ಪೌರತ್ವ ಕಾಯ್ದೆ ವಿರೋಧ: ರಾಜ್ಯದಲ್ಲೂ ಗಲಭೆ ಮಾಡಿದವರ ಆಸ್ತಿ ಜಪ್ತಿ?

By Suvarna News  |  First Published Dec 27, 2019, 8:04 AM IST

ಗಲಭೆ ಮಾಡಿದ್ರೆ ಆಸ್ತಿ ಜಪ್ತಿ ಹುಷಾರ್‌: ಅಶೋಕ್‌| ಉತ್ತರಪ್ರದೇಶ ಮಾದರಿ ಅನುಸರಿಸಬೇಕಾಗುತ್ತೆ| ಎಲ್ಲರಿಗೂ ಪೌರತ್ವ ಕೊಡಲು ಭಾರತ ಧರ್ಮಛತ್ರ ಅಲ್ಲ, ಸಚಿವ ಎಚ್ಚರಿಕೆ


ಬೆಂಗಳೂರು[ಡಿ.27]: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ನಡೆಸುವ ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಉತ್ತರ ಪ್ರದೇಶ ಮಾದರಿಯಲ್ಲಿ ಆಸ್ತಿ ಜಪ್ತಿ ಮಾಡಲಾಗುವುದು. ಇದಕ್ಕಾಗಿ ಕಾನೂನು ಜಾರಿ ಮಾಡಬೇಕಾಗುತ್ತದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನೆಲದ ಕಾನೂನು ಗೌರವಿಸುವುದು ಎಲ್ಲರ ಕರ್ತವ್ಯ. ಪಾಕಿಸ್ತಾನದವರು, ಬಾಂಗ್ಲಾದವರಿಗೂ ಇರಲು ಅವಕಾಶ ನೀಡುವುದಕ್ಕೆ ಭಾರತ ಧರ್ಮಛತ್ರ ಅಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ಎಲ್ಲರೂ ಸಹಕಾರ ನೀಡಬೇಕು. ಕಾಂಗ್ರೆಸ್‌ ಪಕ್ಷ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳೂ ಆಡಳಿತ ಪಕ್ಷಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

Latest Videos

ಕಾಯಿದೆ ಜಾರಿಗೆ ಸಹಕರಿಸದೆ ವಿರೋಧಿಸುವುದು ಸರಿಯಲ್ಲ. ಒಂದು ವೇಳೆ ಕಾಯಿದೆ ವಿರುದ್ಧ ಹೋರಾಟದ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದರೆ ಪ್ರತಿಭಟನಾಕಾರರೇ ಜವಾಬ್ದಾರಿ ಆಗುತ್ತಾರೆ. ಪ್ರತಿಭಟನಾಕಾರರ ಆಸ್ತಿಯನ್ನು ಜಪ್ತಿ ಮಾಡಿ ಸಾರ್ವಜನಿಕ ಆಸ್ತಿಗೆ ಉಂಟಾದ ಹಾನಿಯನ್ನು ಸರಿಪಡಿಸಲಾಗುವುದು. ಇದಕ್ಕಾಗಿ ಉತ್ತರ ಪ್ರದೇಶದ ಮಾದರಿಯನ್ನು ಅನುಸರಿಸಲಾಗುವುದು ಎಂದರು.

ಡಿಸೆಂಬರ್ 27ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!