* ಕರ್ನಾಟಕದಲ್ಲೂ ಕೊರೋನಾ ಕೇಸ್ ಹೆಚ್ಚಳ
* ಹೊಸ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
* ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ
ಬೆಂಗಳೂರು, (ಜೂನ್.10): ದೇಶದಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಸಹ ಕೊರೋನಾ ಸೊಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ತಿಳಿಸಿದೆ.
undefined
ಹೆಚ್ಚುತ್ತಿರುವ ಕೊರೋನಾ: ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಲಸಿಕೆ ಪತ್ರ ಕಡ್ಡಾಯ..!
ILI & SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ಟ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿದೆ.
ಮಾರ್ಗಸೂಚಿ ಇಂತಿದೆ.
* ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಧರಿಸುವುದನ್ನು ಉಲ್ಲೇಖ(3) ರ ಅನ್ವಯ ಕಡ್ಡಾಯಗೊಳಿಸಿದ್ದು, ಈ ಕ್ರಮಗಳನ್ನು ಜಾರಿಗೊಳಿಸಲು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯುವುದು.
* ಮಚ್ಚಿದ ಸಂರಚನೆಯನ್ನು (Closed Areas) ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‌ಗಳು, ರೆಸ್ಟೊರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಚೇರಿಗಳು, ಕಾರ್ಖಾನೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಹಾಗೂ ಮಾಸ್ಕ್ ಧರಿಸಿ ಬರುವವರಿಗೆ ಮಾತ್ರವೇ ಪ್ರವೇಶ ನೀಡುವುದನ್ನು ಖಚಿತಪಡಿಸಿಕೊಳ್ಳಲು ಆಯಾ ಸಂಸ್ಥೆಯ ಮಾಲೀಕರ/ ಆಡಳಿತಗಳ ಜವಾಬ್ದಾರಿಯಾಗಿರುತ್ತದೆ.
* ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ (ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.
* ILI & SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ಟ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.
* ಅರ್ಜಿ ಜನರೆಲ್ಲರೂ Precautionary Dose ಸೇರಿದಂತೆ ಕೋವಿಡ್ 19 ಲಸಿಕೆನ್ನು ಪಡೆಯುವುದು ಕೋವಿಡ್19 ಮುಂಜಾಗ್ರತಾ ಕ್ರಮವಾಗಿ ಮೇಲೆ ತಿಳಿಸಿದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಲಸಿಕೆ ಪತ್ರ ಕಡ್ಡಾಯ..!
ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕು ಪ್ರಕರಣ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿಯು ಮಾಲ್, ಸಿನಿಮಾ ಮಂದಿರದಲ್ಲಿ ಮಾಸ್ಕ್ ಧರಿಸುವುದು ಮತ್ತು ಲಸಿಕೆ ಪ್ರಮಾಣ ಪತ್ರ ಪರಿಶೀಲಿಸುವುದನ್ನು ಕಡ್ಡಾಯ ಮಾಡಿದೆ. ಆದರೆ ಸದ್ಯ ದಂಡ ವಿಧಿಸುತ್ತಿಲ್ಲ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶೇಷ ಆಯುಕ್ತ(ಆಡಳಿತ) ರಂಗಪ್ಪ ಅವರು, ಮಾಲ್, ಸಿನಿಮಾ ಮಂದಿರ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್‌್ಕ ಧರಿಸುವುದು ಕಡ್ಡಾಯ ಮಾಡಲಾಗಿದೆ. ಅದರೊಂದಿಗೆ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ಪರಿಶೀಲಿಸಲು ಮಾರ್ಷಲ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.