ರಾಜ್ಯದ 4 ರಂಗಾಯಣಗಳಿಗೆ ನಿರ್ದೇಶಕರ ನೇಮಕ, ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೂ ಅಧಕ್ಷರ ಆಯ್ಕೆ

Published : Dec 27, 2019, 07:46 PM IST
ರಾಜ್ಯದ 4 ರಂಗಾಯಣಗಳಿಗೆ ನಿರ್ದೇಶಕರ ನೇಮಕ, ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೂ ಅಧಕ್ಷರ ಆಯ್ಕೆ

ಸಾರಾಂಶ

ರಾಜ್ಯದಲ್ಲಿ ಖಾಲಿ ಉಳಿದಿದ್ದ ನಾಲ್ಕು ರಂಗಾಯಣ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಮತ್ತು  ರಾಜ್ಯ ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೆ ಅಧಕ್ಷರ ನೇಮಕವಾಗಿದೆ. 

ಬೆಂಗಳೂರು, [ಡಿ.27]: ರಾಜ್ಯದ ನಾಲ್ಕು ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಲಾಗಿದೆ.  ಇಂದು [ಶುಕ್ರವಾರ] ರಾಜ್ಯ ಸರ್ಕಾರ 4 ನಿರ್ದೇಶಕರುಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರ ಬಂದ ನಂತರ ರಂಗಾಯಣ ನಿರ್ದೇಶಕರನ್ನು ವಜಾ ಮಾಡಲಾಗಿತ್ತು. ಇದೀಗ ನಾಲ್ಕೂ ಮೈಸೂರು, ಶಿವಮೊಗ್ಗ, ಧಾರವಾಡ ಮತ್ತು ಕಲಬುರಗಿ ರಂಗಾಯಣಗಳಿಗೆ ನಿರ್ದೇಶಕರ ನೇಮಕ ಮಾಡಲಾಗಿದೆ.

ರಂಗಾಯಣ ನಿರ್ದೇಶಕರ ಹುದ್ದೆಗೆ 60ಕ್ಕೂ ಹೆಚ್ಚು ಅರ್ಜಿ!

ಮೈಸೂರು ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಶಿವಮೊಗ್ಗ ರಂಗಾಯಣ ನಿರ್ದೇಶಕ ಡಾ. ಗಣೇಶ್‌ ನೀನಾಸಂ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು. ನಂತರ ರಂಗಸಮಾಜ ಸದಸ್ಯರನ್ನು ತೆಗೆದು ಹಾಕಿ ಹೊಸದಾಗಿ 7 ಮಂದಿಯನ್ನು ನೇಮಿಸಿ ಸರ್ಕಾರ ಆದೇಶಿಸಿತ್ತು.

ಹೊಸ ನಿರ್ಧೇಶಕರು
1. ಮೈಸೂರು ರಂಗಾಯಣ- ಅಡ್ಡಂಡ ಕಾರ್ಯಪ್ಪ
2. ಶಿವಮೊಗ್ಗ ರಂಗಾಯಣ- ಸಂದೇಶ್ ಜವಳಿ
3. ಧಾರವಾಡ ರಂಗಾಯಣ- ರಮೇಶ್‌ ಪರವಿನಾಯಕರ್ 
4. ಕಲಬುರಗಿ ರಂಗಾಯಣ- ಪ್ರಭಾಕರ ಜೋಶಿ

ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೆ ಅಧಕ್ಷರ ನೇಮಕ
ರಾಜ್ಯ ಬ್ರಾಹ್ಮಣ ಅಭಿವೃದ್ದಿ ನಿಗಮಕ್ಕೆ ಸಚ್ಚಿದಾನಂದಮೂರ್ತಿ ಎನ್ನುವರನ್ನು ನೇಮಕ ಮಾಡಲಾಗಿದೆ. ಇಂದು [ಶುಕ್ರವಾರ] ಸಚ್ಚಿದಾನಂದಮೂರ್ತಿ ಅವರನ್ನು ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಿಎಂ ಬಿಎಸ್ ವೈ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನಂತನಾರಾಯಣ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಳಿಕ ಬದಲಾದ ರಾಜಕೀಯ ವಿದ್ಯಾಮಾನಗಳಿಂದ ಅನಂತನಾರಾಯಣ ಅವರು ಅಧಿಕಾರವಹಿಸಿಕೊಳ್ಳುವ ಮೊದಲೇ ಬಿಎಸ್ ವೈ ಸರ್ಕಾರ  ಅಧ್ಯಕ್ಷರ ನೇಮಕ ರದ್ದುಗೊಳಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

‘ನೆಕ್ಸ್ಟ್‌ ಸಿಎಂ’ ಬೆಟ್ಟಿಂಗ್‌ ನಿಯಂತ್ರಿಸಿ: ವಿ.ಸುನೀಲ್‌ ಕುಮಾರ್‌ ಆಗ್ರಹ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ಅಗತ್ಯ: ಛಲವಾದಿ ನಾರಾಯಣಸ್ವಾಮಿ