ಥಿಕ ಅಪರಾಧಗಳ ಅಪರ ಪೊಲೀಸ್ ಮಹಾ ನಿರ್ದೇಶಕರಾಗಿದ್ದಾರೆ. ಎಸ್‌ಐಟಿಯಲ್ಲಿ ಇವರಲ್ಲದೆ, ನಾಲ್ವರು ಹಿರಿಯ ಅಧಿಕಾರಿಗಳು ಇರಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಪ್ರಕರಣ ಬಹಳ  ಗಂಭೀರವಾಗಿರುವ ಹಿನ್ನಲೆಯಲ್ಲಿ ಎಸ್‌ಐಟಿಯನ್ನು ರಚನೆ ಮಾಡಲಾಗಿದ್ದು, ಆದಷ್ಟು ಶೀಗ್ರವಾಗಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

ಅಧಿಕಾರಿ ಚಂದ್ರಶೇಖರನ್‌ಗೆ 50 ಕೋಟಿ ಮೊತ್ತದ ಚೆಕ್‌ಗೆ ಸಹಿ ಮಾಡಿದ್ದೆ ಮುಳುವಾಯ್ತಾ..?

Latest Videos

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಅಧೀಕ್ಷಕರಾಗಿದ್ದ ಚಂದ್ರಶೇಖರ್‌ ಅವರು ತಮ್ಮ ಡೆತ್‌ ನೋಟ್‌ನಲ್ಲಿ ನಿಗಮದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮೃತರ ಪತ್ನಿಯ ದೂರಿನ ಅನ್ವಯ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ಈ ಕುರಿತಾಗಿ ಕ್ರಿಮಿನಲ್‌ ಪ್ರಕರಣವೂ ದಾಖಲಾಗಿದೆ. ಇನ್ನು ನಿಗಮದ ಮುಖ್ಯ ನಿಬಂಧಕರಾದ ಎ.ರಾಜಶೇಖರ್‌ ಅವರು ನಿಗಮದ ಹಣವು ಬ್ಯಾಂಕ್‌ ಮೂಲಕ ದುರ್ಬಳಕೆ ಆಗಿರುವುದಾಗಿ ಬೆಂಗಳೂರಿನಲ್ಲಿ  ದೂರು ನೀಡಿರುತ್ತಾರೆ.  ಈ ಪ್ರಕರಣಗಳೊಂದಿಗೆ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ನಡೆದಿರುವ ಆರ್ಥಿಕ ಅವ್ಯವಹಾರ ಗಂಭೀರತೆಯನ್ನು ಪರಿಗಣಿಸಿ ಸರ್ಕಾರವು ತಾಂತ್ರಿಕ ಪರಿಣಿತಿ ಇರುವ ರಾಜ್ಯದ ವಿಶೇಷ ತನಿಖಾ ಸಂಸ್ಥೆಯಾದ ಸಿಐಡಿಯ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲು ತೀರ್ಮಾನಿಸಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅವ್ಯವಹಾರದ ಹಣ ಯಾವ ದಿನ ಎಷ್ಟು ವರ್ಗಾವಣೆ ? ಅಷ್ಟು ದುಡ್ಡು ಹೋಗಿದ್ದಾದರೂ ಎಲ್ಲಿಗೆ? ಯಾರ ಅಕೌಂಟಿಗೆ?


 

click me!