ಕೊಂಚ ಲಾಕ್‌ಡೌನ್‌ ಸಡಿಲಿಸಿದ ಸರ್ಕಾರ

By Suvarna News  |  First Published Jun 6, 2021, 10:19 PM IST

* ರಾಜ್ಯದಲ್ಲಿ ಕಡಿಮೆಯಾದ ಕೊರೋನಾ ಪಾಸಿಟಿವಿಟಿ ಪ್ರಮಾಣ
* ಹಂತ-ಹಂತವಾಗಿ ಲಾಕ್‌ಡೌನ್‌ ತೆರವು ಮಾಡಲು ಸರ್ಕಾರ ಪ್ಲಾನ್
* ಈ​ ಕಚೇರಿಗಳ ಓಪನ್​ಗೆ ಅನುಮತಿ ಕೊಟ್ಟ ಸರ್ಕಾರ


ಬೆಂಗಳೂರು, (ಜೂನ್.06): ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ​ ಇಳಿಮುಖವಾಗುತ್ತಿದ್ದಂತೆಯೇ ಸರ್ಕಾರ, ಕೆಲ ಕಚೇರಿಗಳ ಓಪನ್‌ಗೆ ಅನುಮತಿ ಕೊಟ್ಟಿದೆ.

ಹೌದು...ರಾಜ್ಯದ ಎಲ್ಲಾ ರಿಜಿಸ್ಟರ್ ಕಚೇರಿಗಳನ್ನ ತೆರೆಯುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಇಂದು (ಭಾನುವಾರ) ಆದೇಶ ಹೊರಡಿಸಿದ್ದಾರೆ.

Tap to resize

Latest Videos

undefined

ರಾಜ್ಯದಲ್ಲಿ ಪಾಸಿಟಿವಿಟಿ ದರ ಇಳಿಕೆ: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಡಬಲ್

 ಕೊರೋನಾ ಮಾರ್ಗಸೂಚಿಗಳನ್ನ ಅನುಸರಿಸಿ ರಿಜಿಸ್ಟ್ರಾರ್ ಕಚೇರಿಗಳನ್ನ ಓಪನ್ ಮಾಡುವಂತೆ ಅನುಮತಿ ನೀಡಲಾಗಿದೆ. ಇದರ ಅನ್ವಯ ರಾಜ್ಯದ ಎಲ್ಲಾ ಜಿಲ್ಲಾ ರಿಜಿಸ್ಟ್ರರ್ ಹಾಗೂ ಉಪ ನೋಂದಣಿ ಕಚೇರಿಗಳ ಬಾಗಿಲು ತೆರೆಯಲಿವೆ.

ಶುಕ್ರವಾರ ಶೇಕಡ 10.66 ರಷ್ಟು ಪಾಸಿಟಿವಿಟಿ ದರ ಇತ್ತು. ಕಳೆದ ಏಪ್ರಿಲ್ 15 ರ ನಂತರ ನಿನ್ನೆ (ಶನಿವಾರ) ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ ಶೇಕಡ 10 ಕ್ಕಿಂತ ಕಡಿಮೆಯಾಗಿ, ಭಾನುವಾರ ಶೇ.7.71 ರಷ್ಟು ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಾಸಿಟಿವಿಟಿ ದರ ಕಡಿಮೆಯಾದ್ರೆ ಅನ್‌ಲಾಕ್  ಮಾಡುವುದಾಗಿ ಸಿಎಂ ಹೇಳಿದ್ದರು. ಇದೀಗ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವುದರಿಂದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳ್ಳುವ ಸಾಧ್ಯತೆ ಇದೆ.

click me!