
ಬೆಂಗಳೂರು: ಬೆಂಗಳೂರಿನ ಡೈರಿ ಸರ್ಕಲ್ ಬಳಿ ಏಳು ಕೋಟಿ ಕ್ಯಾಶ್ ರಾಬರಿ ಪ್ರಕರಣದಲ್ಲಿ CMS ಸಿಬ್ಬಂದಿ ಮೇಲೆಯೇ ಪೊಲೀಸರಿಗೆ ಪ್ರೈಮ್ ಸಸ್ಪೆಕ್ಟ್ ಎಂಬ ಅನುಮಾನ ಬಲವಾಗಿದೆ. ಹಾಗಾದ್ರೆ CMS ಸಿಬ್ಬಂದಿ ಮೇಲೆ ಪೊಲೀಸರಿಗೆ ಯಾಕಿಷ್ಟು ಅನುಮಾನ? ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಕಾರಣಗಳಿವೆ. ಕ್ಯಾಶ್ ಸಾಗಿಸ್ತಿದ್ದ ವಾಹನ ಬಿಚ್ಚಿಡ್ತಿದೇ ಹಲವು ವಿಚಾರಗಳು. ವಾಹನದ ಕೆಲ ತಾಂತ್ರಿಕ ಸಮಸ್ಯೆ ರಾಬರಿಗೆ ವರದಾನ ಆಯ್ತಾ? ಕೋಟಿ ಕೋಟಿ ಹಣ ಸಾಗಿಸೋ CMS ವಾಹನದಲ್ಲಿದೆ ಆಟೋಮ್ಯಾಟಿಕ್ ಲಾಕಿಂಗ್ ಸಿಸ್ಟಮ್. ಹಿಂದಿನ ಡೋರ್ ನ ಬಳಿ ಒಂದು ಬಟನ್ ಇರುತ್ತದೆ. ಆ ಬಟನ್ ಒತ್ತಿದ್ರೆ ಲಾಕರ್ ಆಟೋಮ್ಯಾಟಿಕ್ ಲಾಕ್ ಆಗುತ್ತೆ. ನಂತರ ಏನೇ ಮಾಡಿದ್ರೂ ಹಿಂಬದಿಯ ದೊಡ್ಡ ಡೋರ್ ಓಪನ್ ಮಾಡೋಕೆ ಆಗಲ್ಲ. ಅಲ್ಲದೇ ಎಲ್ಲಾ ವಾಹನಗಳಲ್ಲಿಯೂ ಸೈರನ್ ಇರಲಿದೆ. ಈ ರೀತಿ ಘಟನೆಗಳು ನಡೆದಾಗ ಸೈರನ್ ಜೋರಾಗಿ ಬಡಿದುಕೊಳ್ಳುತ್ತೆ. ಆದ್ರೆ ಈ ವಾಹನದಲ್ಲಿ ಇತ್ತೀಚೆಗೆ ಕೆಲ ತಾಂತ್ರಿಕ ಸಮಸ್ಯೆ ಆಗಿತ್ತು. ಇದೂ ಕೂಡ ರಾಬರಿಗೆ ಸಹಾಯ ಅನ್ನೋ ಅನುಮಾನ ಇದೆ.
ಆಟೋಮ್ಯಾಟಿಕ್ ಲಾಕ್ ಬಗ್ಗೆ ಗೊತ್ತಿದ್ರೂ ಅದರ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ. ಹೀಗಾಗಿ ಎಲ್ಲವೂ ಗೊತ್ತಿದ್ದೂ CMS ಸಿಬ್ಬಂದಿ ಯಾಕೆ ಸುಮ್ನಿದ್ರು? ಹೀಗೆ CMS ಸಿಬ್ಬಂದಿ ಮೇಲೆ ಪೊಲೀಸರಿಗೆ ಹಲವು ಅನುಮಾನಗಳು ಇದೆ. ಇನ್ನೂ ಕೂಡ CMS ಸಿಬ್ಬಂದಿಯನ್ನ ಠಾಣೆಯಲ್ಲಿಟ್ಟು ವಿಚಾರಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸಿದ್ದಾಪುರ ಠಾಣೆಯಲ್ಲಿCMS ಸಿಬ್ಬಂದಿಯನ್ನ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ವಾಹನ ಚಾಲಕ ಬಿನೋದ್ ಕುಮಾರ್, ಭದ್ರತಾ ಸಿಬ್ಬಂದಿ ರಾಜಣ್ಣ ಮತ್ತು ತಮ್ಮಯ್ಯ ಮತ್ತು ಎಟಿಎಂಗಳಿಗೆ ಹಣವನ್ನು ಲೋಡ್ ಮಾಡುವ ಜವಾಬ್ದಾರಿಯುತ ನಗದು ಕಸ್ಟೋಡಿಯನ್ ಅಫ್ತಾಬ್ CMS ವಾಹನದಲ್ಲಿದ್ದವರು.
ಇನ್ನು ಕರ್ನಾಟಕ ಗಡಿ ಭಾಗಗಳಲ್ಲಿ ಆರೋಪಿಗಳಿಗೆ ತೀವ್ರ ಶೋಧ ನಡೆಯುತ್ತಿದೆ. ಭಟ್ಟರಹಳ್ಳಿ ಸಿಗ್ನಲ್ ನಿಂದ ಭೈರತಿ ಕಡೆಗೆ ಕಾರ್ ಪಾಸ್ ಆಗಿರೊ ಮಾಹಿತಿ ಇದ್ದು, ಸುಮಾರು 50ಕ್ಕೂ ಹೆಚ್ಚು ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ. ಸಿಸಿಬಿ ಪೊಲೀಸರಿಂದಲೂ ದರೋಡೆಕೋರರಿಗೆ ತಲಾಶ್ ನಡೆಯುತ್ತಿದೆ. ಸಿಕ್ಕಿರುವ ಸಿಸಿಟಿವಿ ಆಧಾರಿಸಿ ಕಾರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎರಡು ತಂಡಗಳಾಗಿ ಗ್ಯಾಂಗ್ ದರೋಡೆ ಮಾಡಿರೋ ಶಂಕೆ ಬಲವಾಗಿದೆ. ಯಾಕೆಂದರೆ ಒಂದು ಕಾರಿನಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಕರೆದೊಯ್ದಿದ್ದ ಗ್ಯಾಂಗ್, ಮತ್ತೊಂದು ಗ್ಯಾಂಗ್ ಹಣ ತುಂಬಿಕೊಂಡು ಎಸ್ಕೇಪ್ ಆಗಿತ್ತು. ಈ ಎರಡು ಗ್ಯಾಂಗ್ ಬೇರೆ ಜಾಗದಲ್ಲಿ ಒಂದಾಗಿ ಎಸ್ಕೇಪ್ ಆಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿದ್ದರಿಂದ ಕಾರ್ ಪತ್ತೆ ಸವಾಲಾಗಿದೆ.
ಸಿಎಂಎಸ್ ಸೆಕ್ಯೂರಿಟಿ ಸಿಬ್ಬಂದಿಗೆ ರಾತ್ರಿಯಿಡಿ ವಿಚಾರಣೆ ಬಿಸಿ ಮುಟ್ಟಿಸಲಾಗಿದೆ. ಎಲ್ಲಾ ಆಯಾಮಗಳಲ್ಲೂ ನಾಲ್ವರ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆದರೆ ಇದರಲ್ಲಿ ನಮ್ಮ ಪಾತ್ರ ಇಲ್ಲ ಎನ್ನುತ್ತಿರುವ ಸಿಬ್ಬಂದಿ. ಸಿಎಂಎಸ್ ನ ಅಧಿಕಾರಿಗಳಿಂದಲೂ ಅನೇಕ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಬ್ಬಂದಿಗಳ ಕೆಲ ದಿನಗಳ ಆ್ಯಕ್ಟಿವಿಟಿ ಪರಿಶೀಲನೆ ನಡೆಸಲಾಗುತ್ತಿದೆ. ಇತ್ತೀಚೆಗೆ ಕೆಲಸ ಬಿಟ್ಟಿರೋರ ಬಗ್ಗೆ, ಅನುಮಾನಸ್ಪದ ಸಿಬ್ಬಂದಿ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗಿದೆ.ಇತ್ತೀಚೆಗೆ ಕೆಲಸಕ್ಕೆ ಸೇರಿರೋ ಸಿಬ್ಬಂದಿಗಳ ಡಿಟೇಲ್ಸ್ ಕಲೆ ಹಾಕಿ ಯಾರಿಗಾದ್ರೂ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಇದ್ಯಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನು ಕೆಲಸ ಬಿಟ್ಟಿರುವವರು ಮತ್ತು ಸೇರಿದವರ ಲಿಸ್ಟ್ ಕೇಳಿದ್ದು, ಕಂಪನಿಯೊಂದಿಗೆ ಯಾರಾದರೂ ಜಗಳ ತೆಗೆದು ಕೆಲಸ ಬಿಟ್ಟಿದರಾ ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈ ಹಿಂದೆ ನಡೆದ ದರೋಡೆ ಪ್ರಕರಣಗಳ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ. ಇತ್ತೀಚೆಗೆ ಇಂತಹ ಪ್ರಕರದಲ್ಲಿ ಜೈಲಿಂದ ಹೊರಬಂದವರ ಬಗ್ಗೆ ಕೂಡ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಪ್ರಕರಣದಲ್ಲಿ ಇದುವರೆಗೂ 20 ಕ್ಕೂ ಹೆಚ್ಚು ಜನರನ್ನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆದರೂ ಆರೋಪಿಗಳ ಸುಳಿವು ಪತ್ತೆಯಾಗಿಲ್ಲ. ಬ್ಯಾಂಕ್ ಸಿಬ್ಬಂದಿ ಮತ್ತು ಸಿಎಂಎಸ್ ಸಿಬ್ಬಂದಿಗಳ ವಿಚಾರಣೆ ಕೂಡ ನಡೆಸಲಾಗಿದೆ. ಘಟನೆಯ ಟೈಂ ಲೈನ್ ಮ್ಯಾಚ್ ಮಾಡಿ ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಆದರೆ ವಿಚಾರಣೆ ವೇಳೆ ರಾಬರಿ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಇನ್ನೊಂದೆಡೆ ತಂಡಗಳಾಗಿ ರಾಜ್ಯದ ಗಡಿಭಾಗಗಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಹೊಸಕೋಟೆ,ತಮಿಳುನಾಡು ಭಾಗಗಳಲ್ಲಿ ಪೊಲೀಸರು ಹುಡುಕಾಡ್ತಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳಿಂದ ಹುಡುಕಾಟ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ