ದೀಪಾವಳಿ ಹಬ್ಬ ಹೇಗೆ ಆಚರಣೆ ಮಾಡ್ಬೇಕು? ಸರ್ಕಾರದಿಂದ ಗೈಡ್ ಲೈನ್ಸ್

By Suvarna News  |  First Published Nov 7, 2020, 6:02 PM IST

ಕೊರೋನಾ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಆಚರಣೆ ಸಂಬಂಧ ಸರ್ಕಾರದಿಂದ ಗೈಡ್ ಲೈನ್ಸ್ ಪ್ರಕಟಿಸಲಾಗಿದೆ. ಹಾಗಾದ್ರೆ ಈ ಬಾರಿ ದೀಪಾವಳಿ ಹೇಗೆ ಆಚರಿಸಬೇಕೆಂಬ ಮಾರ್ಗಸೂಚಿಗಳು ಈ ಕೆಳಗಿನಂತಿವೆ.


ಬೆಂಗಳೂರು, (ನ.07): ದೀಪಗಳ ಹಬ್ಬ, ದೀಪಾವಳಿ ಎಲ್ಲರ ಜೀವನವನ್ನು ಸಂತೋಷದಿಂದ ತುಂಬುತ್ತದೆ. ನಮ್ಮ ಜೀವನದ ಕತ್ತಲೆಯು ದೂರಾಗಿ, ಬೆಳಕು ಹರಡಲಿ ಎನ್ನುವ ಉದ್ದೇಶದಿಂದ ದೀಪಾವಳಿಯನ್ನು ಅಚರಿಸಲಾಗುತ್ತದೆ. ಆದ್ರೆ, ಈ ಬಾರಿಯ ದೀಪಾವಳಿಗೆ ಕೊರೋನಾ ಕಾಟ ಎದುರಾಗಿದೆ.

ಹೌದು...ಕೊರೋನಾ ಭೀತಿ ಹಿನ್ನೆಲೆಯಲ್ಲಿ ಹಬ್ಬ-ಹರಿ ದಿನಗಳನ್ನ ಸರಳವಾಗಿ ಮನೆಯಲ್ಲಿಯೇ ಆಚರಿಸುವಂತಾಗಿದೆ. ಇದೀಗ ದೀಪಾವಳಿಗೂ ಸಹ ರಾಜಯ ಸರ್ಕಾರ  ಗೈಡ್ ಲೈನ್ಸ್  ಬಿಡುಗಡೆ ಮಾಡಿದೆ. 

Tap to resize

Latest Videos

ಪಟಾಕಿ ನಿಷೇಧ: ವ್ಯಾಪಾರಿಗಳಿಂದ ಆಕ್ಷೇಪ, ತಜ್ಞರಿಂದ ಸ್ವಾಗತ, ಅಂಗಡಿಗಳಿಗೆ ಲಗ್ಗೆಯಿಟ್ಟ ಜನ

* 2018ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಹಸಿರು ಪಟಾಕಿಗಳನ್ನ ಬಿಟ್ಟು ಉಳಿದ ಯಾವುದೇ ಇತರೆ ಪಟಾಕಿಗಳನ್ನ  ಮಾರಾಟ ಮಾಡುವ ಹಾಗಿಲ್ಲ ಅಲ್ದೇ ಹಚ್ಚತಕ್ಕದಲ್ಲ

* ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರವಾನಗಿಯನ್ನು ಪಡೆದ ಮಾರಾಟಗಾರರು 'ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡತಕ್ಕದ್ದು..

* ಹಸಿರು ಪಟಾಕಿ ಮಾರಾಟದ ಮಳಿಗೆಗಳನ್ನು ದಿನಾಂಕ 07.11.2020ರಿಂದ 16.11.2020 ರವರಗೆ ಮಾತ್ರ ತೆರೆದಿರತಕ್ಕದ್ದು ( 9 ದಿವಸ ತೆರೆಯಲು ಮಾತ್ರ ಅವಕಾಶ)

* ಪರವಾನಗಿದಾರರು ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರದಿಂದ ನೀಡಿರುವ ಪರವಾನಗಿಯಲ್ಲಿ ನಿಗಧಿಪಡಿಸಿರುವ ದಿನಾಂಕ ಮತ್ತು ಸ್ಮಳದಲ್ಲಿ ಮಾತ್ರ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನ ತೆರಯಬೇಕು..

* ಬೇರೆ ಸ್ಥಳಗಳಲ್ಲಿ ಮತ್ತು ಇನ್ನಿತರೆ ದಿನಾಂಕಗಳಲ್ಲಿ ಪಾಟಕಿ ಅಂಗಡಿಗಳನ್ನ ತೆರಯಬಾರದು...

* ಸಾರ್ವಜನಿಕ ವಸತಿ ಸ್ಮಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ ಹಸಿರು ಪಟಾಕಿ ಮಾರಾಟ ಸ್ಥಾಪಿಸಲು ಇಲಾಖೆ ಅನುಮತಿಸತಕ್ಕದ್ದು...

* ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ 6 ಮೀಟರ್ ಅಂತರವಿರಬೇಕು

* ಪ್ರತಿಯೊಂದು ಮಳಿಗೆಗಳಲ್ಲಿ ಸಂಬಂಧಪಟ್ಟ ಇಲಾಖೆ ನೀಡಿದ  ಪರವಾನಗಿ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದು, ಪರವಾನಗಿ ಪತ್ರವನ್ನು ಪಡೆದಂತವರು ಕಡಿಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು....

* ಹಸಿರು ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸೇಷನ್ ಮಾಡುವುದು ಹಾಗೂ ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸರ್‌ ಹಾಗೂ ಥರ್ಮಲ್ ಸ್ಕ್ರಿ ನಿಂಗ್ ವ್ಯವಸ್ಥೆಯನ್ನು ಕಲ್ಪಿಸುವುದರ ಜೊತೆಗೆ ని 06 ಅಡಿ ಸಾಮಾಜಿಕ ಅಂತರವನ್ನು ಗುರುತಿಸುವುದು ಕಡ್ಡಾಯ

* ಪಟಾಕಿ ಮಾರುವ ವ್ಯಾಪಾರಸ್ಯರು ಮತ್ತು ಖರೀದಿಗೆ ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

* ಹಸಿರು ಪಟಾಕಿಗಳ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವುದು
 

click me!