
ಬೆಂಗಳೂರು: ರಾಜ್ಯದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಮಹತ್ವದ ರಿಯಾಯಿತಿ ಘೋಷಿಸಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬಾಕಿಯಾಗಿರುವ ದಂಡ ಮೊತ್ತದ ಮೇಲೆ 50% ರಿಯಾಯಿತಿ ನೀಡಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಈ ತೀರ್ಮಾನದಿಂದ ಲಕ್ಷಾಂತರ ವಾಹನಚಾಲಕರಿಗೆ ಖುಷಿಯ ಸುದ್ದಿ ಸಿಕ್ಕಿದಂತಾಗಿದೆ.
ಸರ್ಕಾರದ ಆದೇಶದಂತೆ ನಾಳೆಯಿಂದಲೇ ಅಂದರೆ ಸೆಪ್ಟೆಂಬರ್ 21ದಿಂದಲೇ ರಾಜ್ಯದಾದ್ಯಂತ 50% ದಂಡ ರಿಯಾಯಿತಿ ಯೋಜನೆ ಜಾರಿಗೆ ಬರಲಿದೆ. ಈ ವಿಶೇಷ ಅವಕಾಶ ಡಿಸೆಂಬರ್ 12 ರವರೆಗೆ ಮಾತ್ರ ಲಭ್ಯವಿರಲಿದೆ. ಚಾಲಕರು ಈ ಅವಧಿಯೊಳಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು 50% ರಿಯಾಯಿತಿಯಲ್ಲಿ ಪಾವತಿಸಬಹುದು.
ಸಂಚಾರ ದಂಡ ರಿಯಾಯಿತಿ ಕುರಿತಂತೆ ಸಾರಿಗೆ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ, ಸರ್ಕಾರವು ಅದನ್ನು ಅಂಗೀಕರಿಸಿ ತಕ್ಷಣ ಜಾರಿಗೆ ತರಲು ಆದೇಶ ಹೊರಡಿಸಿದೆ. ಕಳೆದ ಬಾರಿ ದಂಡ ರಿಯಾಯಿತಿ ನೀಡಿದಾಗ ಸರ್ಕಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದ ಕಾರಣ, ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಒಬ್ಬ ಚಾಲಕರಿಗೆ ₹2,000 ದಂಡ ಬಾಕಿ ಇದೆ ಎಂದರೆ ಅವರಿಗೆ 50% ರಿಯಾಯಿತಿ ಅನ್ವಯಿಸಿ ಕೇವಲ ₹1,000 ಪಾವತಿಸಿದರೆ ಕೇಸ್ ಕ್ಲಿಯರ್ ಆಗುತ್ತದೆ. ಕಳೆದ ಕೆಲವು ತಿಂಗಳಲ್ಲಿ ಟ್ರಾಫಿಕ್ ಇ-ಚಲಾನ್‌ಗಳ ಬಾಕಿ ಪ್ರಕರಣಗಳು ಹೆಚ್ಚಾಗಿದ್ದವು. ದಂಡದ ಮೊತ್ತ ಹೆಚ್ಚಿರುವುದರಿಂದ ನಾಗರಿಕರು ಪಾವತಿಸಲು ಹಿಂಜರಿದಿದ್ದರು. ಈಗಿನ ರಿಯಾಯಿತಿ ಘೋಷಣೆ ಸಾಮಾನ್ಯ ಚಾಲಕರಿಗೆ ದೊಡ್ಡ ಸೌಲಭ್ಯ ನೀಡಲಿದೆ.
ಸರ್ಕಾರದ ಅಧಿಕೃತ ಕರ್ನಾಟಕ ಒನ್ ಅಥವಾ ಇ-ಚಲನ್ ಪೋರ್ಟಲ್ ವೆಬ್‌ಸೈಟ್‌ಗಳ ಮೂಲಕ ನಿಮ್ಮ ವಾಹನದ ಟ್ರಾಫಿಕ್ ದಂಡವನ್ನು ಪರಿಶೀಲಿ ಪಾವತಿಸಬಹುದು. ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಸರ್ಚ್ ಕೊಡಿ. ನಿಮ್ಮ ವಾಹನದ ಮೇಲೆ ಬಾಕಿ ಇರುವ ದಂಡದ ಮೊತ್ತ ಕಾಣಿಸುತ್ತದೆ. ನಿಮ್ಮ ಬಳಿ ಚಲನ್ ಸಂಖ್ಯೆ ಇದ್ದರೆ, ಅದನ್ನು ನೇರವಾಗಿ ನಮೂದಿಸಬಹುದು. ಅಧಿಕೃತ ವೆಬ್‌ತಾಣ ಇಲ್ಲಿದೆ: https://kspapp.ksp.gov.in/ksp/api/traffic-challan/home
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ