ರಾಜ್ಯದಲ್ಲಿ ಪಾಸಿಟಿವಿಟಿ ದರ ಇಳಿಕೆ: ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಡಬಲ್

By Suvarna News  |  First Published Jun 6, 2021, 6:54 PM IST

* ರಾಜ್ಯದಲ್ಲಿ ತಗ್ಗಿದ ಕೊರೋನಾ ಪಾಸಿಟಿವಿಟಿ ಪ್ರಮಾಣ
* ಕೊರೋನಾ ಸೋಂಕಿತರಿಗಿಂತ ಗುಣಮುಖರಾದವರು ಡಬಲ್
* ಆರೋಗ್ಯ ಸಚಿವ ಸುಧಾಕರ್ ಮಾಹಿತಿ


ಬೆಂಗಳೂರು, (ಜೂನ್.06): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಇದರ ಜೊತಗೆ ಗುಣಮುಖರಾಗುವವರ ಸಂಖ್ಯೆಯಲ್ಲೂ ಕೂಡ ಹೆಚ್ಚಳವಾಗುತ್ತಿರುವುದು ಸಮಾಧಾನ ತಂದಿದೆ.

ಹೌದು...ಇಂದು (ಭಾನುವಾರ) ರಾಜ್ಯಾಧ್ಯಂತ 1,58,274 ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ12,209 ಮಂದಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ.

Tap to resize

Latest Videos

undefined

ರಾಜ್ಯದಲ್ಲಿ 4 ದಿನಗಳ ಬಳಿಕ 400ಕ್ಕಿಂತ ಕಡಿಮೆ ಸಾವು

ಇನ್ನು ಕಳೆದ 24 ಗಂಟೆಗಳಲ್ಲಿ 25,659 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 24,09,417 ಜನ ಗುಣಮುಖರಾದಂತಾಗಿದೆ.

ಶುಕ್ರವಾರ ಶೇಕಡ 10.66 ರಷ್ಟು ಪಾಸಿಟಿವಿಟಿ ದರ ಇತ್ತು. ಕಳೆದ ಏಪ್ರಿಲ್ 15 ರ ನಂತರ ನಿನ್ನೆ (ಶನಿವಾರ) ಮೊದಲ ಬಾರಿಗೆ ಪಾಸಿಟಿವಿಟಿ ದರ ಶೇಕಡ ಶೇಕಡ 10 ಕ್ಕಿಂತ ಕಡಿಮೆಯಾಗಿ, ಭಾನುವಾರ ಶೇ.7.71 ರಷ್ಟು ಇದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಾಸಿಟಿವಿಟಿ ದರ ಕಡಿಮೆಯಾದ್ರೆ ಅನ್‌ಲಾಕ್  ಮಾಡುವುದಾಗಿ ಸಿಎಂ ಹೇಳಿದ್ದರು. ಇದೀಗ ಪಾಸಿಟಿವಿಟಿ ದರ ಕಡಿಮೆಯಾಗುತ್ತಿರುವುದರಿಂದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳ್ಳುವ ಸಾಧ್ಯತೆ ಇದೆ.

🔹With 1,58,274 tests and 12,209 new cases in last 24 hours Karnataka's positivity rate falls to 7.71%.

🔹25,659 recoveries were reported in the state today including 10,224 in Bengaluru taking the total recoveries to
24,09,417.

— Dr Sudhakar K (@mla_sudhakar)
click me!