ಭತ್ತ ಬೆಳೆಗಾರರಿಗೆ BSY ಸರ್ಕಾರ ಗುಡ್ ನ್ಯೂಸ್: ಬೆಂಬಲ‌ ಬೆಲೆ ಘೋಷಣೆ

By Suvarna News  |  First Published Jan 6, 2020, 6:53 PM IST

ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರ ಭತ್ತ ಬೆಳೆಗಾರರಿಗೆ ಗುಡ್ ನ್ಯೂಸ್ ನೀಡಿದೆ. ಭತ್ತಕ್ಕೆ ಬೆಂಬಲ‌ ಬೆಲೆ ಘೋಷಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಬೆಂಬಲ ಬೆಲೆ ಎಷ್ಟು..? ಈ ಕೆಳಗಿನಂತಿದೆ.


ಬೆಂಗಳೂರು, [ಜ.06]: ರಾಜ್ಯ ಸರ್ಕಾರ ಭತ್ತಕ್ಕೆ 200 ರೂ. ಬೆಂಬಲ ಬೆಲೆ ಘೋಷಣೆ ಮಾಡಿದೆ. ಇಂದು [ಸೋಮವಾರ] ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

‘ರೈತರಿಂದ ಲಂಚ ಕೇಳಿದ್ರೆ ಕಠಿಣ ಕ್ರಮ’

Tap to resize

Latest Videos

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳು, ರೈತರ ನಿಯೋಗ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಬಾರಿ ಬಜೆಟ್ ಲ್ಲಿ ರೈತರಿಗೆ ಆದ್ಯತೆ ಎಂದ ಸಿಎಂ BSY : ಬಂಪರ್ ಕೊಡುಗೆ ನಿರೀಕ್ಷೆ

ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಸದ್ಯ ಇದೀಗ ಭತ್ತ ಕಟಾವ್ ಮಾಡಲಾಗಿದ್ದು ಬೆಲೆ ಇಲ್ಲದೆ ತಲೆ ಮೇಲೆ ಕೈಹೊತ್ತು ಕುಳಿತ್ತಿದ್ದಾರೆ.

click me!